ರುಚಿ ರುಚಿಯಾದ ಕೊತ್ತಂಬರಿ ಸೊಪ್ಪಿನ ಪಲಾವ್
ಈಗಿನ ಗೃಹಿಣಿಯರು ಮೊದಲಿನ ಹಾಗೆ ಅಡುಗೆ ಮನೆಗಷ್ಟೇ ಸೀಮಿತವಾಗಿಲ್ಲ. ಮನೆಯ ಹೊರಗೂ ದುಡಿದು ಅಡುಗೆ ಮನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಪುರುಸೊತ್ತೇ ಇಲ್ಲ ಕಣ್ರೀ ಅಡುಗೆ ಮಾಡೋಕೆ ಅಂತ ಅವಲತ್ತುಕೊಳ್ಳೋರೇ ಜಾಸ್ತಿ. ಅಂತಹ ಸಮಯದಲ್ಲಿ ದೀಢೀರ್ ಅಂತ ಮಾಡೋಕೆ ಕೊತ್ತಂಬರಿ ಸೊಪ್ಪಿನ ಪಲಾವ್ ಮಾಡೋದು ಹೇಗೆ ಎಂದು ತಿಳಿಸಿಕೊಡ್ತೀವಿ.. ಒಮ್ಮೆ ಟ್ರೈ ಮಾಡಿ..
* 1/2 ಈರುಳ್ಳಿ
* 8 ಲವಂಗಗಳು
* 1/2 ಟೀ ಸ್ಪೂನ್ ಮೆಣಸು
* 1 ಇಂಚು ದಾಲ್ಚಿನಿ
* 2 ಹಸಿಮೆಣಸು
* ಸ್ವಲ್ಪ ಕೊತ್ತಂಬರಿ ಸೊಪ್ಪು
* ತುಪ್ಪ
* ಸ್ವಲ್ಪ ಲವಂಗದ ಎಲೆ
* ಸ್ವಲ್ಪ ಗೋಡಂಬಿ
* 1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
* ಟೊಮೆಟೊ
* ಬೀನ್ಸ್ (ಸಣ್ಣಗೆ ಹೆಚ್ಚಿಕೊಂಡಿರಬೇಕು)
* ಕ್ಯಾರೆಟ್ (ಸಣ್ಣಗೆ ಹೆಚ್ಚಿಕೊಂಡಿರಬೇಕು)
* ಕ್ಯಾಪ್ಸಿಕಂ (ಸಣ್ಣಗೆ ಹೆಚ್ಚಿಕೊಂಡಿರಬೇಕು)
* ಸ್ವಲ್ಪ ಅವರೆಕಾಳು
* ಉಪ್ಪು
* 3 ಕಪ್ ಅನ್ನ
ಮೊದಲು 1/2 ಈರುಳ್ಳಿ, 8 ಲವಂಗ, 1/2 ಟೀ ಸ್ಪೂನ್ ಕಾಳುಮೊಣಸು, 1 ಇಂಚು ದಾಲ್ಚಿನಿ, 2 ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಕೊತ್ತಂಬರ ಸೊಪ್ಪನ್ನು ಮಿಕ್ಸಿಯಲ್ಲಿ ತೆಗೆದುಕೊಳ್ಳಬೇಕು. ಇದನ್ನು ಮಿಕ್ಸಿ ಮಾಡುವಾಗ 2 ಟೀ ಸ್ಪೂನ್ ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ತುಪ್ಪ, ಲವಂಗದ ಎಲೆ ಮತ್ತು ಗೋಡಂಬಿಯನ್ನು ಹಾಕಿ ಫ್ರೈ ಮಾಡಿ ಅದಕ್ಕೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, (ಮೊದಲೇ ಮಾಡಿಕೊಂಡಿರಬೇಕು) ಮತ್ತು ಮೊದಲೇ ಹೆಚ್ಚಿಕೊಂಡ ಟೊಮೆಟೊ, ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ, ಅವರೆಕಾಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಈ ಮಿಶ್ರಣಕ್ಕೆ ನಾವು ಮಿಕ್ಸಿ ಮಾಡಿಕೊಂಡ ಪೇಸ್ಟ್ ಅನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ 5 ನಿಮಿಷ ಎಲ್ಲಾ ತರಕಾರಿಗಳು ಸರಿಯಾಗಿ ಬೇಯುವ ತನಕ ಅದನ್ನು ಬೇಯಿಸಬೇಕು. ಅದು ಸಂಪೂರ್ಣವಾಗಿ ಬೆಂದ ನಂತರ ಆ ಮಿಶ್ರಣಕ್ಕೆ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಕೊತ್ತಂಬರಿ ಸೊಪ್ಪಿನ ಪಲಾವ್ ಸವಿಯಲು ಸಿದ್ಧ. ಈ ಪಲಾವ್ ಮೊಸರಿನ ಜೊತೆಗೂ ಸವಿಯಲು ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಗಳು:
