ರುಚಿಕರವಾದ ಖರ್ಜೂರದ ಲಾಡು ಮಾಡುವ ಬಗೆ ಇಲ್ಲಿದೆ ನೋಡಿ

ಮಕ್ಕಳಿಗೆ ಹೊರಗಡೆಯಿಂದ ತಿಂಡಿ ತಂದು ಕೊಡುವುದರ ಬದಲು ಮನೆಯಲ್ಲಿ ರುಚಿಕರವಾದ ತಿಂಡಿಗಳನ್ನು ಮಾಡಿಕೊಟ್ಟರೆ ಅವರ ಆರೋಗ್ಯಕ್ಕೂ ಒಳ್ಳೆಯದು. ಮನೆಯಲ್ಲಿ ಸುಲಭವಾಗಿ ಖರ್ಜೂರದ ಲಾಡು ಮಾಡಿಕೊಡುವುದರ ವಿಧಾನ ಇಲ್ಲಿದೆ ನೋಡಿ.


ಬೇಕಾಗುವ ಸಾಮಾಗ್ರಿಗಳು


ಖರ್ಜೂರ 1 ಬಟ್ಟಲು

ಕತ್ತರಿಸಿದ ಬಾದಾಮಿ - ಸ್ವಲ್ಪ

ತುಪ್ಪ - 3 ಚಮಚ

ಕತ್ತರಿಸಿದ ಗೋಡಂಬಿ- ಸ್ವಲ್ಪ

ದ್ರಾಕ್ಷಿ – 15 ಕಾಳು

ತುರಿದ ಕೊಬ್ಬರಿ - ಸ್ವಲ್ಪ

ಗಸಗಸೆ - 1 ಚಮಚ


ಮಾಡುವ ವಿಧಾನ


ಖರ್ಜೂರವನ್ನು ಬೀಜದಿಂದ ಬೇರ್ಪಡಿಸಿ  ರುಬ್ಬಿಕೊಳ್ಳಬೇಕು.  ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 3 ಚಮಚ ತುಪ್ಪವನ್ನು ಹಾಕಬೇಕು. ನಂತರ ಬಾದಾಮಿ, ಗೋಡಂಬಿ, ದ್ರಾಕ್ಷಿ, ಕೊಬ್ಬರಿ, ಗಸಗಸೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ರುಬ್ಬಿಕೊಂಡ ಖರ್ಜೂರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು, ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿದರೆ ರುಚಿಕರ ಹಾಗೂ ಆರೋಗ್ಯಕರವಾದ ಖರ್ಜೂರದ ಲಾಡು ಸವಿಯಲು ಸಿದ್ಧ.

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್