Posts

Showing posts from June, 2018

ಬೆಳಿಗ್ಗಿನ ತಿಂಡಿಗೆ ರುಚಿಯಾದ ಹೆಸರುಬೇಳೆ ಕಿಚಡಿ!

Image
ಬಾಸುಮತಿ ಅಕ್ಕಿ - 1/2 ಕಪ್ ಹೆಸರುಬೇಳೆ - 1/2 ಕಪ್ ಇಂಗು - 1/4 ಟೀಚಮಚ ರುಚಿಗೆ ತಕ್ಕಷ್ಟು ಉಪ್ಪು ಅರಿಶಿನ ಪುಡಿ - 1 ಟೀಚಮಚ ತುಪ್ಪ - 1 ಟೀಚಮಚ ಜೀರಿಗೆ - 1 ಟೀಚಮಚ ಜೀರಿಗೆ ಪುಡಿ - 1 ಟೀಚಮಚ. ಒಂದು ಪಾತ್ರೆಗೆ ಬಾಸುಮತಿ ಅಕ್ಕಿ, ಹೆಸರುಬೇಳೆ ಹಾಕಿ. ಇವೆರಡನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪಕ್ಕದಲ್ಲಿಡಿ. ಬಿಸಿಯಾದ ಕುಕ್ಕರ್‌ಗೆ ತುಪ್ಪವನ್ನು ಹಾಕಿರಿ. ಜೀರಿಗೆ ಹಾಗೂ ಇಂಗನ್ನು ಹಾಕಿ ಹುರಿಯಿರಿ. ನಂತರ ತೊಳೆದುಕೊಂಡ ಹೆಸರು ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಅರಿಶಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ. ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ರುಚಿಗೆ ತಕ್ಕಷ್ಟು  ಉಪ್ಪನ್ನು ಸೇರಿಸಿ, ಎರಡು ನಿಮಿಷದವರೆಗೆ  ಬೇಯಲು ಬಿಡಿ. ಕುಕ್ಕರ್ ಗೆ ಮುಚ್ಚಳ ಮುಚ್ಚಿ, ಸುಮಾರು 4 ಸೀಟಿ ಕೂಗಿಸಿ. ಹೀಗೆ ಮಾಡಿದರೆ ರುಚಿಯಾದ ಹೆಸರುಬೇಳೆ ಕಿಚಡಿ ರೆಡಿ.

ವೆಜಿಟೆಬಲ್ ಬೋಂಡಾ ಮಾಡಿ ಸವಿಯಿರಿ...

