ಬೆಳಿಗ್ಗಿನ ತಿಂಡಿಗೆ ರುಚಿಯಾದ ಹೆಸರುಬೇಳೆ ಕಿಚಡಿ!

ಬಾಸುಮತಿ ಅಕ್ಕಿ - 1/2 ಕಪ್ ಹೆಸರುಬೇಳೆ - 1/2 ಕಪ್ ಇಂಗು - 1/4 ಟೀಚಮಚ ರುಚಿಗೆ ತಕ್ಕಷ್ಟು ಉಪ್ಪು ಅರಿಶಿನ ಪುಡಿ - 1 ಟೀಚಮಚ ತುಪ್ಪ - 1 ಟೀಚಮಚ ಜೀರಿಗೆ - 1 ಟೀಚಮಚ ಜೀರಿಗೆ ಪುಡಿ - 1 ಟೀಚಮಚ.

ಒಂದು ಪಾತ್ರೆಗೆ ಬಾಸುಮತಿ ಅಕ್ಕಿ, ಹೆಸರುಬೇಳೆ ಹಾಕಿ. ಇವೆರಡನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪಕ್ಕದಲ್ಲಿಡಿ. ಬಿಸಿಯಾದ ಕುಕ್ಕರ್‌ಗೆ ತುಪ್ಪವನ್ನು ಹಾಕಿರಿ. ಜೀರಿಗೆ ಹಾಗೂ ಇಂಗನ್ನು ಹಾಕಿ ಹುರಿಯಿರಿ. ನಂತರ ತೊಳೆದುಕೊಂಡ ಹೆಸರು ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಅರಿಶಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ. ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ರುಚಿಗೆ ತಕ್ಕಷ್ಟು  ಉಪ್ಪನ್ನು ಸೇರಿಸಿ, ಎರಡು ನಿಮಿಷದವರೆಗೆ  ಬೇಯಲು ಬಿಡಿ. ಕುಕ್ಕರ್ ಗೆ ಮುಚ್ಚಳ ಮುಚ್ಚಿ, ಸುಮಾರು 4 ಸೀಟಿ ಕೂಗಿಸಿ. ಹೀಗೆ ಮಾಡಿದರೆ ರುಚಿಯಾದ ಹೆಸರುಬೇಳೆ ಕಿಚಡಿ ರೆಡಿ.

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್