Posts

Showing posts from August, 2018

ರುಚಿ ರುಚಿಯಾದ ಕೊತ್ತಂಬರಿ ಸೊಪ್ಪಿನ ಪಲಾವ್

Image
ಈಗಿನ ಗೃಹಿಣಿಯರು ಮೊದಲಿನ ಹಾಗೆ ಅಡುಗೆ ಮನೆಗಷ್ಟೇ ಸೀಮಿತವಾಗಿಲ್ಲ. ಮನೆಯ ಹೊರಗೂ ದುಡಿದು ಅಡುಗೆ ಮನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಪುರುಸೊತ್ತೇ ಇಲ್ಲ ಕಣ್ರೀ ಅಡುಗೆ ಮಾಡೋಕೆ ಅಂತ ಅವಲತ್ತುಕೊಳ್ಳೋರೇ ಜಾಸ್ತಿ. ಅಂತಹ ಸಮಯದಲ್ಲಿ ದೀಢೀರ್ ಅಂತ ಮಾಡೋಕೆ ಕೊತ್ತಂಬರಿ ಸೊಪ್ಪಿನ ಪಲಾವ್ ಮಾಡೋದು ಹೇಗೆ ಎಂದು ತಿಳಿಸಿಕೊಡ್ತೀವಿ.. ಒಮ್ಮೆ ಟ್ರೈ ಮಾಡಿ.. ಬೇಕಾಗುವ ಸಾಮಗ್ರಿಗಗಳು: (1 ಕಪ್ = 250 ML) * 1/2 ಈರುಳ್ಳಿ * 8 ಲವಂಗಗಳು * 1/2 ಟೀ ಸ್ಪೂನ್ ಮೆಣಸು * 1 ಇಂಚು ದಾಲ್ಚಿನಿ * 2 ಹಸಿಮೆಣಸು * ಸ್ವಲ್ಪ ಕೊತ್ತಂಬರಿ ಸೊಪ್ಪು * ತುಪ್ಪ * ಸ್ವಲ್ಪ ಲವಂಗದ ಎಲೆ  * ಸ್ವಲ್ಪ ಗೋಡಂಬಿ * 1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ * ಟೊಮೆಟೊ * ಬೀನ್ಸ್ (ಸಣ್ಣಗೆ ಹೆಚ್ಚಿಕೊಂಡಿರಬೇಕು) * ಕ್ಯಾರೆಟ್ (ಸಣ್ಣಗೆ ಹೆಚ್ಚಿಕೊಂಡಿರಬೇಕು) * ಕ್ಯಾಪ್ಸಿಕಂ (ಸಣ್ಣಗೆ ಹೆಚ್ಚಿಕೊಂಡಿರಬೇಕು) * ಸ್ವಲ್ಪ ಅವರೆಕಾಳು * ಉಪ್ಪು * 3 ಕಪ್ ಅನ್ನ ಮಾಡುವ ವಿಧಾನಗಳು: ಮೊದಲು  1/2 ಈರುಳ್ಳಿ, 8 ಲವಂಗ, 1/2 ಟೀ ಸ್ಪೂನ್ ಕಾಳುಮೊಣಸು, 1  ಇಂಚು ದಾಲ್ಚಿನಿ, 2 ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಕೊತ್ತಂಬರ ಸೊಪ್ಪನ್ನು ಮಿಕ್ಸಿಯಲ್ಲಿ ತೆಗೆದುಕೊಳ್ಳಬೇಕು. ಇದನ್ನು ಮಿಕ್ಸಿ ಮಾಡುವಾಗ 2 ಟೀ ಸ್ಪೂನ್ ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ತುಪ್ಪ, ಲವಂಗದ ಎಲೆ ಮತ್ತು ಗೋಡಂಬಿಯನ್ನು ಹಾ...