Image
ಸಾಯಂಕಾಲದ ಟೀ ಜೊತೆಗೆ ಅಥವಾ ಅನಿರೀಕ್ಷಿತವಾಗಿ ಅತಿಥಿಗಳು ಮನೆಗೆ ಬಂದಾಗ ಏನಾದರೂ ವಿಶೇಷವಾದ ಅಥವಾ ರುಚಿಯಾದ ತಿಂಡಿಯನ್ನು ಶೀಘ್ರವಾಗಿ ಮಾಡಬೇಕು ಅಂದುಕೊಂಡರೆ ವೆಜಿಟೆಬಲ್ ಬೋಂಡಾ ಒಳ್ಳೆಯ ಆಯ್ಕೆ. ಇದರಲ್ಲಿ ಹಲವು ತರಕಾರಿಗಳನ್ನು ಬಳಸಿಕೊಳ್ಳುವುದರಿಂದ ಆರೋಗ್ಯಕ್ಕು ಉತ್ತಮ. ಕೊಬ್ಬರಿ ಚಟ್ನಿಯೊಂದಿಗೆ ಸವಿಯಲು ಇದು ರುಚಿಯಾಗಿರುತ್ತದೆ. ನಿಮಗೂ ವೆಜಿಟೆಬಲ್ ಬೋಂಡಾ ಮಾಡುವ ವಿಧಾನವನ್ನು ತಿಳಿದುಕೊಳ್ಳುವ ಆಸಕ್ತಿಯಿದ್ದರೆ ಈ ಲೇಖನವನ್ನು ಓದಿ. ಬೇಕಾಗುವ ಸಾಮಗ್ರಿಗಳು: ಹೆಚ್ಚಿದ ಬಟಾಟೆ - 1/2 ಕಪ್ ಹೆಚ್ಚಿದ ಕ್ಯಾರೆಟ್ - 1/2 ಕಪ್ ಹೆಚ್ಚಿದ ಬೀನ್ಸ್ - 1/2 ಕಪ್ ಹೆಚ್ಚಿದ ಬಿಟ್ರೂಟ್ - 1/2 ಕಪ್ ಹಸಿರು ಬಟಾಣಿ - 1/2 ಕಪ್ ಸಾಸಿವೆ - 1 ಚಮಚ ಜೀರಿಗೆ - 1 ಚಮಚ ಉದ್ದಿನ ಬೇಳೆ - 1 ಚಮಚ ಕರಿಬೇವು - ಸ್ವಲ್ಪ ಶುಂಠಿ - 1 ಇಂಚು ಬೆಳ್ಳುಳ್ಳಿ - 7-8 ಎಸಳು ಹಸಿಮೆಣಸು - 2 ಈರುಳ್ಳಿ - 1 ಚಾಟ್ ಮಸಾಲಾ - 1 ಚಮಚ ಗರಂ ಮಸಾಲಾ - 1 ಚಮಚ ಅರಿಶಿಣ - 11/2 ಚಮಚ ಅಚ್ಚಖಾರದ ಪುಡಿ - 2 ಚಮಚ ಕೊತ್ತಂಬರಿ ಸೊಪ್ಪು - ಸ್ವಲ್ಪ ಉಪ್ಪು - ರುಚಿಗೆ ಎಣ್ಣೆ - ಕರಿಯಲು ಕಡಲೆ ಹಿಟ್ಟು - 1 1/2 ಕಪ್ ಅಕ್ಕಿ ಹಿಟ್ಟು - 1/4 ಕಪ್ ಇಂಗು - 1/4 ಚಮಚ ಚಾಟ್ ಮಸಾಲಾ - 1/4 ಚಮಚ ಮಾಡುವ ವಿಧಾನ: ಹೆಚ್ಚಿರುವ ಬಟಾಟೆ, ಬಿಟ್ರೂಟ್, ಬೀನ್ಸ್, ಕ್ಯಾರೆಟ್ ಮತ್ತು ಹಸಿರು ಬಟಾಣಿಯನ್ನು ಸೇರಿಸಿ ಕುಕ್ಕರ್‌ನ...

ಸ್ವಾದಿಷ್ಠವಾದ ಬಟಾಣಿ ಪಲಾವ್

Image
ಬೇಕಾಗುವ ಪದಾರ್ಥಗಳು ತುಪ್ಪ - 2-3 ಚಮಚ ಪಲಾವ್ ಎಲೆ - 2  ಚಕ್ಕೆ - 1  ಮರಾಠಿ ಮೊಗ್ಗು - 1 ಕಾಳು ಮೆಣಸು - 10  ಲವಂಗ - 3-4 ಜೀರಿಗೆ - ಸ್ವಲ್ಪ ಗೋಡಂಬಿ - 6 ಬಾಸುಮತಿ ಅಕ್ಕಿ - 1 ಬಟ್ಟಲು (30 ನಿಮಿಷ ನೆನೆಸಿದ್ದು) ಉಪ್ಪು- ರುಚಿಗೆ ತಕ್ಕಷ್ಟು ಗರಂ ಮಸಾಲಾ - ಅರ್ಧ ಚಮಚ ಬಟಾಣಿ - ಮುಕ್ಕಾಲು ಬಟ್ಟಲು ಕೊತ್ತಂಬರಿ ಸೊಪ್ಪು ಮಾಡುವ ವಿಧಾನ -  - ಪ್ರೆಷರ್ ಕುಕ್ಕರ್‌ನಲ್ಲಿ ತುಪ್ಪ ಹಾಕಿ, ಅದನ್ನು ಬಿಸಿ ಮಾಡಿರಕೊಳ್ಳಿ - ಅದಕ್ಕೆ ಪಲಾವ್ ಎಲೆ, ಚಕ್ಕೆ, ಮರಾಠಿ ಮೊಗ್ಗು, ಕಾಳು ಮೆಣಸು, ಲವಂಗ, ಜೀರಿಗೆ, ಗೋಡಂಬಿ ಹಾಕಿ ಕಂದು ಬಣ್ಣ ಬರುವ ತನಕ ಹುರಿಯಿರಿ. - ಅದಕ್ಕೆ ಬಾಸುಮತಿ ಅಕ್ಕಿ, ಉಪ್ಪು, ಗರಂ ಮಸಾಲಾ, ಬಟಾಣಿ ಹಾಕಿ 5 ನಿಮಿಷ ಹುರಿಯಿರಿ  - ನಂತರ 1 ಕಪ್ ನೀರು ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ 2 ಕೂಗು ಕೂಗಿಸಿಕೊಂಡರೆ, - ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಬಟಾಣಿ ಪಲಾವ್ ಸವಿಯಲು ಸಿದ್ಧ.

