ಟೊಮೆಟೊ, ಬೆಳ್ಳುಳ್ಳಿಯ ರಸಂ ಮಾಡುವುದು ಹೇಗೆ ಗೊತ್ತಾ…?
ಬಿಸಿಬಿಸಿ ಅನ್ನಕ್ಕೆ ರುಚಿಯಾದ ಟೊಮೆಟೊ ಬೆಳ್ಳುಳ್ಳಿ ರಸಂ ಇದ್ದರೆ, ಊಟ ಹೊಟ್ಟೆಗೆ ಸೇರಿದ್ದೆ ತಿಳಿಯುವುದಿಲ್ಲ. ರುಚಿಯಾದ ಟೊಮೆಟೊ, ಬೆಳ್ಳುಳ್ಳಿ ರಸಂ ಮಾಡುವುದು ಹೇಗೆ ಗೊತ್ತಾ…? ಇಲ್ಲಿದೆ ನೋಡಿ ವಿಧಾನ.
500 ಗ್ರಾಂ ಟೋಮೆಟೊ ಹಣ್ಣು
5-6 ಬೆಳ್ಳುಳ್ಳಿ ಎಸಳು ಹದವಾಗಿ ಕುಟ್ಟಿದ್ದು
ರುಚಿಗೆ ತಕ್ಕಷ್ಟು ಉಪ್ಪು
1 ಚಮಚ ಕಾಳು ಮೆಣಸು
ಸಣ್ಣ ತುಂಡು ಶುಂಠಿ ತುರಿ
1 ಚಮಚ ರಸಂ ಪುಡಿ
2 ಟೀ ಚಮಚ-ಅರಿಶಿನ ಪುಡಿ
1 ಟೀ ಚಮಚ ಕೆಂಪು ಮೆಣಸಿನ ಪುಡಿ
ಕುಕ್ಕರ್ ಗೆ ಕತ್ತರಿಸಿದ ಟೊಮೆಟೊ, ಬೆಳ್ಳುಳ್ಳಿ, ಕಾಳುಮೆಣಸು, ಶುಂಠಿ, ಉಪ್ಪು 4 ಕಪ್ ನೀರು ಸೇರಿಸಿ 2 ವಿಷಲ್ ಬರಿಸಿ.ಇದು ತಣ್ಣಗಾದ ನಂತರ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ.
ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ರುಬ್ಬಿಕೊಂಡ ಟೊಮೆಟೊ ಮಿಶ್ರಣ, ಅರಿಶಿನ ಪುಡಿ, ರಸಂ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ.
ನಂತರ ಒಂದು ಸಣ್ಣ ಪಾತ್ರೆಗೆ 2 ಚಮಚ ತುಪ್ಪ ಹಾಕಿ ಸಾಸಿವೆ, ಇಂಗು ಕರಿಬೇವು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಸಿದ್ದಪಡಿಸಿಕೊಳ್ಳಿ. ಇದನ್ನು ಟೊಮೆಟೋ ಮಿಶ್ರಣಕ್ಕೆ ಸೇರಿಸಿದರೆ ಟೊಮೆಟೊ, ಬೆಳ್ಳುಳ್ಳಿ ರಸಂ ಸಿದ್ಧ.
ಬೇಕಾಗುವ ಸಾಮಾಗ್ರಿ
500 ಗ್ರಾಂ ಟೋಮೆಟೊ ಹಣ್ಣು
5-6 ಬೆಳ್ಳುಳ್ಳಿ ಎಸಳು ಹದವಾಗಿ ಕುಟ್ಟಿದ್ದು
ರುಚಿಗೆ ತಕ್ಕಷ್ಟು ಉಪ್ಪು
1 ಚಮಚ ಕಾಳು ಮೆಣಸು
ಸಣ್ಣ ತುಂಡು ಶುಂಠಿ ತುರಿ
1 ಚಮಚ ರಸಂ ಪುಡಿ
2 ಟೀ ಚಮಚ-ಅರಿಶಿನ ಪುಡಿ
1 ಟೀ ಚಮಚ ಕೆಂಪು ಮೆಣಸಿನ ಪುಡಿ
ವಿಧಾನ:
ಕುಕ್ಕರ್ ಗೆ ಕತ್ತರಿಸಿದ ಟೊಮೆಟೊ, ಬೆಳ್ಳುಳ್ಳಿ, ಕಾಳುಮೆಣಸು, ಶುಂಠಿ, ಉಪ್ಪು 4 ಕಪ್ ನೀರು ಸೇರಿಸಿ 2 ವಿಷಲ್ ಬರಿಸಿ.ಇದು ತಣ್ಣಗಾದ ನಂತರ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ.
ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ರುಬ್ಬಿಕೊಂಡ ಟೊಮೆಟೊ ಮಿಶ್ರಣ, ಅರಿಶಿನ ಪುಡಿ, ರಸಂ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ.
ನಂತರ ಒಂದು ಸಣ್ಣ ಪಾತ್ರೆಗೆ 2 ಚಮಚ ತುಪ್ಪ ಹಾಕಿ ಸಾಸಿವೆ, ಇಂಗು ಕರಿಬೇವು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಸಿದ್ದಪಡಿಸಿಕೊಳ್ಳಿ. ಇದನ್ನು ಟೊಮೆಟೋ ಮಿಶ್ರಣಕ್ಕೆ ಸೇರಿಸಿದರೆ ಟೊಮೆಟೊ, ಬೆಳ್ಳುಳ್ಳಿ ರಸಂ ಸಿದ್ಧ.
Comments
Post a Comment