ಕರಾವಳಿ ಶೈಲಿಯ ಕೋಳಿಸಾರು

Image
ಕರಾವಳಿ ದೇಶದಲ್ಲಿಯೇ ತನ್ನದೇ ಆದ ವೈವಿದ್ಯತೆಗಳಿಂದ ಬಿಂಬಿತವಾಗಿರುವ ಪ್ರದೇಶ ಇದು ಊಟದ ವಿಷಯದಲ್ಲೂ ಹೌದು ಎನ್ನಬಹುದು ಅದಕ್ಕೆ ಕಾರಣವೂ ಇದೆ ಕರಾವಳಿ ಭಾಗದ ನಾನ್ ವೆಜ್ ಅಡುಗೆಗಳು ದೇಶದ ಇತರೆ ಭಾಗಕ್ಕೆ ಹೋಲಿಸಿದರೆ ವಿಭಿನ್ನವಾಗಿರುತ್ತದೆ ಮತ್ತು ಹೆಚ್ಚು ಖಾರವಾಗಿ ರುಚಿಕರವಾಗಿರುತ್ತದೆ ಅದರಲ್ಲೂ ಕರಾವಳಿ ಭಾಗಗದಲ್ಲಿ ಬಂಡಿಹಬ್ಬದಲ್ಲಿ ಮಾಡುವ ಕೋಳಿಸಾರು ವಿಶೇಷವಾಗಿರುತ್ತದೆ ಅದನ್ನು ಹೇಗೆ ಮಾಡೋದು ಅಂತಾ ಹೇಳ್ತಿವಿ ಒಮ್ಮೆ ಪ್ರಯತ್ನಿಸಿ ಬೇಕಾಗುವ ಸಾಮಗ್ರಿಗಳು 1 ಕೆಜಿ ಕೋಳಿ ಮಾಂಸ 2 /3 ಈರುಳ್ಳಿ ಉದ್ದವಾಗಿ ಹೆಚ್ಚಿರುವುದು 2 ತೆಂಗಿನಕಾಯಿಯ ತುರಿ ಕೆಂಪು ಮೆಣಸಿನಕಾಯಿ 8 ರಿಂದ 10 (ಖಾರ ಪ್ರೀಯರಾಗಿದ್ದಲ್ಲಿ ಇನ್ನು 4 ಹೆಚ್ಚು) ಬೆಳ್ಳುಳ್ಳಿ 6 ರಿಂದ 7 ಎಸಳು ಶುಂಟಿ ಎರಡು ಸಣ್ಣ ತುಂಡು ಬಾಡೆಸೊಪ್ಪು ಒಂದು ಟಿ ಚಮಚ ಗಸಗಸೆ ಸ್ವಲ್ಪ ಅರಿಶಿನ ಪುಡಿ ಚಕ್ಕೆ ಮತ್ತು ಲವಂಗ ಸ್ವಲ್ಪ ಜಾಯಿಕಾಯಿ ಚಕ್ರಮೊಗ್ಗು 2 ರಿಂದ 3 ಪಲಾವ್ ಎಲೆ 2 ಕಾಯಿಯ ಅರ್ಧ ಭಾಗದ ತುರಿಯಿಂದ ತೆಗೆದಿರುವ ಹಾಲು ಹಸಿ ಮೆಣಸು ಗೋಡಂಬಿ 7 ರಿಂದ 8 ಉದ್ದಿನಕಾಳು 2 ಚಮಚ ಗರಂ ಮಸಾಲಾ ಪುಡಿ 2 ಟೀ ಚಮಚ ದನಿಯಾ 3 -4 ಚಮಚ ಕರಿಮೆಣಸಿನ ಕಾಳು 6 ರಿಂದ 7 ಟೊಮೇಟೊ 1 (ಚಿಕ್ಕದಾಗಿ ಹೆಚ್ಚಿಕೊಂಡಿರುವ) ಸ್ವಲ್ಪ ಎಣ್ಣೆ ಉಪ್ಪು ರುಚಿಗೆ ತಕ್ಕಷ್ಟು ಕೊತ್ತೊಂಬರಿ ಸೊಪ್ಪು ಮಾಡುವ ವಿಧಾನ -  ಮೊದಲು ಒಂದು ಪಾತ್ರೆಯ...