ಚಿಲ್ಲಿ ಗಾರ್ಲಿಕ್ ಚಿಕನ್

Image
ಬೇಕಾಗುವ ಸಾಮಗ್ರಿಗಳು - ಚಿಕನ್ - 400 ಗ್ರಾಂ ವಿನೆಗರ್ - 1 ಚಮಚ ಉಪ್ಪು - 1/2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ ಎಣ್ಣೆ - 2 ಚಮಚ ಬೆಳ್ಳುಳ್ಳಿ - 2 ಚಮಚ (ಚಿಕ್ಕದಾಗಿ ಹೆಚ್ಚಿದ್ದು) ಶುಂಠಿ - 1 ಚಮಚ (ಚಿಕ್ಕದಾಗಿ ಹೆಚ್ಚಿದ್ದು) ಕೆಂಪು ಮೆಣಸು - 4 ಬೆಲ್ ಪೆಪರ್ - 145 ಗ್ರಾಂ ಕೆಂಪು ಮೆಣಸು ಪೇಸ್ಟ್ - 1 ಚಮಚ ನೀರು - 150 ಮಿಲಿಲೀಟರ್ ಸೋಯಾ ಸಾಸ್ - 1 ಚಮಚ ಕೆಚಪ್ - 3 ಚಮಚ ಕಾರ್ನ್ ಹಿಟ್ಟು - 2 ಚಮಚ ನೀರು - 80 ಮಿಲಿಲೀಟರ್ ಮಾಡುವ ವಿಧಾನ -  - ಬಟ್ಟಲಿನಲ್ಲಿ, 400 ಗ್ರಾಂ ಚಿಕನ್, 1 ಚಮಚ ವಿನೆಗರ್, 1/2 ಚಮಚ ಉಪ್ಪು, 1 ಚಮಚ ಶುಂಠಿಯ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. - 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ. - ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ 2 ಚಮಚ ಬೆಳ್ಳುಳ್ಳಿ, 1 ಚಮಚ ಶುಂಠಿಯನ್ನು ಸೇರಿಸಿ ಮತ್ತು ಕಂದು ಬಣ್ಣ ಬರುವ ತನಕ ಹುರಿಯಿರಿ. - ಅದರಲ್ಲಿ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ 5-10 ನಿಮಿಷಗಳ ಕಾಲ ಬೇಯಿಸಿ. - ನಂತರ, 4 ಕೆಂಪು ಮೆಣಸು, 145 ಗ್ರಾಂ ಬೆಲ್ ಪೆಪರ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. - 1 ಚಮಚ ಕೆಂಪು ಮೆಣಸಿನ ಪೇಸ್ಟ್, 150 ಮಿಲಿಲೀಟರ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ. - ಈಗ, 1 ಚಮಚ ಸೋಯಾ ಸಾಸ್, 3 ಚಮಚ ಕೆಚಪ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ...

