ಸ್ವೀಟ್ ಕಾರ್ನ್ ಪಲಾವ್ ಮಾಡಿ ಸವಿಯಿರಿ...

ದಿನವೂ ಒಂದೇ ತರಹದ ಪದಾರ್ಥಗಳನ್ನು ಮಾಡಿ ಬೇಸರ ಬಂದಿದ್ದರೆ ಒಂದು ದಿನ ಊಟಕ್ಕೆ ಸ್ವೀಟ್ ಕಾರ್ನ್ ಪಲಾವ್ ಮಾಡಿಕೊಳ್ಳಿ. ಕಡಿಮೆ ಸಮಯದಲ್ಲಿ 
ಊಟ ರೆಡಿಯಾಗುತ್ತದೆ ಮತ್ತು ಯಾವ ಪದಾರ್ಥಗಳನ್ನು ಮಾಡುವುದು ಎಂದು ಯೋಚಿಸುವುದೂ ತಪ್ಪುತ್ತದೆ. ಸ್ವೀಟ್ ಕಾರ್ನ್ ಯಾರಿಗೆ ತಾನೇ ಇಷ್ಟವಿಲ್ಲ! 

ಎಲ್ಲರೂ ಇದನ್ನು ಇಷ್ಟಪಟ್ಟು ತಿನ್ನುವುದರಿಂದ ಹಾಗೂ ಇದು ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ನೀವು ಪಲಾವ್‌ನಲ್ಲಿ ಸ್ವೀಟ್ ಕಾರ್ನ್ ಅನ್ನು 

ಬಳಸಬಹುದು. ಈ ಸ್ವೀಟ್ ಕಾರ್ನ್ ಪಲಾವ್ ಅನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.

ಬೇಕಾಗುವ ಸಾಮಗ್ರಿಗಳು:


ಭಾಸುಮತಿ ಅಕ್ಕಿ - 1 ಕಪ್

ಸ್ವೀಟ್ ಕಾರ್ನ್ - 1 ಕಪ್

ಈರುಳ್ಳಿ - 1

ಕ್ಯಾಪ್ಸಿಕಮ್ - 1

ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ

ತುಪ್ಪ - 2-3 ಚಮಚ

ಲವಂಗದ ಎಲೆ - 1

ಸ್ಟಾರ್ - 1

ಲವಂಗ - 3-4

ಚೆಕ್ಕೆ - 1-2 ಇಂಚು

ಕಾಳುಮೆಣಸು - 1 ಚಮಚ

ಜೀರಿಗೆ - 1 ಚಮಚ

ಹಸಿಮೆಣಸು - 2

ಗರಂ ಮಸಾಲಾ - 1 ಚಮಚ

ಹಾಲು - 1 ಕಪ್

ಕೊತ್ತಂಬರಿ ಸೊಪ್ಪು - ಸ್ವಲ್ಪ

ಉಪ್ಪು - ರುಚಿಗೆ

ಮಾಡುವ ವಿಧಾನ:


ಅಕ್ಕಿಯನ್ನು 30 ನಿಮಿಷ ನೀರು ಹಾಕಿ ನೆನೆಸಿಡಬೇಕು. ಈರುಳ್ಳಿ, ಕ್ಯಾಪ್ಸಿಕಮ್, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ಹೆಚ್ಚಿಟ್ಟುಕೊಳ್ಳಿ. ಒಂದು ಕುಕ್ಕರ್ 

ತೆಗೆದುಕೊಂಡು ಅದರಲ್ಲಿ 3-4 ಚಮಚ ತುಪ್ಪವನ್ನು ಹಾಕಿ ಅದು ಬಿಸಿಯಾದಾಗ ಲವಂಗದ ಎಲೆ, ಸ್ಟಾರ್, ಲವಂಗ, ಕಾಳುಮೆಣಸು ಮತ್ತು ಜೀರಿಗೆಯನ್ನು 

ಕ್ರಮವಾಗಿ ಹಾಕಿ 1 ನಿಮಿಷ ಹುರಿಯಿರಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿದು ಅದಕ್ಕೆ ಹೆಚ್ಚಿದ ಹಸಿಮೆಣಸು 

ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಸ್ವಲ್ಪ ಹುರಿದ ಮೇಲೆ ಕ್ಯಾಪ್ಸಿಕಮ್, ಸ್ವೀಟ್ ಕಾರ್ನ್, ಗರಂ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು 

ಸೇರಿಸಿ 1 ನಿಮಿಷ ಹುರಿಯಿರಿ.

ಹುರಿದ ಮಿಶ್ರಣಕ್ಕೆ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಅದಕ್ಕೆ 1 ಕಪ್ ಹಾಲು ಹಾಗೂ 1 ಕಪ್ ನೀರನ್ನು ಸೇರಿಸಿ ಮಿಕ್ಸ್ ಮಾಡಿದ 

ನಂತರ ಕುಕ್ಕರ್‌ನ ಮುಚ್ಚಳವನ್ನು ಹಾಕಿ 2-3 ಸೀಟಿ ಹಾಕಿಸಿ ಸ್ಟೌ ಆಫ್ ಮಾಡಿ. ಸ್ವಲ್ಪ ಸಮಯದ ನಂತರ ಕುಕ್ಕರ್ ಮುಚ್ಚಳವನ್ನು ತೆರೆದು ಪಲಾವ್ ಅನ್ನು 

ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡರೆ ಸ್ವೀಟ್ ಕಾರ್ನ್ ಪಲಾವ್ ರೆಡಿ. ನೀವೂ ಒಮ್ಮೆ ಸ್ವೀಟ್ ಕಾರ್ನ್ ಪಲಾವ್ ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್