ಮಜ್ಜಿಗೆ ಹುಳಿ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು: ಅಡುಗೆ ಮಾಡುವುದಕ್ಕೆ ಬೇಸರ ಅನಿಸಿದಾಗ ಸುಲಭವಾಗಿ ತಯಾರಾಗುವುದು ಮಜ್ಜಿಗೆ ಹುಳಿ. ಇದು ಅನ್ನಕ್ಕೆ ಹೇಳಿಮಾಡಿಸಿದ್ದು. ಮಜ್ಜಿಗೆ ಹುಳಿ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನ ಇಲ್ಲಿದೆ ನೋಡಿ


ಸಾಮಗ್ರಿಗಳು


1. ಬೂದುಗುಂಬಳ ಕಾಯಿ ಹೆಚ್ಚಿದ್ದು -  1 ಕಪ್

2. ಶುಂಠಿ -1 ಇಂಚು

3. ಹಸಿಮೆಣಸಿನ ಕಾಯಿ-2

4. ಜೀರಿಗೆ -   5ಚಮಚ

5. ತೆಂಗಿನ ತುರಿ -1/4 ಕಪ್

6. ಕೊತ್ತಂಬರಿ ಸೊಪ್ಪು - ಸ್ವಲ್ಪ

7. ಅರಿಶಿನ - 1/2  ಸ್ಪೂನ್

8. ಮೊಸರು -ಒಂದು ಕಪ್


ಒಗ್ಗರಣೆಗೆ


1. ಎಣ್ಣ-1 ಚಮಚ

2. ಸಾಸಿವೆ -  ಸ್ವಲ್ಪ

3. ಕರಿಬೇವು - ಸ್ವಲ್ಪ

4. ಇಂಗು- ಸ್ವಲ್ಪ

5. ಒಣಮೆಣಸಿನ ಕಾಯಿ - 1



ಮಾಡುವ ವಿಧಾನ


ಬೂದುಗುಂಬಳದ ಹೋಳುಗಳನ್ನು ಸ್ವಲ್ಪ ಉಪ್ಪು ಹಾಕಿ ಒಂದು ಕಪ್ ನೀರೂ ಹಾಕಿ ಬೇಯಿಸಿ. ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಹಸಿಮೆಣಸಿನ ಕಾಯಿ, ಜೀರಿಗೆ ಹಾಕಿ ಹುರಿಯಬೇಕು. ಕೊಂಚ ತಣ್ಣಗಾದ ಮೇಲೆ ಇದರ ಜೊತೆಗೆ ಶುಂಠಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಅರಿಶಿನ ಸೇರಿಸಿ ರುಬ್ಬಿಕೊಳ್ಳಿ.


ರುಬ್ಬಿದ ಈ ಮಿಶ್ರಣವನ್ನು ಬೇಯುತ್ತಿರುವ ಬೂದುಗುಂಬಳ ಕಾಯಿಗೆ ಹಾಕಿ ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಸ್ಟವ್ ಆಫ್ ಮಾಡಿ ಮೊಸರನ್ನು ಸೇರಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಾನುಗಳನ್ನು ಸೇರಿಸಿ, ಬಾಡಿಸಿ ಮಜ್ಜಿಗೆ ಹುಳಿಗೆ ಸೇರಿಸಿದರೆ ಮಜ್ಜಿಗೆ ಹುಳಿ ಸಿದ್ಧ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈ

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್