ದೊಣ್ಣೆ ಮೆಣಸಿನಕಾಯಿ ಜುಣ್ಕಾ

Image
ಬೆಂಗಳೂರು: ಸಾಮಾಗ್ರಿಗಳು:  2 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆ ಮೆಣಸಿನಕಾಯಿ, 2 ಹದ ಗಾತ್ರದ ಈರುಳ್ಳಿ ಸಣ್ಣಗೆ ಹಚ್ಚಿ, 1 ಹದ ಗಾತ್ರದ ಟೊಮೆಟೋ-ಸಣ್ಣಗೆ ಹಚ್ಚಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪ, 1 ಚಮಚ ಮೆಣಸಿನಕಾಯಿ ಪುಡಿ, 1/4 ಚಮಚ ಅರಿಶಿನ ಪುಡಿ, 1 ದೊಡ್ಡ ಚಮಚ ಕಡ್ಲೆಹಿಟ್ಟು, 3 ದೊಡ್ಡ ಚಮಚ ಎಣ್ಣೆ. ವಿಧಾನಗಳು:  ಬಾಣಲೆಗೆ ಎಣ್ಣೆ ಸುರಿದು, ಒಲೆಯ ಮೇಲಿಟ್ಟು, ಎಣ್ಣೆ ಕಾದ  ತಕ್ಷಣ ಈರುಳ್ಳಿ ಹಾಕಿ ಗುಲಾಬಿ ಬಣ್ಣದ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ ಸೇರಿಸಿ ಸ್ವಲ್ಪ ಕೆದಕಿ, ದೊಣ್ಣೆ ಮೆಣಸನ್ನೂ ಸೇರಿಸಿ ಕೆದಕಿ, ಉಪ್ಪು, ಮೆಣಸಿನಕಾಯಿ ಮತ್ತು ಅರಿಸಿನ ಪುಡಿಗಳನ್ನು ಹಾಕಿ ಚೆನ್ನಾಗಿ ಮಗುಚಿರಿ. ದೊಣ್ಣೆ ಮೆಣಸಿನ ತುಂಡುಗಳಲ್ಲಿ ನೀರಿನ ಪೆಸೆ ಆರಿದ ಕೂಡಲೇ ಸ್ವಲ್ಪ ಕಡ್ಲೆ ಹಿಟ್ಟನ್ನು ಸಿಂಪಡಿಸಿ ಮುಗುಚಿರಿ. ತಳ ಹತ್ತದ ಹಾಗೆ ಕೈ ಬಿಡದೆ ಕೆದಕಿ. ಎರಡು ಅಥವಾ ಮೂರು ಸ್ವಲ್ಪ ಕಡ್ಲೆಹಿಟ್ಟನ್ನು ಸಿಂಪಡಿಸಿ, ಹಸಿ ವಾಸನೆ ಹೋದ ಮೇಲೆ, 1 ಕಪ್  ನೀರು ಸೇರಿಸಿ, ಚೆನ್ನಾಗಿ ಮಗುಚಿ, ಕುದಿಸಿರಿ. ಮಸಾಲೆ ಸ್ವಲ್ಪ ದಪ್ಪಗಾದ ಮೇಲೆ ಬಾಣಲೆ ಕೆಳಗಿಳಿಸಿ. ಕೊತ್ತಂಬರಿ ಸೊಪ್ಪು ಹಾಕಿ. ಚಪಾತಿ, ಪೂರಿ ಜತೆ ಸವಿಯಿರಿ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಚಪಾತಿಯೊಂದಿಗೆ ರುಚಿಯಾದ ತರಕಾರಿಗಳ ಸಾಗು ಮಾಡಿ ಸವಿಯಿರಿ..

