ಜಿಟಿಪಿಟಿ ಮಳೆಗೆ ಬಿಸಿಬಿಸಿ ಟೊಮೆಟೊ ಸೂಪ್!

ಮಳೆಗಾಲದಲ್ಲಿ ಟೊಮೆಟೊ ಸೂಪ್ ಕುಡಿಯಲು ಹಿತವಾಗಿರತ್ತೆ ಹಾಗೂ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.



ಬೇಕಾಗುವ ಸಾಮಗ್ರಿಗಳು:


10 ಟೊಮೆಟೊ, 2 ಚಮಚ ಜೀರಿಗೆ, 5 ಚಮಚ ಸಕ್ಕರೆ, 2 ಚಮಚ ಉಪ್ಪು, 10 ಕಾಳಮೆಣಸಿನ ಪುಡಿ (10 ಕಾಳು), 2 ಚಮಚ ಕಾರ್ನ್ ಫ್ಲೋರ್, 1 ಚಮಚ ತುಪ್ಪ.



ಮಾಡುವ ಬಗೆ:


ಟೊಮೆಟೊವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಜೀರಿಗೆ ಹಾಗೂ ಬೇಯಿಸಿದ ಟೊಮೆಟೊವನ್ನು ಮಿಕ್ಸಿಗೆ ಹಾಕಿ ರುಬ್ಬಿ. ಆಮೇಲೆ ಅದನ್ನು ಜರಡಿಗೆ ಹಾಕಿ ಸೋಸಿರಿ.

ರಸಕ್ಕೆ ಸಕ್ಕರೆ, ಉಪ್ಪು,ಕಾಳಮೆಣಸಿನ ಪುಡಿ , ಮುಸುಕಿನ ಜೋಳದ ಪುಡಿ , ತುಪ್ಪ ಹಾಕಿ 5 ನಿಮಿಷ ಚೆನ್ನಾಗಿ ಕುದಿಸಿ.
ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಗೂ ಕಟ್ ಮಾಡಿದ ರಸ್ಕ್ ತುಂಡುಗಳನ್ನು ಹಾಕಿ ಸವಿಯಲು ನೀಡಿ.

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್