ರುಚಿ ರುಚಿಯಾದ ವೆಜ್ ಕಟ್ಲೆಟ್

Image
 ಚುಮು ಚುಮು ಮಳೆಗೆ ಬಿಸಿ ಬಿಸಿಯಾದ ಖಾದ್ಯಗಳನ್ನು ಸವಿಯುತ್ತಿದ್ದರೇ, ಹೊತ್ತು ಹೋಗುವುದೇ ತಿಳಿಯುವುದಿಲ್ಲ. ಒಂದಷ್ಟು ತರಕಾರಿಯಿದ್ದರೆ ಮನೆಯಲ್ಲಿಯೇ ವೆಜ್ ಕಟ್ಲೆಟ್ ಗಳನ್ನು ಮಾಡಿ ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು ಆಲೂಗಡ್ಡೆ -4, ಈರುಳ್ಳಿ ಎರಡು, ಎರಡು ಕ್ಯಾರೆಟ್, ಕಾಲು ಕಪ್ ಹಸಿ ಬಟಾಣಿ. ಕಾಲು ಕಪ್ ಬ್ರೆಡ್ ತುಣುಕುಗಳು. ಒಂದು ಚಮಚ ಮೈದಾ, ಒಂದು ಚಮಚ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಕಾರದ ಪುಡಿ ಮತ್ತು ಗರಂ ಮಸಾಲೆ ಪುಡಿ. ವಿಧಾನ: ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಕೈಯಿಂದ ಪುಡಿಪುಡಿ ಮಾಡಿಟ್ಟು ಕೊಳ್ಳಿ. ಕ್ಯಾರೆಟನ್ನು ಪುಟ್ಟಪುಟ್ಟದಾಗಿ ಕತ್ತರಿಸಿ ಬಟಾಣಿ ಕಾಳಿ ನೊಂದಿಗೆ ಬೇಯಿಸಿ. ಈರುಳ್ಳಿ ಕತ್ತರಿಸಿಟ್ಟು ಕೊಳ್ಳಿ. ಬಾಣಲೆಯಲ್ಲಿ ಎಣ್ಣೆಹಾಕಿ ಬಿಸಿಮಾಡಿ ಈರುಳ್ಳಿ ತುಣುಕುಗಳನ್ನು ಹಾಕಿ ಹುರಿಯಿರಿ. ಇದಕ್ಕೆ ಬೆಂದ ಆಲೂ, ಕ್ಯಾರೆಟ್ ಮತ್ತು ಬಟಾಣಿ ಸೇರಿಸಿ ನೀರಿಂಗುವ ತನಕ ಹುರಿಯಿರಿ. ಉಪ್ಪು ಖಾರಪುಡಿ, ಗರಂ ಮಸಾಲೆಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಒಲೆಯಿಂದ ಕೆಳಗಿರಿಸಿ.ಪಾತ್ರೆಯೊಂದರಲ್ಲಿ ಮೈದಾ ಮತ್ತು ಅಕ್ಕಿಹುಡಿಯನ್ನು ಸೇರಿಸಿ ಸ್ಪಲ್ಪ ನೀರುಹಾಕಿ ಪೇಸ್ಟ್ ಮಾಡಿಟ್ಟು ಕೊಳ್ಳಿ. ತರಕಾರಿ ಮಿಶ್ರಣವನ್ನು ಉಂಡೆಗಳಾಗಿಸಿ ಈ ಪೇಸ್ಟಿನಲ್ಲಿ ಮುಳುಗಿಸಿ ಇದಕ್ಕೆ ಬ್ರೆಡ್ ತುಣುಕುಗಳನ್ನು ಸೇರಿಸಿ ಬಾಳೆಎಲೆ ಅಥವಾ ದಪ್ಪ ಪ್ಲಾಸ್ಟಿಕ್‌ಗೆ ಎಣ್ಣೆ ಸವ...

