ಕೇರಳ ಮಟನ್ ಫ್ರೈ ರೆಸಿಪಿ

ಕೇರಳದ ನಾನ್ ವೆಜ್ ಅಡುಗೆಗಳು ಸಾಕಷ್ಟು ಜನಪ್ರಿಯವಾಗಿದ್ದು ಅದರ ರುಚಿ ತಿಂದವರಷ್ಟೇ ಬಲ್ಲರು. ನೀವು ನಾನ್ ವೆಜ್ ಪ್ರೀಯರಾಗಿದ್ದು ನಿಮಗೂ ಕೇರಳ ಶೈಲಿಯ ಮಟನ್ ಫ್ರೈ ಮಾಡಿ ಸವಿಯಬೇಕು ಎನಿಸಿದರೆ ಸರಳವಾಗಿ ಮನೆಯಲ್ಲಿಯೇ ತಯಾರಿಸಬಹುದಾಗಿದೆ ಹೇಗೆ ಅಂತೀರಾ ವಿವರಣೆ ನಿಮಗಾಗಿ.
ಬೇಕಾಗುವ ಸಾಮಗ್ರಿ:

ಮಟನ್ - 1/2 ಕೆ.ಜಿ

ಜೀರಿಗೆ ಪುಡಿ = 2 ಟೇಬಲ್ ಸ್ಪೂನ್

ಕೆಂಪು ಮೆಣಸಿನ ಕಾಯಿ- 5-6 (ಚಿಕ್ಕದಾಗಿ ಕತ್ತರಿಸಿರುವುದು)

ಬೆಳ್ಳುಳ್ಳಿ - 6-7 ತುಂಡುಗಳು

ಕರಿ ಬೇವು
ಉಪ್ಪು 

ಮಾಡುವ ವಿಧಾನ

ಜೀರಿಗೆ ಪುಡಿ, ಕೆಂಪು ಮೆಣಸಿನ ಕಾಯಿ, ಬೆಳ್ಳುಳ್ಳಿ, ಉಪ್ಪು ಮತ್ತು ಕರಿ ಬೇವುಗಳನ್ನು ಸ್ವಲ್ಪ ನೀರಿನ ಜೊತೆಗೆ ಚೆನ್ನಾಗಿ ರುಬ್ಬಿಕೊಳ್ಳಿ, ಕಲ್ಲಿನಲ್ಲಿ ಅರೆದರೆ ಇನ್ನೂ ಉತ್ತಮ. ನಂತರ ಅದನ್ನು ಪೇಸ್ಟ್ ರೀತಿ ತಯಾರಿಸಿಕೊಳ್ಳಿ. ಈ ಪೇಸ್ಟ್‌ನಲ್ಲಿ ಮಟನ್ ಮಾಂಸವನ್ನು ಚೆನ್ನಾಗಿ ಕಲೆಸಿ. ತದನಂತರ ಒಂದು ಗಂಟೆಯವರೆಗೆ ಇದನ್ನು ನೆನೆಯಲು ಬಿಡಿ. ಈ ಮಸಾಲೆಯು ಚೆನ್ನಾಗಿ ಮಟನ್‌ಗೆ ಹಿಡಿದಿದೆ ಎಂದು ನಿಮಗೆ ಅನಿಸಿದ ಮೇಲೆ ಅದನ್ನು ತೆಂಗಿನ ಕಾಯಿ ಎಣ್ಣೆಯಲ್ಲಿ ಕರಿಬೇವಿನ ಎಲೆಗಳನ್ನು ಹಾಕಿ ಕಲೆಸಿದ ಮಾಂಸವನ್ನು ಹಾಕಿ ಅದು ಹೊಂಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿಕೊಂಡರೆ, ರುಚಿ ರುಚಿಯಾದ ಕೇರಳ ಮಟನ್ ಫ್ರೈ ತಿನ್ನಲು ರೆಡಿ!

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್