Posts

Showing posts from March, 2018

ಸರಳ ಮತ್ತು ರುಚಿಕರ ಬ್ರೆಡ್ ಪಿಜ್ಜಾ

Image
  ಬೇಕಾಗುವ ಸಾಮಾಗ್ರಿಗಳು -  ಬ್ರೆಡ್- 4 ಸ್ಲೈಸ್ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ- 1/4 ಕಪ್ ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಮ್- 1/4 ಕಪ್ ಚೀಸ್ -  1/4 ಕಪ್ ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್- 4 ಚಮಚ ಕಾಳುಮೆಣಸಿನಪುಡಿ ಅಥವಾ ಇಟಾಲಿಯನ್ ಮಸಾಲೆ- 1 ಚಿಟಿಕೆ ಚಿಲ್ಲಿ ಫ್ಲೇಕ್ಸ್- ಸ್ವಲ್ಪ ಕ್ಯಾಬೇಜ್ ಎಲೆಗಳು- 4 ಚಮಚ ಮಾಯೊನೀಸ್ - 4 ಚಮಚ   ಮಾಡುವ ವಿಧಾನ -  - ಮೊದಲು ಬ್ರೆಡ್‍ನ ಒಂದು ಬದಿಗೆ 1 ಚಮಚದಷ್ಟು ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್ ಸವರಿಕೊಳ್ಳಿ. ಅದರ ಮೇಲೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಮ್ ತುಂಡುಗಳು, ಕ್ಯಾಬೇಜ್ ಎಲೆಗಳನ್ನು ಹಾಕಿ.  - ಅದರ ಮೇಲೆ ಕಾಳುಮೆಣಸಿನಪುಡಿ ಮತ್ತು ಚಿಲ್ಲಿ ಫ್ಲೇಕ್ಸ್ ಹರಡಿ. - ನಂತರ ಅದರ ಮೇಲೆ 1 ಚಮಚದಷ್ಟು ಮಾಯೊನೀಸ್ ಮತ್ತು ಚೀಸ್ ಹಾಕಿ ಹರಡಿ. - ನಂತರ ಒಲೆಯ ಮೇಲೆ ತವಾ ಇಟ್ಟು ಬಿಸಿಯಾದ ಬಳಿಕ ಅದಕ್ಕೆ ಸ್ವಲ್ಪ ತುಪ್ಪ ಸವರಿ ಚೀಸ್ ಕರಗುವವರೆಗೆ ಅಂದ್ರೆ 5-7  ನಿಮಿಷಗಳ ಕಾಲ ಒಲೆಯಲ್ಲಿ ಬಿಸಿ ಮಾಡಿ. ಒಲೆಯಿಂದ ತೆಗೆದ ಬ್ರೆಡ್ ಪಿಜ್ಜಾವನ್ನು ಬಿಸಿಬಿಸಿ ಇರುವಾಗಲೇ ಸವಿಯಿರಿ.

ಸ್ವಾದಿಷ್ಠ ಈರುಳ್ಳಿ ಚಿಕನ್

Image
  ಬೇಕಾಗುವ ಸಾಮಗ್ರಿಗಳು - ಸ್ವಚ್ಛಗೊಳಿಸಿದ ಚಿಕನ್ - ಅರ್ಧ ಕೆಜಿ ಚಿಕ್ಕದಾಗಿ ಹೆಚ್ಚಿದ ಟೊಮಾಟೊ - 3-4 ಚಿಕ್ಕದಾಗಿ ಹೆಚ್ಚಿದ ಈರುಳ್ಳಿ- 3-4  ಶುಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ ಮೊಸರು - ಒಂದು ಕಪ್ ಹಸಿಮೆಣಸಿನ ಕಾಯಿ - 5-6 ಖಾರ ಪುಡಿ - 1/2 ಚಮಚ ಎಣ್ಣೆ ಉಪ್ಪು  ಮಾಡುವ ವಿಧಾನ - ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. - ಅದಕ್ಕೆ ಟೊಮಾಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಕಾಯಿ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ 5-10 ನಿಮಿಷಗಳ ಕಾಲ ಬೇಯಿಸಿ - ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ಚಿಕನ್ ಹಾಕಿ 10-15 ನಿಮಿಷಗಳ ಕಾಲ ಬೇಯಿಸಿ - ಹುರಿದ ತುಂಡುಗಳನ್ನು ಈರುಳ್ಳಿ ಮಿಶ್ರಣಕ್ಕೆ ಸೇರಿಸಿ. - ಚಿಕನ್ ಬೆಂದ ನಂತರ, ಮೊಸರನ್ನು ಸೇರಿಸಿ 5 ನಿಮಿಷ ಬೇಯಿಸಿ. ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿದರೆ ಈರುಳ್ಳಿ ಚಿಕನ್ ರೆಡಿ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ದಹಿ ಬೆಂಡೆಯ ಪಾಕ ವಿಧಾನ

