Posts

Showing posts from October, 2019

ರುಚಿಕರವಾಗಿ ಗಿರಮಿಟ್ಟು ತಯಾರಿಸುವುದು ಹೇಗೆ?

Image
ಸಾಯಂಕಾಲವಾದರೆ ಬಾಯಾಡಿಸಲು ಏನಾದರೂ ತಿನ್ನಲು ಬೇಕು ಎಂದು ಅನ್ನಿಸುವುದು ಸಹಜ. ಹಾಗಾಗಿ ಚಹಾದೊಂದಿಗೆ ರುಚಿಕರವಾಗಿ ಗಿರಮಿಟ್ಟನ್ನು ತಯಾರಿಸಿಕೊಂಡು ಸವಿಯಬಹುದು.  ತಯಾರಿಸಲು ಬೇಕಾಗುವ ಸಾಮಗ್ರಿಗಳು: * ಮಂಡಕ್ಕಿ 1/4 ಕೆಜಿ * ಟೊಮೆಟೊ 2 * ಈರುಳ್ಳಿ 2 * ಹಸಿಮೆಣಸು 4  * ಬೆಳ್ಳುಳ್ಳಿ 2 ಎಸಳು * ಕೊತ್ತಂಬರಿ ಸೊಪ್ಪು 1 ಹಿಡಿ * ಹುರಿಗಡಲೆ ಪುಡಿ 4 ಚಮಚ * ಎಣ್ಣೆ 3 ಚಮಚ * ಕರಿಬೇವು 8 ರಿಂದ 10 ಎಲೆಗಳು * ಉಪ್ಪು ರುಚಿಗೆ ತಕ್ಕಷ್ಚು ತಯಾರಿಸುವ ವಿಧಾನ: ಮೊದಲು ಟೊಮೆಟೊ, ಈರುಳ್ಳಿ, ಹಸಿಮೆಣಸನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಕರಿಬೇವು, ಬೆಚ್ಚಿದ ಟೊಮೆಟೊ, ಈರುಳ್ಳಿ, ಹಸಿಮೆಣಸು, ಜಜ್ಜಿಕೊಂಡ ಬೆಳ್ಳುಳ್ಳಿ ಉಪ್ಪನ್ನು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು. ನಂತರ ಮಸಾಲೆಯು ಆರಿದ ಮೇಲೆ ಈ ಮಸಾಲೆಯನ್ನು ಮಂಡಕ್ಕಿ ಜೊತೆಗೆ ಸೇರಿಸಿ ಚೆನ್ನಾಗಿ ತಿರುವಬೇಕು. ಇದನ್ನು ಪ್ಲೇಟ್‌ಗೆ ಹಾಕಿದೆ ಮೇಲೆ ಹುರಿಗಡಲೆ ಪುಡಿ, ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಉದರಿಸಿಕೊಂಡರೆ ರುಚಿಕರವಾದ ಗಿರಮಿಟ್ಟು ಸವಿಯಲು ಸಿದ್ದ. 

