ದೀಪಾವಳಿ ಹಬ್ಬದಂದು ಮಕ್ಕಳಿಗಾಗಿ ಮಾಡಿ ಆರೋಗ್ಯಕರವಾದ ಡ್ರೈ ಫ್ರೂಟ್ಸ್ ಉಂಡೆ

ದೀಪಾವಳಿ ಹಬ್ಬದಂದು ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡುತ್ತಾರೆ. ಅದರ ಜೊತೆಗೆ ಮಕ್ಕಳಿಗೆ ಇಷ್ಟವಾದ ಡ್ರೈ ಪ್ರೂಟ್ಸ್ ಉಂಡೆಯನ್ನು ಮಾಡಿ.
ಬೇಕಾಗು ಸಾಮಾಗ್ರಿಗಳು:

ಬೆಲ್ಲದ ಪುಡಿ 1ಕಪ್, ಉತ್ತುತ್ತೆ ½ ಕಪ್ , ಖರ್ಜೂರ ½ ಕಪ್, ಗೋಡಂಬಿ ¼ ಕಪ್, ಒಣದ್ರಾಕ್ಷಿ ¼ ಕಪ್, ಬಾದಾಮಿ ¼ ಕಪ್, ತುರಿದ ಕೊಬ್ಬರಿ ¼ ಕಪ್, ಗಸಗಸೆ 1 ಚಮಚ, ಏಲಕ್ಕಿ ಪುಡಿ, ತುಪ್ಪ ¼ ಕಪ್ , ಅಂಟು 2 ಚಮಚ.


ಮಾಡುವ ವಿಧಾನ :

ಒಂದು ಬಾಣಲೆಯಲ್ಲಿ ಗಸಗಸೆ, ಹಾಗೂ ಕೊಬ್ಬರಿಯನ್ನು ಬೇರೆ ಬೇರೆಯಾಗಿ ಹುರಿಯಬೇಕು. ನಂತರ ಅವೆರಡನ್ನು ತೆಗೆದಿಟ್ಟುಕೊಳ್ಳಬೇಕು. ನಂತರ ಅದೇ ಬಾಣಲೆಗೆ  2 ಚಮಚ ತುಪ್ಪ ಹಾಕಿ , ಬಾದಾಮಿ, ಗೋಡಂಬಿ, ದ್ರಾಕ್ಷಿ, ಖರ್ಜೂರ, ಉತ್ತುತ್ತೆ ಹಾಕಿ ಹುರಿಯಬೇಕು. ಅದನ್ನು ಹುರಿದ ಗಸಗಸೆ ಹಾಗೂ ಕೊಬ್ಬರಿಯೊಂದಿಗೆ ಸೇರಿಸಿ.


ನಂತರ ಬಾಣಲೆಗೆ 4 ಚಮಚ ತುಪ್ಪ ಹಾಕಿ ಪುಡಿಮಾಡಿಟ್ಟುಕೊಂಡಿರುವ ಅಂಟು ಹಾಕಿ ಅದು ಉಬ್ಬುವವರೆಗೆ ಹುರಿಯಬೇಕು. ಅದನ್ನು ಡ್ರೈ ಪ್ರೂಟ್ಸ್ ನೊಂದಿಗೆ ಸೇರಿಸಬೇಕು. ನಂತರ ಬಾಣಲೆಯಲ್ಲಿ ಬೆಲ್ಲ ಮತ್ತು ಸ್ವಲ್ಪ ನೀರು ಹಾಕಿ ಬೆಲ್ಲ ಕರಗುವವರೆಗೆ ಕೈಯಾಡಿಸಿ, ಚೆನ್ನಾಗಿ ಪಾಕವಾದ ಮೇಲೆ ಏಲಕ್ಕಿ ಹಾಕಿ, ಹುರಿದ ಡ್ರೈ ಪ್ರೂಟ್ಸ್ ಗಳನ್ನು ಹಾಕಿ ಮಿಕ್ಸ್ ಮಾಡಿ ಬಿಸಿ ಇರುವಾಗಲೇ ಉಂಡೆ ಕಟ್ಟಬೇಕು. ಆಗ ಡ್ರೈ ಪ್ರೂಟ್ಸ್ ಉಂಡೆ ರೆಡಿಯಾಗುತ್ತದೆ.

Comments

Popular posts from this blog

ಹರಿವೆ ಅಥವಾ ದಂಟು ಸೊಪ್ಪಿನ ರುಚಿಯಾದ ಸಾಸಿವೆ

ಘಮ ಘಮ ಸೌತೇಕಾಯಿ ರೊಟ್ಟಿ ಮಾಡುವ ವಿಧಾನ

ರುಚಿಯಲ್ಲಿ ಅದ್ವಿತೀಯ: ಕೊತ್ತಂಬರಿ ರೈಸ್ ಬಾತ್