ಇಡ್ಲಿ ಚಾಟ್ ಮಸಾಲಾ

ಬೇಕಾಗುವ ಸಾಮಾಗ್ರಿಗಳು


2 ಕಪ್ ಇಡ್ಲಿ ತುಂಡುಗಳು

2 ಚಮಚ ತುಪ್ಪ

1 ಚಮಚ ಖಾರ ಪುಡಿ

¼ ಕಪ್ ಈರುಳ್ಳಿ (ಹೆಚ್ಚಿದ್ದು)

¼ ಕಪ್ ಟೊಮ್ಯಾಟೋ (ಹೆಚ್ಚಿದ್ದು)

2 ಚಮಚ ಹಸಿರು ಚಟ್ನಿ

2 ಚಮಚ ಮೊಸರು

2 ಚಮಚ ಸಿಹಿ ಚಟ್ನಿ

ಚಟ್ ಮಸಾಲಾ

2 ಚಮಚ ಕೊತ್ತಂಬರಿ ಸೊಪ್ಪು (ಹೆಚ್ಚಿದ್ದು)

ಹಸಿರು ಚಟ್ನಿ

ಪುದೀನ ಮತ್ತು ಕೊತ್ತಂಬರಿ ಚಟ್ನಿ - 

½  ಕಪ್ ಪುದೀನ ಎಲೆಗಳು (ಹೆಚ್ಚಿದ್ದು)

1/4 ಕಪ್ ಕೊತ್ತಂಬರಿ ಸೊಪ್ಪು

2 ಹಸಿರು ಮೆಣಸಿನಕಾಯಿ (ಹೆಚ್ಚಿದ್ದು)

½ ನಿಂಬೆ ರಸ

ಉಪ್ಪು

ಸಿಹಿ ಹುಣಿಸೇಹಣ್ಣು ಮತ್ತು ಖರ್ಜುರದ ಚಟ್ನಿ

1/4 ಕಪ್ ಹುಣಿಸೇಹಣ್ಣು

1/4 ಕಪ್ ಬೀಜರಹಿತ ಖರ್ಜುರ

1/4 ಕಪ್ ಬೆಲ್ಲ

1/4 ಚಮಚ ಒಣ ಶುಂಠಿಯ ಪುಡಿ

1/2 ಚಮಚ ಧನಿಯಾ ಪುಡಿ

1/2 ಚಮಚ ಜೀರಿಗೆ ಪುಡಿ


ಮಾಡುವ ವಿಧಾನ -


- ಇಡ್ಲಿಗಳನ್ನು ತಣ್ಣಗಾಗಿಸಿ ಮತ್ತು 4 ತುಂಡು ಮಾಡಿ
- ನಂತರ ಬಾಣಲೆಯಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ ಅದಕ್ಕೆ ಇಡ್ಲಿಗಳನ್ನು ತುಂಡುಗಳನ್ನು ಹಾಕಿ ಫ್ರೈ ಮಾಡಿ
- ಅದರ ಮೇಲೆ ಖಾರ ಪುಡಿಯನ್ನು ಸಿಂಪಡಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಒಂದು ಬಟ್ಟಲಿಗೆ ಹುರಿದ ಇಡ್ಲಿಯನ್ನು ತೆಗೆದುಕೊಂಡು, ಹೆಚ್ಚಿದ ಈರುಳ್ಳಿ, ಟೊಮೆಟೊಗಳನ್ನು ಹಾಕಿ
- ನಂತರ ಹಸಿರು ಚಟ್ನಿ, ಸಿಹಿ ಚಟ್ನಿ, ಮತ್ತು ಮೊಸರು ಹಾಕಿ
- ಸ್ವಲ್ಪ ಚಟ್ ಮಸಾಲಾ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸವಿಯಿರಿ.

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್