ದೀಪಾವಳಿ ಹಬ್ಬದಂದು ಮಕ್ಕಳಿಗಾಗಿ ಮಾಡಿ ಆರೋಗ್ಯಕರವಾದ ಡ್ರೈ ಫ್ರೂಟ್ಸ್ ಉಂಡೆ

Image
ದೀಪಾವಳಿ ಹಬ್ಬದಂದು ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡುತ್ತಾರೆ. ಅದರ ಜೊತೆಗೆ ಮಕ್ಕಳಿಗೆ ಇಷ್ಟವಾದ ಡ್ರೈ ಪ್ರೂಟ್ಸ್ ಉಂಡೆಯನ್ನು ಮಾಡಿ. ಬೇಕಾಗು ಸಾಮಾಗ್ರಿಗಳು: ಬೆಲ್ಲದ ಪುಡಿ 1ಕಪ್, ಉತ್ತುತ್ತೆ ½ ಕಪ್ , ಖರ್ಜೂರ ½ ಕಪ್, ಗೋಡಂಬಿ ¼ ಕಪ್, ಒಣದ್ರಾಕ್ಷಿ ¼ ಕಪ್, ಬಾದಾಮಿ ¼ ಕಪ್, ತುರಿದ ಕೊಬ್ಬರಿ ¼ ಕಪ್, ಗಸಗಸೆ 1 ಚಮಚ, ಏಲಕ್ಕಿ ಪುಡಿ, ತುಪ್ಪ ¼ ಕಪ್ , ಅಂಟು 2 ಚಮಚ. ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ಗಸಗಸೆ, ಹಾಗೂ ಕೊಬ್ಬರಿಯನ್ನು ಬೇರೆ ಬೇರೆಯಾಗಿ ಹುರಿಯಬೇಕು. ನಂತರ ಅವೆರಡನ್ನು ತೆಗೆದಿಟ್ಟುಕೊಳ್ಳಬೇಕು. ನಂತರ ಅದೇ ಬಾಣಲೆಗೆ  2 ಚಮಚ ತುಪ್ಪ ಹಾಕಿ , ಬಾದಾಮಿ, ಗೋಡಂಬಿ, ದ್ರಾಕ್ಷಿ, ಖರ್ಜೂರ, ಉತ್ತುತ್ತೆ ಹಾಕಿ ಹುರಿಯಬೇಕು. ಅದನ್ನು ಹುರಿದ ಗಸಗಸೆ ಹಾಗೂ ಕೊಬ್ಬರಿಯೊಂದಿಗೆ ಸೇರಿಸಿ. ನಂತರ ಬಾಣಲೆಗೆ 4 ಚಮಚ ತುಪ್ಪ ಹಾಕಿ ಪುಡಿಮಾಡಿಟ್ಟುಕೊಂಡಿರುವ ಅಂಟು ಹಾಕಿ ಅದು ಉಬ್ಬುವವರೆಗೆ ಹುರಿಯಬೇಕು. ಅದನ್ನು ಡ್ರೈ ಪ್ರೂಟ್ಸ್ ನೊಂದಿಗೆ ಸೇರಿಸಬೇಕು. ನಂತರ ಬಾಣಲೆಯಲ್ಲಿ ಬೆಲ್ಲ ಮತ್ತು ಸ್ವಲ್ಪ ನೀರು ಹಾಕಿ ಬೆಲ್ಲ ಕರಗುವವರೆಗೆ ಕೈಯಾಡಿಸಿ, ಚೆನ್ನಾಗಿ ಪಾಕವಾದ ಮೇಲೆ ಏಲಕ್ಕಿ ಹಾಕಿ, ಹುರಿದ ಡ್ರೈ ಪ್ರೂಟ್ಸ್ ಗಳನ್ನು ಹಾಕಿ ಮಿಕ್ಸ್ ಮಾಡಿ ಬಿಸಿ ಇರುವಾಗಲೇ ಉಂಡೆ ಕಟ್ಟಬೇಕು. ಆಗ ಡ್ರೈ ಪ್ರೂಟ್ಸ್ ಉಂಡೆ ರೆಡಿಯಾಗುತ್ತದೆ.

