ಗರಂ ಗರಂ ರವೆ ಪಕೋಡ ಮಾಡುವ ಬಗೆ ಇಲ್ಲಿದೆ ನೋಡಿ

 ಹೊರಗೆ ಸುರಿಯುವ ಮಳೆ. ಮನೆಯ ಒಳಗಡೆ ಕುಳಿತು ಏನಾದರೂ ಬಿಸಿಬಿಸಿ ತಿನ್ನಬೇಕು ಎಂಬ ಬಯಕೆಯಾಗುತ್ತದೆ. ಕೆಲವೇ ಸಮಯದಲ್ಲಿ ಫಟಾಫಟ್ ಆಗಿ ಮಾಡಬಹುದಾದ ತಿನಿಸೆಂದರೆ ರವೆ ಪಕೋಡ.  ಮಾಡುವ ವಿಧಾನ ಇಲ್ಲಿದೆ ನೋಡಿ.



ಬೇಕಾಗುವ ಸಾಮಾಗ್ರಿ: 


ಚಿರೋಟಿ ರವೆ ರವೆ-1 ಕಪ್, ತೆಂಗಿನ ತುರಿ-ಅರ್ಧ ಕಪ್ , ಎಲೆಕೋಸು-1/2 ಕಪ್, , ಕಡ್ಲೆ ಹಿಟ್ಟು-2 ಚಮಚ, ಮೊಸರು-1 ಚಮಚ, ಅಕ್ಕಿ ಹಿಟ್ಟು-ಸ್ವಲ್ಪ, ಈರುಳ್ಳಿ-1, ಹಸಿ ಮೆಣಸಿನಕಾಯಿ-4, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.



ವಿಧಾನ: 


ರವೆಯನ್ನು ಜರಡಿಯಾಡಿಸಿ. ಎಲೆಕೋಸು, ಈರುಳ್ಳಿ ಹಾಗೂ ಹಸಿ ಮೆಣಸಿನಕಾಯಿಗಳನ್ನು ಸಣ್ಣಗೆ ಹೆಚ್ಚಿ. ಇದಕ್ಕೆ ರವೆ, ಅಕ್ಕಿ ಹಿಟ್ಟು, ಕಡ್ಲೆ ಹಿಟ್ಟು, ಮೊಸರು ಹಾಗೂ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಬೆರೆಸಿ ಕಲಸಿ. ಹತ್ತು ನಿಮಿಷಗಳ ನಂತರ ಕಾದ ಎಣ್ಣೆಯಲ್ಲಿ ಕರಿಯಿರಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್