ಸರಳ ಮತ್ತು ರುಚಿಕರ ಬ್ರೆಡ್ ಪಿಜ್ಜಾ
ಬೇಕಾಗುವ ಸಾಮಾಗ್ರಿಗಳು -
ಬ್ರೆಡ್- 4 ಸ್ಲೈಸ್
ಚಿಕ್ಕದಾಗಿ ಹೆಚ್ಚಿದ ಈರುಳ್ಳಿ- 1/4 ಕಪ್
ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಮ್- 1/4 ಕಪ್
ಚೀಸ್ - 1/4 ಕಪ್
ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್- 4 ಚಮಚ
ಕಾಳುಮೆಣಸಿನಪುಡಿ ಅಥವಾ ಇಟಾಲಿಯನ್ ಮಸಾಲೆ- 1 ಚಿಟಿಕೆ
ಚಿಲ್ಲಿ ಫ್ಲೇಕ್ಸ್- ಸ್ವಲ್ಪ
ಕ್ಯಾಬೇಜ್ ಎಲೆಗಳು- 4 ಚಮಚ
ಮಾಯೊನೀಸ್ - 4 ಚಮಚ
ಮಾಡುವ ವಿಧಾನ -
- ಮೊದಲು ಬ್ರೆಡ್‍ನ ಒಂದು ಬದಿಗೆ 1 ಚಮಚದಷ್ಟು ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್ ಸವರಿಕೊಳ್ಳಿ. ಅದರ ಮೇಲೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಮ್ ತುಂಡುಗಳು, ಕ್ಯಾಬೇಜ್ ಎಲೆಗಳನ್ನು ಹಾಕಿ.
- ಅದರ ಮೇಲೆ ಕಾಳುಮೆಣಸಿನಪುಡಿ ಮತ್ತು ಚಿಲ್ಲಿ ಫ್ಲೇಕ್ಸ್ ಹರಡಿ.
- ನಂತರ ಅದರ ಮೇಲೆ 1 ಚಮಚದಷ್ಟು ಮಾಯೊನೀಸ್ ಮತ್ತು ಚೀಸ್ ಹಾಕಿ ಹರಡಿ.
- ನಂತರ ಒಲೆಯ ಮೇಲೆ ತವಾ ಇಟ್ಟು ಬಿಸಿಯಾದ ಬಳಿಕ ಅದಕ್ಕೆ ಸ್ವಲ್ಪ ತುಪ್ಪ ಸವರಿ ಚೀಸ್ ಕರಗುವವರೆಗೆ ಅಂದ್ರೆ 5-7 ನಿಮಿಷಗಳ ಕಾಲ ಒಲೆಯಲ್ಲಿ ಬಿಸಿ ಮಾಡಿ. ಒಲೆಯಿಂದ ತೆಗೆದ ಬ್ರೆಡ್ ಪಿಜ್ಜಾವನ್ನು ಬಿಸಿಬಿಸಿ ಇರುವಾಗಲೇ ಸವಿಯಿರಿ.
Comments
Post a Comment