ಕಡಲೆಬೇಳೆ ಹೋಳಿಗೆ

Image
ಹೋಳಿಗೆಯು ಮಹಾರಾಷ್ಟ್ರದ ಸಿಹಿತಿಂಡಿಗಳಲ್ಲಿ ತುಂಬಾ ಪ್ರಸಿದ್ಧಿ ಪಡೆದಿರುವ ತಿನಿಸಾಗಿದೆ. ಕರ್ನಾಟಕವೂ ಅದಕ್ಕೆ ಹೊರತಾಗಿಲ್ಲ. ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ಹೋಳಿಗೆಯನ್ನು ಮಾಡಿ ಸವಿಯುತ್ತಾರೆ. ಇದು ಬೇಗ ಕೆಡುವುದಿಲ್ಲ. ಮತ್ತು ತಯಾರಿಸುವುದೂ ಸಹ ಸುಲಭವಾಗಿದೆ. ಹಾಗಾದರೆ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.. ತಯಾರಿಸಲು ಬೇಕಾಗುವ ಸಾಮಗ್ರಿಗಳು: * ಕಡಲೆಬೇಳೆ 1 ಕಪ್ * ಬೆಲ್ಲ 3/4 ಕಪ್ * ಎಣ್ಣೆ 1 ಚಮಚ * ಅರಿಶಿನ 1 ಚಮಚ * ಏಲಕ್ಕಿ ಪುಡಿ /2 ಚಮಚ * ಮೈದಾ ಹಿಟ್ಟು 1 ಕಪ್ * ಚಿರೋಟಿ ರವೆ 1/4 ಕಪ್ * ತುಪ್ಪ 5 ಚಮಚ * ಬೇಯಿಸಲು ತುಪ್ಪ/ಎಣ್ಣೆ * ಅಕ್ಕಿ ಹಿಟ್ಟು ಸ್ವಲ್ಪ ಉಪ್ಪು ಸ್ವಲ್ಪ ಮೊದಲು ಕಣಕ ತಯಾರಿಸಿಕೊಳ್ಳುವುದು ಹೇಗೆ ಎಂದು ನೋಡೋಣ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು ಮತ್ತು ಚಿರೋಟಿ ರವೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಉಪ್ಪು, ಅರ್ಧ ಚಮಚ ಅರಿಶಿನವನ್ನು ಹಾಕಿ ಎಲ್ಲವನ್ನೂ ಮಿಶ್ರಣ ಮಾಡಬೇಕು. ಈ ಮಿಶ3ಣಕ್ಕೆ 4 ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಚೆನ್ನಾಗಿ ನಾದಿಕೊಳ್ಳಬೇಕು. ಎಷ್ಟು ಚೆನ್ನಾಗಿ ನಾದಿಕೊಳ್ಳುತ್ತೀರೋ ಅಷ್ಟು ಚೆನ್ನಾಗಿ ಹೋಳಿಗೆ ಮಾಡಬಹುದು. ನಂತರ ಒಂದು ಚಮಚ ತುಪ್ಪವನ್ನು ಅದರ ಮೇಲೆ ಹಾಕಿ ಒಂದು ಗಂಟೆ ಒದ್ದೆ ಬಟ್ಟೆಯಿಂದ ಮುಚ್ಚಬೇಕು. ನಂತರ ಒದ್ದೆ ಬಟ್ಟೆಯನ್ನು ತೆಗೆ...

