ಈರುಳ್ಳಿ ಚಟ್ನಿಯ ಸವಿ ನೋಡಿದ್ದೀರಾ..?
ಈರುಳ್ಳಿ ಚಟ್ನಿ ಆರೋಗ್ಯಕ್ಕೂ ಹಿತಕರ ಮಾಡುವುದಕ್ಕೂ ಸುಲಭ. ಇದನ್ನು ದೋಸೆ, ಇಡ್ಲಿ, ಅನ್ನದ ಜತೆ ಕೂಡ ಸೇವಿಸಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಟೊಮೆಟೊ-1/2
ಎಣ್ಣೆ-1 ಟೀ ಚಮಚ
ಒಣ ಕೆಂಪುಮೆಣಸು-5-6
ಬೆಳ್ಳುಳ್ಳಿ-4 ಎಸಳು
ಜೀರಿಗೆ-1/2 ಚಮಚ
ಹುಳಿ-1 ಟೀ ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ನೀರು-2-3 ಚಮಚ
ಈರುಳ್ಳಿ ಹಾಗೂ ಟೊಮೆಟೋವನ್ನು ಚಿಕ್ಕಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಒಣಮೆಣಸು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿಯಿರಿ. ಇದು ತಣ್ಣಗಾದ ನಂತರ ಟೊಮೆಟೊ, ಹುಳಿ, ಉಪ್ಪು, ನೀರು ಸೇರಿಸಿ ಚೆನ್ನಾಗಿ ರುಬ್ಬಿ.
ಒಗ್ಗರಣೆಗೆ
ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ ಇದನ್ನು ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿದರೆ ಈರುಳ್ಳಿ ಚಟ್ನಿ ರೆಡಿ..
Comments
Post a Comment