(1 ಕಪ್ = 250 ML)* 1/2 ಈರುಳ್ಳಿ
* 8 ಲವಂಗಗಳು
* 1/2 ಟೀ ಸ್ಪೂನ್ ಮೆಣಸು
* 1 ಇಂಚು ದಾಲ್ಚಿನಿ
* 2 ಹಸಿಮೆಣಸು
* ಸ್ವಲ್ಪ ಕೊತ್ತಂಬರಿ ಸೊಪ್ಪು
* ತುಪ್ಪ
* ಸ್ವಲ್ಪ ಲವಂಗದ ಎಲೆ
* ಸ್ವಲ್ಪ ಗೋಡಂಬಿ
* 1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
* ಟೊಮೆಟೊ
* ಬೀನ್ಸ್ (ಸಣ್ಣಗೆ ಹೆಚ್ಚಿಕೊಂಡಿರಬೇಕು)
* ಕ್ಯಾರೆಟ್ (ಸಣ್ಣಗೆ ಹೆಚ್ಚಿಕೊಂಡಿರಬೇಕು)
* ಕ್ಯಾಪ್ಸಿಕಂ (ಸಣ್ಣಗೆ ಹೆಚ್ಚಿಕೊಂಡಿರಬೇಕು)
* ಸ್ವಲ್ಪ ಅವರೆಕಾಳು
* ಉಪ್ಪು
* 3 ಕಪ್ ಅನ್ನ
ಮಾಡುವ ವಿಧಾನಗಳು:
ಮೊದಲು 1/2 ಈರುಳ್ಳಿ, 8 ಲವಂಗ, 1/2 ಟೀ ಸ್ಪೂನ್ ಕಾಳುಮೊಣಸು, 1 ಇಂಚು ದಾಲ್ಚಿನಿ, 2 ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಕೊತ್ತಂಬರ ಸೊಪ್ಪನ್ನು ಮಿಕ್ಸಿಯಲ್ಲಿ ತೆಗೆದುಕೊಳ್ಳಬೇಕು. ಇದನ್ನು ಮಿಕ್ಸಿ ಮಾಡುವಾಗ 2 ಟೀ ಸ್ಪೂನ್ ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ತುಪ್ಪ, ಲವಂಗದ ಎಲೆ ಮತ್ತು ಗೋಡಂಬಿಯನ್ನು ಹಾಕಿ ಫ್ರೈ ಮಾಡಿ ಅದಕ್ಕೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, (ಮೊದಲೇ ಮಾಡಿಕೊಂಡಿರಬೇಕು) ಮತ್ತು ಮೊದಲೇ ಹೆಚ್ಚಿಕೊಂಡ ಟೊಮೆಟೊ, ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ, ಅವರೆಕಾಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಈ ಮಿಶ್ರಣಕ್ಕೆ ನಾವು ಮಿಕ್ಸಿ ಮಾಡಿಕೊಂಡ ಪೇಸ್ಟ್ ಅನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ 5 ನಿಮಿಷ ಎಲ್ಲಾ ತರಕಾರಿಗಳು ಸರಿಯಾಗಿ ಬೇಯುವ ತನಕ ಅದನ್ನು ಬೇಯಿಸಬೇಕು. ಅದು ಸಂಪೂರ್ಣವಾಗಿ ಬೆಂದ ನಂತರ ಆ ಮಿಶ್ರಣಕ್ಕೆ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಕೊತ್ತಂಬರಿ ಸೊಪ್ಪಿನ ಪಲಾವ್ ಸವಿಯಲು ಸಿದ್ಧ. ಈ ಪಲಾವ್ ಮೊಸರಿನ ಜೊತೆಗೂ ಸವಿಯಲು ಚೆನ್ನಾಗಿರುತ್ತದೆ.
Comments
Post a Comment