ಸಂಕ್ರಾಂತಿಗೆ ಪೊಂಗಲ್ ಮಾಡಿ
ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ತಮಿಳುನಾಡಿನ ಕಡೆ ಪೊಂಗಲ್ ಹಬ್ಬ ಅಂತಾರೆ. ಪೊಂಗಲ್ ಹಬ್ಬಕ್ಕೆ ಪೊಂಗಲ್ ತಿಂಡಿಯೇ ವಿಶೇಷ. ಇದು ಎಲ್ಲರಿಗೂ ಗೊತ್ತಿದ್ದರೂ, ಹಬ್ಬದ ವಿಶೇಷವಾಗಿ ಖಾರ ಪೊಂಗಲ್ ಮಾಡುವುದು ಹೇಗೆಂದು ಹೇಳುತ್ತೇವೆ ನೋಡಿಕೊಳ್ಳಿ. ಬೇಕಾಗುವ ಸಾಮಗ್ರಿಗಳು ಅಕ್ಕಿ ಹೆಸರು ಬೇಳೆ ಖಾರದ ಪುಡಿ ಕಾಳುಮೆಣಸು ಜೀರಿಗೆ ಕರಿಬೇವು ಶುಂಠಿ ಹಸಿಮೆಣಸು ಮಾಡುವ ವಿಧಾನ ಹೆಸರು ಬೇಳೆಯನ್ನು ಫ್ರೈ ಮಾಡಿಕೊಳ್ಳಿ. ಉಪ್ಪು ಹಾಕಿ ಅಕ್ಕಿ ಮತ್ತು ಹೆಸರು ಬೇಳೆಯನ್ನು ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ ಬೇಕಿದ್ದರೆ ಡ್ರೈ ಫ್ರೂಟ್ಸ್, ಇಲ್ಲದಿದ್ದರೆ ಶುಂಠಿ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ನಂತರ ಜೀರಿಗೆ, ಕಾಳುಮೆಣಸು, ಅರಸಿನ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಬೇಯಿಸಿಕೊಂಡ ಅನ್ನ ಮತ್ತು ಬೇಳೆಯನ್ನು ಹಾಕಿ ಚೆನ್ನಾಗಿ ತಿರುವಿ. ಈಗ ಖಾರ ಪೊಂಗಲ್ ಸವಿಯಲು ಸಿದ್ಧ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