ರುಚಿಕರವಾದ ಖರ್ಜೂರದ ಲಾಡು ಮಾಡುವ ಬಗೆ ಇಲ್ಲಿದೆ ನೋಡಿ

Image
ಮಕ್ಕಳಿಗೆ ಹೊರಗಡೆಯಿಂದ ತಿಂಡಿ ತಂದು ಕೊಡುವುದರ ಬದಲು ಮನೆಯಲ್ಲಿ ರುಚಿಕರವಾದ ತಿಂಡಿಗಳನ್ನು ಮಾಡಿಕೊಟ್ಟರೆ ಅವರ ಆರೋಗ್ಯಕ್ಕೂ ಒಳ್ಳೆಯದು. ಮನೆಯಲ್ಲಿ ಸುಲಭವಾಗಿ ಖರ್ಜೂರದ ಲಾಡು ಮಾಡಿಕೊಡುವುದರ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು ಖರ್ಜೂರ 1 ಬಟ್ಟಲು ಕತ್ತರಿಸಿದ ಬಾದಾಮಿ - ಸ್ವಲ್ಪ ತುಪ್ಪ - 3 ಚಮಚ ಕತ್ತರಿಸಿದ ಗೋಡಂಬಿ- ಸ್ವಲ್ಪ ದ್ರಾಕ್ಷಿ – 15 ಕಾಳು ತುರಿದ ಕೊಬ್ಬರಿ - ಸ್ವಲ್ಪ ಗಸಗಸೆ - 1 ಚಮಚ ಮಾಡುವ ವಿಧಾನ ಖರ್ಜೂರವನ್ನು ಬೀಜದಿಂದ ಬೇರ್ಪಡಿಸಿ  ರುಬ್ಬಿಕೊಳ್ಳಬೇಕು.  ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 3 ಚಮಚ ತುಪ್ಪವನ್ನು ಹಾಕಬೇಕು. ನಂತರ ಬಾದಾಮಿ, ಗೋಡಂಬಿ, ದ್ರಾಕ್ಷಿ, ಕೊಬ್ಬರಿ, ಗಸಗಸೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ರುಬ್ಬಿಕೊಂಡ ಖರ್ಜೂರವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು, ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿದರೆ ರುಚಿಕರ ಹಾಗೂ ಆರೋಗ್ಯಕರವಾದ ಖರ್ಜೂರದ ಲಾಡು ಸವಿಯಲು ಸಿದ್ಧ.

ಚಪಾತಿಯೊಂದಿಗೆ ರುಚಿಯಾದ ತರಕಾರಿಗಳ ಸಾಗು ಮಾಡಿ ಸವಿಯಿರಿ..

Image
ಯಾವಾಗಲೂ ಚಪಾತಿಯೊಂದಿಗೆ ಪಲ್ಯ ಮತ್ತು ಚಟ್ನಿಯನ್ನು ಮಾಡಿಕೊಂಡು ತಿಂದು ಬೇಸರವಾಗಿದ್ದರೆ ಒಮ್ಮೆ ತರಕಾರಿಗಳ ಸಾಗು ಮಾಡಿ ರುಚಿ ನೋಡಿ. ಸರಿಹೊಂದುವ ಯಾವುದೇ ತರಕಾರಿಗಳನ್ನು ನೀವು ಇದರಲ್ಲಿ ಬಳಸಬಹುದು. ಹಲವು ಪೌಷ್ಟಿಕಾಂಶಗಳನ್ನು ಒದಗಿಸುವುದರೊಂದಿಗೆ ತರಕಾರಿಗಳು ಆರೋಗ್ಯಕ್ಕೆ ಉತ್ತಮವಾದುದಾಗಿದೆ. ಸಾಗು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ. ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್ - 1 ಬೀನ್ಸ್ - 8-10 ಬಟಾಟೆ - 2 ಹೂಕೋಸು - 1/4 ಕಪ್ ಹಸಿರು ಬಟಾಣಿ - 1/2 ಕಪ್ ಕಾಯಿತುರಿ - 1/2 ಕಪ್ ಹಸಿಮೆಣಸು - 2 ದನಿಯಾ - 2 ಚಮಚ ಜೀರಿಗೆ - 1/2 ಚಮಚ ಚೆಕ್ಕೆ - 2 ಇಂಚು ಲವಂಗ - 2 ಕಾಳುಮೆಣಸು - 4-5 ಸಾಸಿವೆ - 1/2 ಚಮಚ ಉದ್ದಿನಬೇಳೆ - 2 ಚಮಚ ಕರಿಬೇವು - ಸ್ವಲ್ಪ ಎಣ್ಣೆ - 6-7 ಚಮಚ ಮಾಡುವ ವಿಧಾನ: ಹಸಿರು ಬಟಾಣಿಯನ್ನು ಹಿಂದಿನ ದಿನ ರಾತ್ರಿಯೇ ನೆನೆಸಿಟ್ಟುಕೊಳ್ಳಬೇಕು. ಬಟಾಟೆ, ಹೂಕೋಸು, ಕ್ಯಾರೆಟ್ ಅನ್ನು ಹೆಚ್ಚಿಕೊಳ್ಳಿ. ಹೆಚ್ಚಿದ ತರಕಾರಿಗಳೊಂದಿಗೆ ನೆನೆಸಿದ ಬಟಾಣಿಯನ್ನು ಸೇರಿಸಿ ಬೇಯಲು ಅಗತ್ಯವಿರುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕುಕ್ಕರ್‌ನಲ್ಲಿ ಒಂದರಿಂದ ಎರಡು ಸೀಟಿಯನ್ನು ಹಾಕಿಸಿ. ಮಿಕ್ಸಿ ಜಾರ್‌ಗೆ ಕಾಯಿತುರಿ, ಚೆಕ್ಕೆ, ಲವಂಗ, ದನಿಯಾ, ಜೀರಿಗೆ, ಕಾಳುಮೆಣಸು, 2 ಹಸಿಮೆಣಸು ಮತ್ತು ಹುರಿದ ಉದ್ದಿನಬೇಳೆ 1 ಚಮಚ ಹಾಕಿ ಸ್ವಲ್ಪ ನೀರನ್ನು ಸೇರಿಸಿ ...

