ಮಶ್ರೂಮ್ ಸೂಪ್ ಮಾಡುವುದು ಹೇಗೆ?

ಈ ಚಳಿಗಾಲಕ್ಕೆ ಬೇರೆ ಬೇರೆ ರೀತಿಯ ಸೂಪ್ ಮಾಡಿಕೊಂಡು ಕುಡಿದರೆ ದೇಹವೂ ಬೆಚ್ಚಗಿರುತ್ತದೆ, ಬಾಯಿಗೂ ರುಚಿಯಾಗಿರುತ್ತದೆ. ಮಶ್ರೂಮ್ ಸೂಪ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಬೇಕೇ? ಹಾಗಿದ್ದರೆ ಇದನ್ನು ನೋಡಿ.

ಬೇಕಾಗುವ ಸಾಮಗ್ರಿಗಳು

ಮಶ್ರೂಮ್
ಫ್ರೆಶ್ ಕ್ರೀಮ್
ಉಪ್ಪು
ಚಕ್ಕೆ, ಲವಂಗ
ಕಾಳುಮೆಣಸು
ಅಕ್ಕಿ ಹಿಟ್ಟು
ಬೆಣ್ಣೆ

ಮಾಡುವ ವಿಧಾನ

ಮಶ್ರೂಮ್ ನ್ನು ಚೆನ್ನಾಗಿ ತೊಳೆದು, ಕತ್ತರಿಸಿಕೊಳ್ಳಿ. ಬೆಳ್ಳುಳ್ಳಿ ಜಜ್ಜಿ ಇಟ್ಟುಕೊಳ್ಳಿ. ನಂತರ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಬೆಣ್ಣೆ ಹಾಕಿ ಬಿಸಿ ಮಾಡಿ. ಇದು ಬಿಸಿಯಾದ ಮೇಲೆ ಮಶ್ರೂಮ್, ಜಜ್ಜಿ ಇಟ್ಟುಕೊಂಡ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ.

ನಂತರ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ತಿರುವಿ. ನಂತರ ಉಪ್ಪು, ಕಾಳುಮೆಣಸು ಹಾಕಿ. ಇದನ್ನು ಸುಮಾರು 10 ನಿಮಿಷ ಬೇಯಿಸಿ. ನಂತರ ಇದನ್ನು ಬೌಲ್ ಗೆ ಸುರುವಿಕೊಂಡು ಫ್ರೆಶ್ ಕ್ರೀಮ್ ಹಾಕಿಕೊಂಡು ಸೇವಿಸಿ!

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್