Image
ಬೆಂಡೆ, ಓಕ್ರಾ, ಲೇಡೀ ಫಿಂಗರ್ ಎಂದೆಲ್ಲಾ ಕರೆಯುವ ಈ ತರಕಾರಿ ಸಮೃದ್ಧವಾದ ಕಬ್ಬಿಣಾಂಶವನ್ನು ಹೊಂದಿದೆ. ಇದರಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಭಾರತೀಯರು ಹೆಚ್ಚು ಪ್ರೀತಿಸುತ್ತಾರೆ. ಹೃದಯದ ಆರೋಗ್ಯಕ್ಕೆ ಬಹು ಉತ್ತಮವಾದ ತರಕಾರಿ. ಇದರಲ್ಲಿ ಕ್ಯಾಲೋರಿ ಗುಣವು ಬಹಳ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ತೂಕ ಇಳಿಸಲು ಸಹ ಇದು ಸಹಾಯ ಮಾಡುತ್ತದೆ. ಮೊಸರಿನೊಂದಿಗೆ ಬೆಂಡೆಕಾಯಿ ಸೇರಿಸಿ ಮಾಡುವ ಆಹಾರ ಪದಾರ್ಥವು ಅತ್ಯುತ್ತಮವಾದ ಆಹಾರ ಪದಾರ್ಥ ಎನ್ನಬಹುದು.  ಮೊಸರಿನೊಂದಿಗೆ ಬೆಂಡೆಯನ್ನು ಬೆರೆಸಿ ತಯಾರಿಸುವ ವಿಶೇಷ ಪದಾರ್ಥವನ್ನು ಅನ್ನ ಮತ್ತು ಚಪಾತಿಯೊಂದಿಗೆ ಸಹ ಸವಿಯಬಹುದು. ಮೊಸರು, ವಿಶೇಷ ಬಗೆಯ ಮಸಾಲ ಪದಾರ್ಥಗಳು ಹಾಗೂ ಬೆಂಡೆಯ ಮಿಶ್ರಣದಿಂದ ತಯಾರಾಗುವ ದಹಿ ಬೆಂಡೆ ವಿಭಿನ್ನವಾದ ರುಚಿಯೊಂದಿಗೆ ನಾಲಿಗೆ ಚಪ್ಪರಿಸುವಂತೆ ಮಾಡುವುದು.  ಕಡಿಮೆ ಪ್ರಮಾಣದ ಕ್ಯಾಲೋರಿ ಹಾಗೂ ಮಸಾಲೆ ಭರಿತ ಪಾಕವಿಧಾನವನ್ನು ಬಯಸುವವರಿಗೆ ಇದು ಅತ್ಯುತ್ತಮವಾದ ಪಾಕವಿಧಾನ ಆಗುವುದು. ಸಾಮಾನ್ಯವಾಗಿ ಭಾರತದೆಲ್ಲೆಡೆ ತಯಾರಿಸುವ ಈ ಪಾಕವಿಧಾನವನ್ನು ಬಹಳ ಕಡಿಮೆ ಸಮಯದಲ್ಲಿ, ಸರಳ ವಿಧಾನದ ಮೂಲಕ ಸುಲಭವಾಗಿ ತಯಾರಿಸಬಹುದು. ನಿಮಗೂ ಈ ಪಾಕವಿಧಾನವನ್ನು ತಯಾರಿಸಬೇಕು ಹಂಬಲವಾಗುತ್ತಿದ್ದರೆ ಈ ಮುಂದೆ ನೀಡಲಾಗಿರುವ ವೀಡಿಯೋ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ವಿವರಿಸಿ. Ingredients  ಹೆಚ್ಚಿಕೊಂಡ ಬೆಂಡೆಕಾಯಿ -2 ಕಪ್  ಉಪ್ಪು ...

ಮಶ್ರೂಮ್ ರೈಸ್

Image
  ಬೇಕಾಗುವ ಸಾಮಗ್ರಿಗಳು   ಅನ್ನ - 1 ½ ಕಪ್  ಅಣಬೆ - 500 ಗ್ರಾಂ ಈರುಳ್ಳಿ - 1 (ಹೆಚ್ಚಿದ್ದು)  ಕರಿಮೆಣಸು- 2 ಟೀ.ಚಮಚ  ಖಾರದಪುಡಿ - 1 ಟೀ.ಚಮಚ  ಸಾಸಿವೆ ಪುಡಿ - 1 ಟೀ.ಚಮಚ  ಕೊತ್ತಂಬರಿ ಪುಡಿ - 1 ಟೀ.ಚಮಚ  ಹಸಿ ಮೆಣಸಿನಕಾಯಿಗಳು - 1  ಬೆಣ್ಣೆ - 1 ಟೀ.ಚಮಚ  ಎಣ್ಣೆ - 2 ಟೀ.ಚಮಚ  ಉಪ್ಪು   ಮಾಡುವ ವಿಧಾನ  - ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಡಿ, ಇದಕ್ಕೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನ ಕಾಯಿಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ.  - ಅದಕ್ಕೆ ಖಾರದ ಪುಡಿ, ಸಾಸಿವೆ ಪುಡಿ ಮತ್ತು ಕೊತ್ತಂಬರಿ ಪುಡಿಯನ್ನು ಹಾಕಿ ಹುರಿಯಿರಿ. - ಇದಕ್ಕೆ ಮಶ್ರೂಮ್, ಕರಿಮೆಣಸು ಪುಡಿ, ಅನ್ನವನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ - 10 ನಿಮಿಷ ಬೇಯಿಸಿ ಉಪ್ಪನ್ನು ಹಾಕಿದರೆ ರುಚಿಕರ ಮಶ್ರೂಮ್ ರೈಸ್ ಸವಿಯಲು ಸಿದ್ದ.

