ತೊಗರಿಬೇಳೆ ನುಚ್ಚಿನುಂಡೆ

ನುಚ್ಚಿನುಂಡೆ ಹಬೆಯಲ್ಲಿ ಬೇಯಿಸಿ ಮಾಡುವ ಕರ್ನಾಟಕದ ಜನಪ್ರಿಯವಾದ ತಿಂಡಿಯಾಗಿದೆ.

ಬೇಕಾಗುವ ಸಾಮಾಗ್ರಿಗಳು:

ತೊಗರಿಬೇಳೆ - 1 ಪಾವು

ಹಸಿಮೆಣಸಿನಕಾಯಿ – 7-8

ಹಸಿಕೊಬ್ಬರಿ – 1 ಬಟ್ಟಲು

ಕೊತ್ತಂಬರಿ ಸೊಪ್ಪು

ಇಂಗು – ಅರ್ಧ ಟೀಸ್ಪೂನ್

ಜೀರಿಗೆ – ಚಮಚ

ಮಾಡುವ ವಿಧಾನ:

 ಮೊದಲಿಗೆ ತೊಗರಿಬೇಳೆಯನ್ನು 5-6 ಗಂಟೆಗಳ ಕಾಲ ನೆನೆಹಾಕಿ. ನಂತರ ಅದನ್ನು ನೀರಿನಿಂದ ಬಸಿದುಕೊಂಡು, ಅದಕ್ಕೆ ಹಸಿಮೆಣಸಿನ ಕಾಯಿ ಸೇರಿಸೊಂಡು ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣಕ್ಕೆ ಕೊಬ್ಬರಿ, ಕೊತ್ತಂಬರಿಸೊಪ್ಪು, ಜೀರಿಗೆ, ಉಪ್ಪು, ಇಂಗು ಸೇರಿಸಿಕೊಂಡು ವಡೆಯ ಆಕಾರ ಇಲ್ಲವೆ ಪಿಡುಚೆಗಳ ಆಕಾರದಲ್ಲಿ ಮಾಡಿಕೊಂಡು ಇಡ್ಲಿ ಮಾಡುವಪ್ಲೇಟ್‌ಗಳಲ್ಲಿಟ್ಟು ಹಬೆಯಲ್ಲಿ ಬೇಯಿಸಿಕೊಳ್ಳಿ. ಇದನ್ನು ಕೊಬ್ಬರಿ ಚಟ್ನಿಯಲ್ಲಿ ಸಾಯಂಕಾಲ ಕಾಫಿ-ಟೀ ಜೊತೆಗೆ ಬಿಸಿ ಬಿಸಿಯಾಗಿ ಸವಿದರೆ ಚೆನ್ನಾಗಿರುತ್ತದೆ. 

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ರುಚಿ ರುಚಿ ನೆಲ್ಲಿಕಾಯಿ ಉಪ್ಪಿನಕಾಯಿ ಹಾಕಿ

ಟೊಮೆಟೊ, ಬೆಳ್ಳುಳ್ಳಿಯ ರಸಂ ಮಾಡುವುದು ಹೇಗೆ ಗೊತ್ತಾ…?