ಸ್ವಾದಿಷ್ಠ ಸಿಗಡಿ ಫ್ರೈ

Image
ಕರಾವಳಿ ಭಾಗದಲ್ಲಿ ಮಾಸಾಂಹಾರವನ್ನು ಕೊಬ್ಬರಿ ಎಣ್ಣೆಯಿಂದ ಹುರಿದು ತಯಾರಿಸುವುದು ಎಲ್ಲರಿಗೂ ಗೊತ್ತೇ ಇದೆ ಅಷ್ಟೇ ಅಲ್ಲ ತುಪ್ಪದಿಂದಲೂ ಕೆಲವು ಆಹಾರವನ್ನು ತಯಾರಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಮಂಗಳೂರಿನಲ್ಲಿ ತಯಾರಿಸುವ ಸಿಗಡಿ ಫ್ರೈ ತುಪ್ಪದಿಂದ ತಯಾರಿಸುವ ಖಾದ್ಯವಾಗಿದ್ದು ಇದು ಸಕತ್ ಫೇಮಸ್ ಅಂತಾನೇ ಹೇಳಬಹುದು. ಇದನ್ನು ಹೇಗೆ ತಯಾರಿಸುವುದು ಎಂಬುದರ ಸಂಪೂರ್ಣ ಮಾಹಿತಿ ನಿಮಗಾಗಿ. ಪ್ರಮಾಣ:  5 ಜನರಿಗೆ ಸಾಕಾಗುವಷ್ಟು   ಬೇಕಾಗುವ ಸಾಮಾಗ್ರಿಗಳು : ಜಂಬೋ ಸಿಗಡಿ - 500 ಗ್ರಾಂ ಲಿಂಬೆ ರಸ - 5 ಟಿ ಚಮಚ ಉಪ್ಪು - ರುಚಿಗೆ ತಕ್ಕಷ್ಟು ಬಿಳಿ ಕಾಳುಮೆಣಸು - 2 ಟಿ ಚಮಚ ಮೊಸರು - 2 1/2 ಕಪ್‌ಗಳು ಕೆಂಪು ಮೆಣಸು - 25 (ಹುರಿದದ್ದು) ಕೊತ್ತಂಬರಿ ಬೀಜ - 2 ಟಿ ಚಮಚ ಮೆಂತೆ ಬೀಜ - 1 ಟಿ ಚಮಚ ಜೀರಿಗೆ - 2 ಟಿ ಚಮಚ ಬೆಳ್ಳುಳ್ಳಿ ಎಸಳು - 12 ರಿಂದ 14 ಹುಳಿ ನೀರು - 1 1/2 ಕಪ್ ತುಪ್ಪ - 4 ಟಿ ಚಮಚ ಎಣ್ಣೆ - 2 ಟಿ ಚಮಚ ಮಾಡುವ ವಿಧಾನ: ಉಪ್ಪು, ಬಿಳಿ ಕಾಳುಮೆಣಸು, ಹಳದಿ ಮತ್ತು ಲಿಂಬೆ ರಸವನ್ನು ಸಿಗಡಿಗೆ ಲೇಪಿಸಿ 1 ಗಂಟೆ ಹಾಗೆಯೇ ಬಿಡಿ ಅದು ಚೆನ್ನಾಗಿ ಹಾಕಿದ ಮಸಾಲೆಗಳನ್ನು ಹಿರಿಕೊಂಡ ಬಳಿಕ ಪ್ಯಾನ್ ಬಿಸಿ ಮಾಡಿ ಮತ್ತು ಕಲೆಸಿದ ಸಿಗಡಿಯನ್ನು 3-4 ನಿಮಿಷಗಳಷ್ಟು ಕಾಲ ಸ್ವಲ್ಪ ಫ್ರೈ ಮಾಡಿ. ನಂತರ ಅದಕ್ಕೆ ಒಂದು ಜಾರಿನಲ್ಲಿ ಕೆಂಪು ಮೆಣಸು ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ...