ಹೀರೆಕಾಯಿ ಮತ್ತು ಬೇರುಹಲಸು(ದೇವಿ ಹಲಸು) ಕಾಯಿಯ ಬಜ್ಜಿ ಮಾಡಿ ನೋಡಿ..!!

Image
ಹೀರೆಕಾಯಿ ಅಧಿಕ ಪೌಷ್ಠಿಕಾಂಶ ಮತ್ತು ಫೈಬರ್ ಅಂಶಗಳನ್ನು ಹೊಂದಿದ್ದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದಾಗಿದೆ. ಇದರಿಂದ ಬಜ್ಜಿ, ಸಾಂಬಾರ್, ಚಟ್ನಿ, ಪಲ್ಯ ಮುಂತಾದ ಪದಾರ್ಥಗಳನ್ನು ಮಾಡಬಹುದು.   ಕನ್ನಡದಲ್ಲಿ ಬೇರು ಹಲಸು ಎಂದು ಕರೆಯುವ ಇದನ್ನು ದೇವಿ ಹಲಸು ಎಂದೂ ಕರೆಯುತ್ತಾರೆ. ಇದರಲ್ಲಿ ಬೀಜಗಳು ಇರುವುದಿಲ್ಲ. ಈ ಹಲಸಿನ ಮರದ ಬೇರಿನಿಂದಲೇ ಇನ್ನೊಂದು ಗಿಡ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಇದನ್ನು ಬೇರು ಹಲಸು ಎಂದು ಕರೆಯುತ್ತಾರೆ. ಇದನ್ನು ಬಳಸಿ ನಾವು ಪಲ್ಯ, ಸಾಂಬಾರ್, ಬಜ್ಜಿ, ಬೋಂಡಾ, ಚಿಪ್ಸ್ ಮತ್ತು ಇನ್ನೂ ಅನೇಕ ಪದಾರ್ಥಗಳನ್ನು ಮಾಡಬಹುದು. ಹೀರೆಕಾಯಿ ಮತ್ತು ಬೇರು ಹಲಸಿನ ಬಜ್ಜಿ ಮಾಡುವುದು ಹೇಗೆ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಈ ಲೇಖನವನ್ನು ಓದಿ.   ಬೇಕಾಗುವ ಸಾಮಗ್ರಿಗಳು: ಹೀರೆಕಾಯಿ - 1 ದೇವಿ ಹಲಸು - 1/2 ಕಡಲೆ ಹಿಟ್ಟು - 1 1/2 ಕಪ್ ಅಕ್ಕಿ ಹಿಟ್ಟು - 1/2 ಕಪ್ ಓಮಕಾಳು - 1 ಚಮಚ ಅರಿಶಿಣ ಪುಡಿ - 1/2 ಚಮಚ ಇಂಗು - 1/4 ಚಮಚ ಅಚ್ಚಖಾರದ ಪುಡಿ - 2-3 ಚಮಚ ಉಪ್ಪು - ರುಚಿಗೆ ಅಡುಗೆ ಸೋಡಾ - 1/4 ಚಮಚ (ಅಗತ್ಯವಿದ್ದಲ್ಲಿ ಮಾತ್ರ)   ಮಾಡುವ ವಿಧಾನ: ಬೇರು ಹಲಸು ಮತ್ತು ಹೀರೆಕಾಯಿಯ ಸಿಪ್ಪೆ ತೆಗೆದು ಬೇರೆ ಬೇರೆಯಾಗಿ ಸ್ಲೈಸ್‌ಗಳನ್ನು ಮಾಡಿಕೊಳ್ಳಿ. ಬೇರು ಹಲಸನ್ನು ಸ್ವಲ್ಪ ತೆಳ್ಳಗಿನ ಸ್ಲೈಸ್ ಮಾಡಿದರೆ ಉತ್ತಮ. ಬೇರು ಹಲಸಿನ ಸ್ಲೈಸ್‌ಗೆ 1/2 ಚಮಚ ಉಪ್ಪನ್ನು ಹ...