Image
ಯಾವಾಗಲೂ ಚಪಾತಿಯೊಂದಿಗೆ ಪಲ್ಯ ಮತ್ತು ಚಟ್ನಿಯನ್ನು ಮಾಡಿಕೊಂಡು ತಿಂದು ಬೇಸರವಾಗಿದ್ದರೆ ಒಮ್ಮೆ ತರಕಾರಿಗಳ ಸಾಗು ಮಾಡಿ ರುಚಿ ನೋಡಿ. ಸರಿಹೊಂದುವ ಯಾವುದೇ ತರಕಾರಿಗಳನ್ನು ನೀವು ಇದರಲ್ಲಿ ಬಳಸಬಹುದು. ಹಲವು ಪೌಷ್ಟಿಕಾಂಶಗಳನ್ನು ಒದಗಿಸುವುದರೊಂದಿಗೆ ತರಕಾರಿಗಳು ಆರೋಗ್ಯಕ್ಕೆ ಉತ್ತಮವಾದುದಾಗಿದೆ. ಸಾಗು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ. ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್ - 1 ಬೀನ್ಸ್ - 8-10 ಬಟಾಟೆ - 2 ಹೂಕೋಸು - 1/4 ಕಪ್ ಹಸಿರು ಬಟಾಣಿ - 1/2 ಕಪ್ ಕಾಯಿತುರಿ - 1/2 ಕಪ್ ಹಸಿಮೆಣಸು - 2 ದನಿಯಾ - 2 ಚಮಚ ಜೀರಿಗೆ - 1/2 ಚಮಚ ಚೆಕ್ಕೆ - 2 ಇಂಚು ಲವಂಗ - 2 ಕಾಳುಮೆಣಸು - 4-5 ಸಾಸಿವೆ - 1/2 ಚಮಚ ಉದ್ದಿನಬೇಳೆ - 2 ಚಮಚ ಕರಿಬೇವು - ಸ್ವಲ್ಪ ಎಣ್ಣೆ - 6-7 ಚಮಚ ಮಾಡುವ ವಿಧಾನ: ಹಸಿರು ಬಟಾಣಿಯನ್ನು ಹಿಂದಿನ ದಿನ ರಾತ್ರಿಯೇ ನೆನೆಸಿಟ್ಟುಕೊಳ್ಳಬೇಕು. ಬಟಾಟೆ, ಹೂಕೋಸು, ಕ್ಯಾರೆಟ್ ಅನ್ನು ಹೆಚ್ಚಿಕೊಳ್ಳಿ. ಹೆಚ್ಚಿದ ತರಕಾರಿಗಳೊಂದಿಗೆ ನೆನೆಸಿದ ಬಟಾಣಿಯನ್ನು ಸೇರಿಸಿ ಬೇಯಲು ಅಗತ್ಯವಿರುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕುಕ್ಕರ್‌ನಲ್ಲಿ ಒಂದರಿಂದ ಎರಡು ಸೀಟಿಯನ್ನು ಹಾಕಿಸಿ. ಮಿಕ್ಸಿ ಜಾರ್‌ಗೆ ಕಾಯಿತುರಿ, ಚೆಕ್ಕೆ, ಲವಂಗ, ದನಿಯಾ, ಜೀರಿಗೆ, ಕಾಳುಮೆಣಸು, 2 ಹಸಿಮೆಣಸು ಮತ್ತು ಹುರಿದ ಉದ್ದಿನಬೇಳೆ 1 ಚಮಚ ಹಾಕಿ ಸ್ವಲ್ಪ ...

ಸ್ವಾದಿಷ್ಠಕರವಾದ ಚಿಕನ್ ಪೆಪ್ಪರ್ ಡ್ರೈ

Image
ಬೇಕಾಗುವ ಸಾಮಗ್ರಿಗಳು- ಚಿಕನ್ - 1 ಕೆಜಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ ಗರಂ ಮಸಾಲ - 1/2 ಚಮಚ ಟೊಮೆಟೊ- 2 ಹೆಚ್ಚಿದ್ದು ಈರುಳ್ಳಿ - 2 ಹೆಚ್ಚಿದ್ದು ಅರಿಶಿಣ ಪುಡಿ - ಸ್ವಲ್ಪ ಕೊತ್ತಂಬರಿ ಸೊಪ್ಪು - ಸ್ವಲ್ಪ ಕಾಳು ಮೆಣಸಿನ ಪುಡಿ - 3-4 ಚಮಚ ಹಸಿಮೆಣಸಿನ ಕಾಯಿ - 2  ಕರಿಬೇವಿನ ಎಲೆ - ಸ್ವಲ್ಪ ಎಣ್ಣೆ ಉಪ್ಪು ಮಾಡುವ ವಿಧಾನ- - ಕೋಳಿ ಮಾಂಸವನ್ನು ತೊಳೆದು ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣದ ಪುಡಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 1 ಗಂಟೆಗಳ ಕಾಲ ನೆನೆಯಲು ಬಿಡಿ.  - ನಂತರ ಬಾಣಲೆಗೆ ಅರ್ಥದಷ್ಟು ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಮಸಾಲೆ ಮಿಶ್ರಿತ ಚಿಕನ್ ಹಾಕಿ ಸ್ವಲ್ಪ ಕಂದು ಬಣ್ಣ ಬರುವಾಗ ತೆಗೆಯಯಿರಿ.  - ನಂತರ ಪಾತ್ರೆಯೊಂದಕ್ಕೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಜಜ್ಜಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗ ಹುರಿದು ಟೊಮೆಟೊ ಹಾಕಿ ನಂತರ ಎಣ್ಣೆಯಲ್ಲಿ ಕರಿದ ಮಾಂಸವನ್ನು ಹಾಕಿ ಮಿಶ್ರಣ ಮಾಡಿದರೆ ಚಿಕನ್ ಪೆಪ್ಪರ್ ಡ್ರೈ ಸವಿಯಲು ಸಿದ್ಧ. 