ಸ್ವಾದಿಷ್ಠವಾದ ತೊಗರಿಬೇಳೆ ಚಟ್ನಿ

Image
ಪ್ರೊಟಿನ್ ಭರಿತ ತೊಗರಿಬೇಳೆಯನ್ನು ಉಪಯೋಗಿಸಿ ಒಂದು ರುಚಿಕರವಾದ ಚಟ್ನಿಯನ್ನು ತಿಳಿಸುವೆ. ಇದನ್ನು ಅನ್ನಕ್ಕೆ ಹಾಗೂ ದೋಸೆ, ರೊಟ್ಟಿಗಳಿಗೆ ನೆಂಚಿಕೊಂಡು ತಿನ್ನಲು ಉಪಯೋಗಿಸಬಹುದಾಗಿದೆ. ಬೇಕಾಗುವ ಪದಾರ್ಥಗಳು: ತೊಗರಿಬೇಳೆ- 1 ಕಪ್ ಒಣ ಮೆಣಸಿನ ಕಾಯಿ- 7-8 ತೆಂಗಿನಕಾಯಿ- 1 ಹೋಳು ಹುಣಸೆಹಣ್ಣು- 2-3 ಎಸಳು ಕರಿಬೇವು- 6-8 ಎಲೆಗಳು ಒಗ್ಗರಣೆಗೆ ಎಣ್ಣೆ- 1 ಚಮಚ ಸಾಸಿವೆ ಕಾಳು- ಕಾಲು ಚಮಚ ಮಾಡುವ ವಿಧಾನ: ಮೊದಲು ಫ್ರೈಯಿಂಗ್ ಪ್ಯಾನ್ ಗೆ ಎಣ್ಣೆಯನ್ನು ಹಾಕದೆ ತೊಗರಿಬೇಳೆಯನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಕೆಂಪಗಾಗುವವರೆಗೆ ಹುರಿದು ತೆಗೆದು ಪಕ್ಕಕ್ಕಿಡಿ. ಅದೇ ಪ್ಯಾನ್ ಗೆ ಒಂದೆರಡು ಹನಿ ಎಣ್ಣೆ ಹಾಕಿಕೊಂಡು ಒಣ ಮೆಣಸಿನ ಕಾಯಿಗಳನ್ನು ಗರಿಗರಿಯಾಗುವವರೆಗೆ ಸಣ್ಣ ಉರಿಯಲ್ಲಿ ಹುರಿದು ತೆಗೆದಿಡಿ. ಹಾಗೇ ಕರಿಬೇವಿನ ಎಲೆಗಳನ್ನು ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ಈಗ ಹುರಿದ ಮೂರೂ ಪದಾರ್ಥಗಳನ್ನು ಮಿಕ್ಸರ್ ಜಾರ್ ಗೆ ಹಾಕಿಕೊಂಡು ಜೊತೆಯಲ್ಲಿ ತೆಂಗಿನ ತುರಿ, ಹುಣಸೆಹಣ್ಣು ಮತ್ತು ಉಪ್ಪನ್ನು ಹಾಕಿಕೊಂಡು ನೀರನ್ನು ಸೇರಿಸಿಕೊಂಡು ಚಟ್ನಿಯ ಹದಕ್ಕೆ ರುಬ್ಬಿಕೊಳ್ಳಿ. ಕೊನೆಯಲ್ಲಿ ಒಗ್ಗರಣೆ ಬಟ್ಟಲಿಗೆ ಒಂದು ಚಮಚ ಎಣ್ಣೆ ಹಾಕಿ ಸಾಸಿವೆಕಾಳು ಹಾಕಿ. ಸಿಡಿದಾಗ ಒಗ್ಗರಣೆಯನ್ನು ಚಟ್ನಿಗೆ ಸೇರಿಸಿ. ರುಚಿಕರವಾದ ತೊಗರಿ ಚಟ್ನಿ ಸಿದ್ಧ. ಇದನ್ನು ಅನ್ನಕ್ಕೆ ಹಾಕಿಕೊಂಡು ತಿನ್ನಲು ಬಲು ರುಚಿ. ದ...

