ಸ್ವಾದಿಷ್ಠ ಸಿಗಡಿ ಫ್ರೈ

ಕರಾವಳಿ ಭಾಗದಲ್ಲಿ ಮಾಸಾಂಹಾರವನ್ನು ಕೊಬ್ಬರಿ ಎಣ್ಣೆಯಿಂದ ಹುರಿದು ತಯಾರಿಸುವುದು ಎಲ್ಲರಿಗೂ ಗೊತ್ತೇ ಇದೆ ಅಷ್ಟೇ ಅಲ್ಲ ತುಪ್ಪದಿಂದಲೂ ಕೆಲವು ಆಹಾರವನ್ನು ತಯಾರಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಮಂಗಳೂರಿನಲ್ಲಿ ತಯಾರಿಸುವ ಸಿಗಡಿ ಫ್ರೈ ತುಪ್ಪದಿಂದ ತಯಾರಿಸುವ ಖಾದ್ಯವಾಗಿದ್ದು ಇದು ಸಕತ್ ಫೇಮಸ್ ಅಂತಾನೇ ಹೇಳಬಹುದು. ಇದನ್ನು ಹೇಗೆ ತಯಾರಿಸುವುದು ಎಂಬುದರ ಸಂಪೂರ್ಣ ಮಾಹಿತಿ ನಿಮಗಾಗಿ.

ಪ್ರಮಾಣ: 

5 ಜನರಿಗೆ ಸಾಕಾಗುವಷ್ಟು 

 ಬೇಕಾಗುವ ಸಾಮಾಗ್ರಿಗಳು :

ಜಂಬೋ ಸಿಗಡಿ - 500 ಗ್ರಾಂ

ಲಿಂಬೆ ರಸ - 5 ಟಿ ಚಮಚ

ಉಪ್ಪು - ರುಚಿಗೆ ತಕ್ಕಷ್ಟು

ಬಿಳಿ ಕಾಳುಮೆಣಸು - 2 ಟಿ ಚಮಚ

ಮೊಸರು - 2 1/2 ಕಪ್‌ಗಳು

ಕೆಂಪು ಮೆಣಸು - 25 (ಹುರಿದದ್ದು)

ಕೊತ್ತಂಬರಿ ಬೀಜ - 2 ಟಿ ಚಮಚ

ಮೆಂತೆ ಬೀಜ - 1 ಟಿ ಚಮಚ

ಜೀರಿಗೆ - 2 ಟಿ ಚಮಚ

ಬೆಳ್ಳುಳ್ಳಿ ಎಸಳು - 12 ರಿಂದ 14

ಹುಳಿ ನೀರು - 1 1/2 ಕಪ್

ತುಪ್ಪ - 4 ಟಿ ಚಮಚ

ಎಣ್ಣೆ - 2 ಟಿ ಚಮಚ

ಮಾಡುವ ವಿಧಾನ:

ಉಪ್ಪು, ಬಿಳಿ ಕಾಳುಮೆಣಸು, ಹಳದಿ ಮತ್ತು ಲಿಂಬೆ ರಸವನ್ನು ಸಿಗಡಿಗೆ ಲೇಪಿಸಿ 1 ಗಂಟೆ ಹಾಗೆಯೇ ಬಿಡಿ ಅದು ಚೆನ್ನಾಗಿ ಹಾಕಿದ ಮಸಾಲೆಗಳನ್ನು ಹಿರಿಕೊಂಡ ಬಳಿಕ ಪ್ಯಾನ್ ಬಿಸಿ ಮಾಡಿ ಮತ್ತು ಕಲೆಸಿದ ಸಿಗಡಿಯನ್ನು 3-4 ನಿಮಿಷಗಳಷ್ಟು ಕಾಲ ಸ್ವಲ್ಪ ಫ್ರೈ ಮಾಡಿ. ನಂತರ ಅದಕ್ಕೆ ಒಂದು ಜಾರಿನಲ್ಲಿ ಕೆಂಪು ಮೆಣಸು ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಬೀಜಗಳು, ಬೆಳ್ಳುಳ್ಳಿ ಮತ್ತು ಹುಳಿಯನ್ನು ಹಾಕಿ ಮಸಾಲೆಯನ್ನು ಸಿದ್ದಪಡಿಸಿಕೊಳ್ಳಿ.

ಪ್ಯಾನ್‌ನಿಂದ ಹುರಿದ ಸಿಗಡಿಯನ್ನು ಹೊರತೆಗೆದು ಬದಿಯಲ್ಲಿರಿಸಿ. ಕಡೆದ ಮಸಾಲೆಯನ್ನು ಈ ಪ್ಯಾನ್‌ನಲ್ಲಿರುವ ಎಣ್ಣೆಯಲ್ಲಿ ಹಸಿ ಪರಿಮಳ ಹೋಗುವವರೆಗೆ 3-5 ನಿಮಿಷಗಳ ಕಾಲ ಬೇಯಿಸಿ. ನಂತರ ಒಂದು ಪ್ಯಾನ್ ತೆಗೆದುಕೊಳ್ಳಿ ಅದಕ್ಕೆ ತುಪ್ಪವನ್ನು ಹಾಕಿ ಕಲೆಸಿದ ಸಿಗಡಿಯನ್ನು ತೆಗೆದುಕೊಂಡು ಅದಕ್ಕೆ ಹಾಕಿ ಉಪ್ಪನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ ನಂತರ ಸಿದ್ಧಪಡಿಸಿಟ್ಟುಕೊಂಡಿರುವ ಮಸಾಲೆಯನ್ನು ಅದಕ್ಕೆ ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿ. ಕೊತ್ತಂಬರಿ ಎಲೆಗಳಿಂದ ಅಲಂಕರಿಸಿದರೆ ರುಚಿ ರುಚಿಯಾದ ಮಂಗಳೂರು ಸಿಗಡಿ ಫ್ರೈ ಸಿದ್ಧವಾಗುತ್ತದೆ.

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್