ಬಾಯಿ ಚಪ್ಪರಿಸಕೊಂಡು ತಿನ್ನಬಹುದಾದ ಚಿಕನ್ ಗ್ರೀನ್ ಮಸಾಲಾ

Image
ಚಿಕನ್ ಸುಕ್ಕಾ, ಚಿಕನ್ ಸಾರಿನಂತೆ ಚಿಕನ್ ಗ್ರೀನ್ ಮಸಾಲ ಕೂಡ ರುಚಿಯಲ್ಲಿ ಏನೂ ಕಡಿಮೆ ಇಲ್ಲ. ಕಡಿಮೆ ಸಮಯದಲ್ಲಿ ಬೇಗನೆ ಮಾಡಿ ಮುಗಿಸಬಹುದು. ರೊಟ್ಟಿ, ಚಪಾತಿ, ಅನ್ನದ ಜತೆ ಸವಿಯಬಹುದು. ಬೇಕಾಗಿರುವ ಸಾಮಾಗ್ರಿಗಳು :  ಚಿಕನ್‌ - 1ಕೆ.ಜಿ., ತಾಜಾ ಕೊತ್ತಂಬರಿ ಸೊಪ್ಪು - 1ಕಟ್ಟು, ಹಸಿ ಮೆಣಸಿನಕಾಯಿ - 7, ಶುಂಠಿ - 1 1/2 ಇಂಚು, ಬೆಳ್ಳುಳ್ಳಿ - 9 ಎಸಳು, ನೀರುಳ್ಳಿ - 3, ಲವಂಗ – 3, ಚಕ್ಕೆ - 2 ಇಂಚು ಗಾತ್ರದ್ದು, ಕಾಳು ಮೆಣಸು – 5 ಕಾಳು, ಅರಶಿನ ಹುಡಿ - 1/4 ಟೀ ಚಮಚ, ಟೊಮ್ಯಾಟೋ - 3, ಗಸಗಸೆ - 2 ಟೀ ಚಮಚ, ಜೀರಿಗೆ ಕಾಳು - 1/2 ಟೀ ಚಮಚ, ತುಪ್ಪ - 1 ಟೇಬಲ್‌ ಚಮಚ, ರುಚಿಗೆ ಬೇಕಾಗಿರುವಷ್ಟು ಉಪ್ಪು. ತಯಾರಿಸುವ ವಿಧಾನ  ಟೊಮ್ಯಾಟೋ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಸಾಮಾನುಗಳನ್ನು ಹದವಾದ ಪೇಸ್ಟ್‌ ರೂಪಕ್ಕೆ ಅರೆದುಕೊಳ್ಳಿ. ಚಿಕನ್‌ ಅನ್ನು ಚೆನ್ನಾಗಿ ತೊಳೆದು ಇಡಿ. ಒಂದು ಬಾಣಲೆ ತೆಗೆದುಕೊಂಡು ತುಪ್ಪವನ್ನು ಬಿಸಿಮಾಡಿ, ಕತ್ತರಿಸಿದ ಈರುಳ್ಳಿ 1, ಟೊಮ್ಯಾಟೋ ಮತ್ತು ಚಿಕನ್‌ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಈಗ ಅರೆದಿಟ್ಟುಕೊಂಡಿರುವ ಮಸಾಲೆಯನ್ನು ಬೆರೆಸಿ ಬಳಿಕ ದಪ್ಪಗಾಗುವ ತನಕ ಚೆನ್ನಾಗಿ ಬೇಯಿಸಿ.