ತೊಗರಿಬೇಳೆ ನುಚ್ಚಿನುಂಡೆ

Image
ನುಚ್ಚಿನುಂಡೆ ಹಬೆಯಲ್ಲಿ ಬೇಯಿಸಿ ಮಾಡುವ ಕರ್ನಾಟಕದ ಜನಪ್ರಿಯವಾದ ತಿಂಡಿಯಾಗಿದೆ. ಬೇಕಾಗುವ ಸಾಮಾಗ್ರಿಗಳು: ತೊಗರಿಬೇಳೆ - 1 ಪಾವು ಹಸಿಮೆಣಸಿನಕಾಯಿ – 7-8 ಹಸಿಕೊಬ್ಬರಿ – 1 ಬಟ್ಟಲು ಕೊತ್ತಂಬರಿ ಸೊಪ್ಪು ಇಂಗು – ಅರ್ಧ ಟೀಸ್ಪೂನ್ ಜೀರಿಗೆ – ಚಮಚ ಮಾಡುವ ವಿಧಾನ:  ಮೊದಲಿಗೆ ತೊಗರಿಬೇಳೆಯನ್ನು 5-6 ಗಂಟೆಗಳ ಕಾಲ ನೆನೆಹಾಕಿ. ನಂತರ ಅದನ್ನು ನೀರಿನಿಂದ ಬಸಿದುಕೊಂಡು, ಅದಕ್ಕೆ ಹಸಿಮೆಣಸಿನ ಕಾಯಿ ಸೇರಿಸೊಂಡು ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣಕ್ಕೆ ಕೊಬ್ಬರಿ, ಕೊತ್ತಂಬರಿಸೊಪ್ಪು, ಜೀರಿಗೆ, ಉಪ್ಪು, ಇಂಗು ಸೇರಿಸಿಕೊಂಡು ವಡೆಯ ಆಕಾರ ಇಲ್ಲವೆ ಪಿಡುಚೆಗಳ ಆಕಾರದಲ್ಲಿ ಮಾಡಿಕೊಂಡು ಇಡ್ಲಿ ಮಾಡುವಪ್ಲೇಟ್‌ಗಳಲ್ಲಿಟ್ಟು ಹಬೆಯಲ್ಲಿ ಬೇಯಿಸಿಕೊಳ್ಳಿ. ಇದನ್ನು ಕೊಬ್ಬರಿ ಚಟ್ನಿಯಲ್ಲಿ ಸಾಯಂಕಾಲ ಕಾಫಿ-ಟೀ ಜೊತೆಗೆ ಬಿಸಿ ಬಿಸಿಯಾಗಿ ಸವಿದರೆ ಚೆನ್ನಾಗಿರುತ್ತದೆ. 

ಪನ್ನೀರ್ ಮಸಾಲಾ ಮ್ಯಾಗಿ ಮಾಡಿ ನೋಡಿ...

Image
2 ನಿಮಿಷಗಳಲ್ಲಿ ಸಿದ್ದವಾಗುವ ಮ್ಯಾಗಿ ಅತ್ಯಂತ ಜನಪ್ರಿಯವಾದ ತಿಂಡಿಯಾಗಿದೆ. ಮಕ್ಕಳು, ಹಿರಿಯರು ಎಲ್ಲರಿಗೂ ಮ್ಯಾಗಿ ನೂಡಲ್ಸ್ ಅತ್ಯಂತ ಪ್ರಿಯವಾದ ತಿಂಡಿ. ನೀವು ಮ್ಯಾಗಿಯನ್ನು ಹಲವು ವಿಧಾನಗಳಲ್ಲಿ ತಯಾರಿಸಿಕೊಳ್ಳಬಹುದಾಗಿದೆ. ಹಾಗೆಯೇ ಇದು ಪನ್ನೀರ್ ಅನ್ನು ಸೇರಿಸಿ ತಯಾರಿಸುವ ಮ್ಯಾಗಿಯಾಗಿದೆ. ಬೇಕಾಗುವ ಸಾಮಗ್ರಿಗಳು: ಪನ್ನೀರ್ - 200 ಗ್ರಾಂ ಈರುಳ್ಳಿ - 1/2 ಕಪ್ ಶುಂಠಿ - 2 ಚಮಚ ಬೆಳ್ಳುಳ್ಳಿ - 2 ಚಮಚ ಟೊಮ್ಯಾಟೊ- 1/2 ಕಪ್ ಕ್ಯಾರೆಟ್ - 1/2 ಕಪ್ ಅಚ್ಚಖಾರದ ಪುಡಿ - 1/2 ಚಮಚ ಅರಿಶಿಣ - 1/4 ಚಮಚ ದನಿಯಾ ಪುಡಿ - 1/2 ಚಮಚ ಹಸಿರು ಬಟಾಣಿ - 1/2 ಕಪ್ ಮ್ಯಾಗಿ - 1 ಪ್ಯಾಕೆಟ್ ಮಾಡುವ ವಿಧಾನ: ಒಂದು ಪ್ಯಾನ್‌ಗೆ ಒಂದು ಕಪ್ ನೀರನ್ನು ಹಾಕಿ ಕುದಿಸಿ. ಅದಕ್ಕೆ ಮ್ಯಾಗಿ ಪ್ಯಾಕೆಟ್ ಅನ್ನು ತೆರೆದು ಮ್ಯಾಗಿ ಮಸಾಲಾವನ್ನು ಕುದಿಯುತ್ತಿರುವ ನೀರಿಗೆ ಹಾಕಿ. ನಂತರ ಮ್ಯಾಗಿ ನೂಡಲ್ಸ್ ಅನ್ನು ಕಟ್ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ ನೀರು ಸುಮಾರಾಗಿ ಆರಿದ ನಂತರ ಒಂದೆಡೆ ಇಟ್ಟುಕೊಳ್ಳಿ. ನಂತರ ಒಂದು ಪ್ಯಾನ್‌ಗೆ 3-4 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದಾಗ ಪನ್ನೀರ್ ಕ್ಯೂಬ್‌ಗಳನ್ನು ಹಾಕಿ ಹೊಂಬಣ್ಣಬರುವವರೆಗೆ ಹುರಿದಿಟ್ಟುಕೊಳ್ಳಿ. ನಂತರ ಅದೇ ಪ್ಯಾನ್‌ನಲ್ಲಿ 1-2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಹೆಚ್ಚಿದ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ 1 ನಿಮಿಷ ಹುರಿಯಿರಿ. ನಂತರ ಅದಕ್...

