ಬೇಗ ಬೇಗನೆ ರೆಡಿಯಾಗುವ ಬಾಂಬೆ ಸಾಗು!
ಮನೆಯಲ್ಲಿ ಪೂರಿನೋ, ಚಪಾತಿನೋ ಮಾಡಿದಾಗ ಅದಕ್ಕೆ ಏನಾದರೂ ಪಲ್ಯ ಮಾಡಬೇಕು ಎಂಬ ತಲೆಬಿಸಿಯಲ್ಲಿರುತ್ತೇವೆ. ತಕರಕಾರಿ ಸಾಗು ಮಾಡುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಈ ಬಾಂಬೆ ಸಾಗು ಪ್ರಯತ್ನಿಸಿ ನೋಡಿ. ನಿಮ್ಮ ಸಮಯವೂ ಉಳಿಯುತ್ತೆ, ರುಚಿಕರವಾಗಿಯೂ ಇರುತ್ತದೆ.
ಬೇಯಿಸಿದ ಆಲೂಗಡ್ಡೆ ೨
ಈರುಳ್ಳಿ ೧
ಬೆಳ್ಳುಳ್ಳಿ ಶುಂಟಿ ಪೇಸ್ಟ್ ೧ ಟೀಚ
ಹಸಿಮೆಣಸು ೪
ಕಡಲೆ ಹಿಟ್ಟು ೨ ಟೇ ಚ
ಟೊಮೇಟೊ ೧
ಉದ್ದಿನಬೇಳೆ ೧ ಟೀ ಚ
ಕಡಲೆಬೇಳೆ ೧ ಟೀ ಚ
ಅರಿಶಿನ ಚಿಟಿಕೆ
ಕೊತ್ತೊಂಬರಿ ಸೊಪ್ಪು
ಎಣ್ಣೆ ೧ ಚಮಚ
ಕರಿಬೇವು ಸ್ವಲ್ಪ
ಇಂಗು ಚಿಟಿಕೆ
ಸಾಸಿವೆ ೧ ಟೀ ಚ
ಉಪ್ಪು ರುಚಿಗೆ ತಕ್ಕಷ್ಟು
ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಉದ್ದಿನಬೇಳೆ, ಕಡಲೆಬೇಳೆ, ಸಾಸಿವೆ, ಇಂಗು, ಹಸಿಮೆಣಸು ಹಾಕಿ ಹುರಿಯಿರಿ.
ಉದ್ದಿನಬೇಳೆ ಮತ್ತು ಕಡಲೆಬೇಳೆ ಕೆಂಪಗಾದ ಮೇಲೆ ಅದಕ್ಕೆ ಕರಿಬೇವು, ಅರಿಶಿನ, ಶುಂಠಿ ಬೆಳ್ಳಿ ಪೇಸ್ಟ್ ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ಅದಕ್ಕೆ ಹೆಚ್ಚಿದ ಟೊಮೇಟೊ ಸೇರಿಸಿ ನಂತರ ೨ ಕಪ್ ನೀರು ಸೇರಿಸಿ ಕುದಿಸಿ.ಈಗ ಅದಕ್ಕೆ ಬೇಯಿಸಿದ ಆಲೂಗಡ್ಡೆಯ ಚೂರುಗಳು, ಉಪ್ಪು, ಸ್ವಲ್ಪ ನೀರಿನಲ್ಲಿ ಕರಗಿಸಿದ ಕಡಲೆಹಿಟ್ಟು ಸೇರಿಸಿ ಚೆನ್ನಾಗಿ ಕುದಿಸಿ.ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿ.
ಬೇಕಾಗುವ ಸಾಮಾಗ್ರಿ
ಬೇಯಿಸಿದ ಆಲೂಗಡ್ಡೆ ೨
ಈರುಳ್ಳಿ ೧
ಬೆಳ್ಳುಳ್ಳಿ ಶುಂಟಿ ಪೇಸ್ಟ್ ೧ ಟೀಚ
ಹಸಿಮೆಣಸು ೪
ಕಡಲೆ ಹಿಟ್ಟು ೨ ಟೇ ಚ
ಟೊಮೇಟೊ ೧
ಉದ್ದಿನಬೇಳೆ ೧ ಟೀ ಚ
ಕಡಲೆಬೇಳೆ ೧ ಟೀ ಚ
ಅರಿಶಿನ ಚಿಟಿಕೆ
ಕೊತ್ತೊಂಬರಿ ಸೊಪ್ಪು
ಎಣ್ಣೆ ೧ ಚಮಚ
ಕರಿಬೇವು ಸ್ವಲ್ಪ
ಇಂಗು ಚಿಟಿಕೆ
ಸಾಸಿವೆ ೧ ಟೀ ಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಉದ್ದಿನಬೇಳೆ, ಕಡಲೆಬೇಳೆ, ಸಾಸಿವೆ, ಇಂಗು, ಹಸಿಮೆಣಸು ಹಾಕಿ ಹುರಿಯಿರಿ.
ಉದ್ದಿನಬೇಳೆ ಮತ್ತು ಕಡಲೆಬೇಳೆ ಕೆಂಪಗಾದ ಮೇಲೆ ಅದಕ್ಕೆ ಕರಿಬೇವು, ಅರಿಶಿನ, ಶುಂಠಿ ಬೆಳ್ಳಿ ಪೇಸ್ಟ್ ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ಅದಕ್ಕೆ ಹೆಚ್ಚಿದ ಟೊಮೇಟೊ ಸೇರಿಸಿ ನಂತರ ೨ ಕಪ್ ನೀರು ಸೇರಿಸಿ ಕುದಿಸಿ.ಈಗ ಅದಕ್ಕೆ ಬೇಯಿಸಿದ ಆಲೂಗಡ್ಡೆಯ ಚೂರುಗಳು, ಉಪ್ಪು, ಸ್ವಲ್ಪ ನೀರಿನಲ್ಲಿ ಕರಗಿಸಿದ ಕಡಲೆಹಿಟ್ಟು ಸೇರಿಸಿ ಚೆನ್ನಾಗಿ ಕುದಿಸಿ.ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿ.
Comments
Post a Comment