ಅವರೆ ಕಾಳಿನ ಕುರ್ಮಾ...!!

Image
ಅವರೆಕಾಳಿನ ಉಪ್ಪಿಟ್ಟು, ಸಾಂಬಾರು, ಪಲ್ಯ ಮಾಡುತ್ತಿರುತ್ತೀರಿ. ಹಾಗೆಯೇ ಒಮ್ಮೆ ಅವರೆ ಕಾಳಿನ ಕುರ್ಮಾ ಸಹ ಮಾಡಿ ನೋಡಿ. ಇದು ಪೂರಿ, ಚಪಾತಿ, ರೊಟ್ಟಿ ಮತ್ತು ಅನ್ನದ ಜೊತೆಯಲ್ಲಿಯೂ ರುಚಿಯಾಗಿರುತ್ತದೆ. ಅವರೆ ಕಾಳಿನಲ್ಲಿ ಉತ್ತಮ ಪೌಷ್ಟಿಕಾಂಶಗಳಿದ್ದು ಆರೋಗ್ಯಕ್ಕೂ ಉತ್ತಮವಾದುದಾಗಿದೆ. ನಿಮಗೂ ಅವರೆ ಕಾಳಿನ ಕುರ್ಮಾ ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಬೇಕಾದಲ್ಲಿ ಈ ಲೇಖನವನ್ನು ಓದಿ. ಬೇಕಾಗುವ ಸಾಮಗ್ರಿಗಳು: ಅವರೆಕಾಳು - 11/2 ಕಪ್ ಈರುಳ್ಳಿ - 2 ಟೊಮೆಟೋ - 2 ಹಸಿಮೆಣಸು - 2 ಲವಂಗ - 2-3 ಚೆಕ್ಕೆ - 1 ಇಂಚು ಏಲಕ್ಕಿ - 2 ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ ಅರಿಶಿಣ - 1 ಚಮಚ ಅಚ್ಚಖಾರದ ಪುಡಿ - 2 ಚಮಚ ಉಪ್ಪು - ರುಚಿಗೆ ಎಣ್ಣೆ - 3-4 ಚಮಚ ಗಸಗಸೆ - 1 ಚಮಚ ನೆನೆಸಿದ ಬಾದಾಮಿ - 5-6 ಸೋಂಪು - 1/2 ಚಮಚ ಗೋಡಂಬಿ - 5-6 ಕಾಯಿತುರಿ - 3-4 ಚಮಚ ಕೊತ್ತಂಬರಿ ಸೊಪ್ಪು - ಸ್ವಲ್ಪ ಮಾಡುವ ವಿಧಾನ: ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಟೊಮೆಟೋವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹಸಿಮೆಣಸನ್ನು ಸಿಗಿದಿಟ್ಟುಕೊಳ್ಳಿ. ಅವರೆಕಾಳನ್ನು ಬಿಡಿಕೊಂಡು ಕುಕ್ಕರ್‌ನಲ್ಲಿ ಹಾಕಿ ಅದಕ್ಕೆ 1/2 ಕಪ್ ನೀರು ಮತ್ತು ಸ್ವಲ್ಪ ಉಪ್ಪನ್ನು ಹಾಕಿ 1-2 ಸೀಟಿಯನ್ನು ಹಾಕಿಸಿ. ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ 4-5 ಚಮಚ ಎಣ್ಣೆಯನ...