ಸ್ವಾದಿಷ್ಠ ಕ್ಯಾಪ್ಸಿಕಂ ರೈಸ್

Image
ಸಾಮಾನ್ಯವಾಗಿ ಮನೆಗಳಲ್ಲಿ ಬೆಳಗಿನ ತಿಂಡಿಗೆ ಚಿತ್ರಾನ್ನ, ಈರುಳ್ಳಿ ರೈಸ್, ಕ್ಯಾರೇಟ್ ರೈಸ್, ಟೊಮೆಟೊ ರೈಸ್ ಹೀಗೆ ತರಾವರಿ ರೈಸ್ ಐಟಂಗಳನ್ನು ಮಾಡುತ್ತಿರುತ್ತೇವೆ. ಈ ರೀತಿಯ ರೈಸ್ ಮಾಡಿದರೆ ಒಂದು ಪ್ರಯೋಜನವೆಂದರೆ ಈ ರೀತಿಯಾಗಿ ಮಾಡಿರುವ ತಿಂಡಿಗಳು ಮಧ್ಯಾಹ್ನದ ಲಂಚ್ ಬಾಕ್ಸ್ ಗೂ ತುಂಬಿಕೊಂಡು ಹೋಗಬಹುದು. ಆದರೆ ನಿಮಗೆ ಇವೆಲ್ಲಾ ತಿಂದು ಬೇಜಾರಾಗಿದ್ದಲ್ಲಿ ಕ್ಯಾಪ್ಸಿಕಂ ರೈಸ್ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ ಅಕ್ಕಿ ಕತ್ತರಿಸಿದ 2 ದುಂಡು ಮೆಣಸಿನ ಕಾಯಿ (ಹಳದಿ, ಕೆಂಪು ಅಥವಾ ಹಸಿರು ಬಣ್ಣದು) 1 ಈರುಳ್ಳಿ (ಕತ್ತರಿಸಿದ್ದು) 3-4 ಹಸಿಮೆಣಸಿನ ಕಾಯಿ (ಕತ್ತರಿಸಿದ್ದು) ಅರಿಶಿಣ ಪುಡಿ 1/4 ಚಮಚ ಜೀರಿಗೆ (ಸ್ವಲ್ಪ) ಸಾಸಿವೆ (ಸ್ವಲ್ಪ)  ಎಣ್ಣೆ (ಸ್ವಲ್ಪ) ಗೋಡಂಬಿ (ಅಗತ್ಯವೆನಿಸಿದರೆ) ಸ್ವಲ್ಪ ಕೊತ್ತಂಬರಿ ಸೊಪ್ಪು ನಿಂಬೆ ರಸ ತುಪ್ಪ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ತಯಾರಿಸುವ ವಿಧಾನ:  ಅಕ್ಕಿಯನ್ನು ಬೇಯಿಸಿಕೊಂಡು ಅನ್ನ ಮಾಡಿಕೊಳ್ಳಿ ತುಂಬಾ ಬೇಯಿಸಬೇಡಿ ಸ್ವಲ್ಪ ಹುಡಿಹುಡಿಯಾಗಿರಲಿ. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ, ಎಣ್ಣೆ ಅಥವಾ ತುಪ್ಪ ಬಿಸಿಯಾದಾಗ ಸಾಸಿವೆ ಮತ್ತು ಜೀರಿಗೆ ಹಾಕಬೇಕು. ಅವುಗಳು ಚಟಾಪಟ ಶಬ್ದ ಮಾಡಲು ಪ್ರಾರಂಭಿಸಿದಾಗ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ತದನಂತರ ಕ್...

