ರುಚಿ ರುಚಿಯಾದ ವೆಜ್ ಕಟ್ಲೆಟ್
ಚುಮು ಚುಮು ಮಳೆಗೆ ಬಿಸಿ ಬಿಸಿಯಾದ ಖಾದ್ಯಗಳನ್ನು ಸವಿಯುತ್ತಿದ್ದರೇ, ಹೊತ್ತು ಹೋಗುವುದೇ ತಿಳಿಯುವುದಿಲ್ಲ. ಒಂದಷ್ಟು ತರಕಾರಿಯಿದ್ದರೆ ಮನೆಯಲ್ಲಿಯೇ ವೆಜ್ ಕಟ್ಲೆಟ್ ಗಳನ್ನು ಮಾಡಿ ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಆಲೂಗಡ್ಡೆ -4, ಈರುಳ್ಳಿ ಎರಡು, ಎರಡು ಕ್ಯಾರೆಟ್, ಕಾಲು ಕಪ್ ಹಸಿ ಬಟಾಣಿ. ಕಾಲು ಕಪ್ ಬ್ರೆಡ್ ತುಣುಕುಗಳು. ಒಂದು ಚಮಚ ಮೈದಾ, ಒಂದು ಚಮಚ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಕಾರದ ಪುಡಿ ಮತ್ತು ಗರಂ ಮಸಾಲೆ ಪುಡಿ.
ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಕೈಯಿಂದ ಪುಡಿಪುಡಿ ಮಾಡಿಟ್ಟು ಕೊಳ್ಳಿ. ಕ್ಯಾರೆಟನ್ನು ಪುಟ್ಟಪುಟ್ಟದಾಗಿ ಕತ್ತರಿಸಿ ಬಟಾಣಿ ಕಾಳಿ ನೊಂದಿಗೆ ಬೇಯಿಸಿ. ಈರುಳ್ಳಿ ಕತ್ತರಿಸಿಟ್ಟು ಕೊಳ್ಳಿ. ಬಾಣಲೆಯಲ್ಲಿ ಎಣ್ಣೆಹಾಕಿ ಬಿಸಿಮಾಡಿ ಈರುಳ್ಳಿ ತುಣುಕುಗಳನ್ನು ಹಾಕಿ ಹುರಿಯಿರಿ. ಇದಕ್ಕೆ ಬೆಂದ ಆಲೂ, ಕ್ಯಾರೆಟ್ ಮತ್ತು ಬಟಾಣಿ ಸೇರಿಸಿ ನೀರಿಂಗುವ ತನಕ ಹುರಿಯಿರಿ. ಉಪ್ಪು ಖಾರಪುಡಿ, ಗರಂ ಮಸಾಲೆಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಒಲೆಯಿಂದ ಕೆಳಗಿರಿಸಿ.ಪಾತ್ರೆಯೊಂದರಲ್ಲಿ ಮೈದಾ ಮತ್ತು ಅಕ್ಕಿಹುಡಿಯನ್ನು ಸೇರಿಸಿ ಸ್ಪಲ್ಪ ನೀರುಹಾಕಿ ಪೇಸ್ಟ್ ಮಾಡಿಟ್ಟು ಕೊಳ್ಳಿ. ತರಕಾರಿ ಮಿಶ್ರಣವನ್ನು ಉಂಡೆಗಳಾಗಿಸಿ ಈ ಪೇಸ್ಟಿನಲ್ಲಿ ಮುಳುಗಿಸಿ ಇದಕ್ಕೆ ಬ್ರೆಡ್ ತುಣುಕುಗಳನ್ನು ಸೇರಿಸಿ ಬಾಳೆಎಲೆ ಅಥವಾ ದಪ್ಪ ಪ್ಲಾಸ್ಟಿಕ್‌ಗೆ ಎಣ್ಣೆ ಸವರಿ ಅದರ ಮೇಲೆ ಉಂಡೆಗಳನ್ನು ಇರಿಸಿ ಬೇಕಾದ ಆಕಾರಕ್ಕೆ ಒತ್ತಿ. ಕಾವಲಿ ಬಿಸಿಗಿಟ್ಟು ಎಣ್ಣೆ ಸವರಿ ಅದರ ಮೇಲೆ ಕಟ್ಲೆಟ್‌ಗಳನ ಇರಿಸಿ ಕಾಯಿಸಿ. ಎರಡೂ ಬದಿಗೆ ಎಣ್ಣೆ ಹಾಕಿ ಕಾಯಿಸಿ. ಬಿಸಿ ಬಿಸಿಯಾಗಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು

ವಿಧಾನ:

Comments
Post a Comment