ಬಾಯಲ್ಲಿ ನೀರೂರಿಸುವ ರಸಗುಲ್ಲಾ ಮಾಡುವ ಬಗೆ ಇಲ್ಲಿದೆ ನೋಡಿ

Image
ರಸಗುಲ್ಲಾ ಇದು  ಭಾರತೀಯ ಸಿಹಿ ತಿಂಡಿಗಳಲ್ಲಿ ಒಂದು. ಬಾಯಲ್ಲಿ ನೀರೂರಿಸುವ ಈ ತಿನಿಸು ಮಾಡುವುದಕ್ಕೆ ಇನ್ನೂ ಸುಲಭ. ಮಾಡುವ ಬಗೆ ಇಲ್ಲಿದೆ ನೋಡಿ. ಸಾಮಾಗ್ರಿಗಳು ಹಾಲು -1ಲೀಟರ್ ಸಕ್ಕರೆ -2ಕಪ್ ಐಸ್ ಕ್ಯೂಬ್ಸ್ 10 ಲಿಂಬೆ ರಸ -1 ಚಮಚ ನೀರು ೩ ೧/೨ ಕಪ್ ಏಲಕ್ಕಿ ಪುಡಿ -1/2ಚಮಚ ಪಿಸ್ತಾ ಅಲಂಕಾರಕ್ಕೆ ಮೈದಾ ಹಿಟ್ಟು ೨ ಚಮಚ ಮಾಡುವ ವಿಧಾನ ಹಾಲನ್ನು ಕುದಿಯಲು ಬಿಡಬೇಕು.ಹಾಲು ಕುದಿಯಲು ಶುರುವಾದ ನಂತರ ಲಿಂಬೆ ರಸ ಹಾಕಿ ಚೆನ್ನಾಗಿ ತಿರುವಿ. ಹಾಲಿನಿಂದ ನೀರು ಬೇರೆಯಾದ ಮೇಲೆ ಉರಿ ಆರಿಸಬೇಕು. ನಂತರ ಐಸ್ ಕ್ಯೂಬ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಕಾಟನ್ ಬಟ್ಟೆಯಲ್ಲಿ ಒಡೆದ ಹಾಲನ್ನು ಸೋಸಿ ಚೆನ್ನಾಗಿ ತೊಳೆದು ನೀರು ಸಂಪೂರ್ಣವಾಗಿ ಬಸಿಯಲು ಬಿಡಿ. ಅರ್ಧ ಗಂಟೆಯ ಬಿಟ್ಟು ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಮೈದಾ ಮತ್ತು ೧/೨ ಚಮಚ ಸಕ್ಕರೆ ಹಾಕಿ ಚೆನ್ನಾಗಿ ನಾದಿ. ನಾದಿದ ಪನಿರನ್ನು ಚಿಕ್ಕ ಉಂಡೆಗಳನ್ನಾಗಿ ಮಾಡಿ. ಒಂದು ಕುಕ್ಕರ್ ನಲ್ಲಿ ಸಕ್ಕರೆ,ಏಲಕ್ಕಿ ಪುಡಿ ಮತ್ತು ನೀರನ್ನು ಹಾಕಿ ಸಕ್ಕರೆ ಪಾಕ ತಯಾರಿಸಿ. ಮತ್ತು ಆ ಪಾಕಕ್ಕೆ ಪನೀರ್ ಉಂಡೆಗಳನ್ನು ಹಾಕಿ. ನಂತರ ಕುಕ್ಕರ್ ಮುಚ್ಚಳ ಮುಚ್ಚಿ ೧ ಕೂಗು ಕೂಗಿಸಬೇಕು. ನಂತರ ಉರಿ ಸಣ್ಣ ಮಾಡಿ ೫ ನಿಮಿಷ ಬಿಡಬೇಕು. ೫ ನಿಮಿಷದ ನಂತರ ಉರಿ ಆರಿಸಿ ತಣಿಯಲು ಬಿಡಿ. ತಣ್ಣಗಾದ ನಂತರ ಸರ್ವ್ ಮಾಡಿ.