ಸ್ವಾದಿಷ್ಠ ಜೋಳದ ಸಮೋಸ

Image
ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿರುವ ಆಹಾರ ಪದಾರ್ಥದಲ್ಲಿ ಜೋಳವೂ ಒಂದು. ನಾವೆಲ್ಲರೂ ಜೋಳದ ರೊಟ್ಟಿಯನ್ನು ಸವಿದಿರುತ್ತೇವೆ. ಆದರೆ ಜೋಳದ ಸಮೋಸವೂ ಕೂಡಾ ಸ್ವಾದಿಷ್ಟವಾಗಿರುತ್ತದೆ.  ತಯಾರಿಸಲು ಬೇಕಾಗುವ ಸಾಮಗ್ರಿಗಳು: * ಜೋಳದ ಹಿಟ್ಟು 1 ಕಪ್ * ಮೈದಾ ಹಿಟ್ಟು 1 ಕಪ್ * ಆಲೂಗಡ್ಡೆ * ಬೇಯಿಸಿದ ಬಟಾಣಿ * ಈರುಳ್ಳಿ * ಹಸಿಮೆಣಸಿನಕಾಯಿ * ಕರಿಬೇವು ಸ್ವಲ್ಪ    ತಯಾರಿಸುವ ವಿಧಾನ:   ಮೊದಲು ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಬೆರೆಸಿ ಅದಕ್ಕೆ ಅಗತ್ಯಕ್ಕೆ ತಕ್ಕಂತೆ ನೀರನ್ನು ಸೇರಿಸಿ ಹಿಟ್ಟನ್ನು ಹದವಾಗಿ ನಾದಬೇಕು. ನಂತರ ಚಿಕ್ಕದಾದ ಚಪಾತಿ ಉಂಡೆಗಳಂತೆ ಮಾಡಿ ಅದನ್ನು ಲಟ್ಟಿಸಿ ಅದರ ಅರ್ಧ ಭಾಗವನ್ನು ಕತ್ತರಿಸಿಟ್ಟುಕೊಳ್ಳಬೇಕು. ನಂತರ ಅದರಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಸರಿಯಾಗಿ ಕಿವುಚಿ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು, ಬೇಯಿಸಿದ ಬಟಾಣಿ ಮತ್ತು ರುಚಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಒಗ್ಗರಣೆಯನ್ನು ಹಾಕಿಕೊಳ್ಳಿ. ನಂತರ ಈ ಮಸಾಲೆಯನ್ನು ಈಗಾಗಲೇ ಅರ್ಧ ಕತ್ತರಿಸಿಕೊಂಡ ಚಪಾತಿಯಲ್ಲಿ ತುಂಬಿ ತ್ರಿಕೋನಾಕಾರದಲ್ಲಿ ಮಾಡಿಎಣ್ಣೆಯಲ್ಲಿ ಕರಿದರೆ ರುಚಿಕರವಾದ ಜೋಳದ ಸಮೋಸ ಸವಿಯಲು ಸಿದ್ಧ.