ರುಚಿಯಾದ ಟೊಮೆಟೊ ಎಗ್ ರೈಸ್

Image
ಬೇಕಾಗುವ ಸಾಮಗ್ರಿಗಳು ಒಂದು ಕಪ್ ಬೇಯಿಸಿದ ಅನ್ನ, ಬೇಯಿಸಿದ ಮೊಟ್ಟೆ, 4 ಹಸಿಮೆಣಸು, ಟೊಮೆಟೊ, 1ಈರುಳ್ಳಿ ಹೆಚ್ಚಿದ್ದು, ಚಕ್ಕೆ, ಲವಂಗ, ಏಲಕ್ಕಿ, ಬಿರಿಯಾನಿ ಎಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಸ್ವಲ್ಪ, ಧನಿಯಾ ಪುಡಿ, ಖಾರದ ಪುಡಿ, ಎಣ್ಣೆ, ನಿಂಬೆರಸ, ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಬಿಸಿಯಾದ ನಂತರ ಅದಕ್ಕೆ ಚಕ್ಕೆ ಲವಂಗ, ಏಲಕ್ಕಿ, ಹೆಚ್ಚಿದ ಈರುಳ್ಳಿ, ಬಿರಿಯಾನಿ ಎಲೆ, ಸೇರಿಸಿ ಬಾಡಿಸಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉದ್ದಕ್ಕೆ ಸೀಳಿದ ಹಸಿಮೆಣಸಿನ ಕಾಯಿ, ಟೊಮೆಟೊ, ಅರಿಶಿನ, ಉಪ್ಪು, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಧನಿಯಾ ಪುಡಿ, ಖಾರದ ಪುಡಿ ಮಿಕ್ಸ್ ಮಾಡಿ 2 ನಿಮಿಷ ಬೇಯಿಸಿ. ಚೆನ್ನಾಗಿ ಬೇಯಿಸಿದ ನಂತರ ಇದಕ್ಕೆ ಅನ್ನ ಹಾಕಿ ಬೆರೆಸಿ ನಿಂಬೆ ರಸ ಹಿಂಡಿ ನಂತರ ಬೇಯಿಸಿದ ಮೊಟ್ಟೆಯನ್ನು ಕತ್ತರಿಸಿ ಇದಕ್ಕೆ ಸೇರಿಸಿ.

ಸರಳ ಮತ್ತು ರುಚಿಕರ ಬ್ರೆಡ್ ಪಿಜ್ಜಾ

Image
ಬೇಕಾಗುವ ಸಾಮಾಗ್ರಿಗಳು -  ಬ್ರೆಡ್- 4 ಸ್ಲೈಸ್ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ- 1/4 ಕಪ್ ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಮ್- 1/4 ಕಪ್ ಚೀಸ್ -  1/4 ಕಪ್ ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್- 4 ಚಮಚ ಕಾಳುಮೆಣಸಿನಪುಡಿ ಅಥವಾ ಇಟಾಲಿಯನ್ ಮಸಾಲೆ- 1 ಚಿಟಿಕೆ ಚಿಲ್ಲಿ ಫ್ಲೇಕ್ಸ್- ಸ್ವಲ್ಪ ಕ್ಯಾಬೇಜ್ ಎಲೆಗಳು- 4 ಚಮಚ ಮಾಯೊನೀಸ್ - 4 ಚಮಚ ಮಾಡುವ ವಿಧಾನ -  - ಮೊದಲು ಬ್ರೆಡ್‍ನ ಒಂದು ಬದಿಗೆ 1 ಚಮಚದಷ್ಟು ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್ ಸವರಿಕೊಳ್ಳಿ. ಅದರ ಮೇಲೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಮ್ ತುಂಡುಗಳು, ಕ್ಯಾಬೇಜ್ ಎಲೆಗಳನ್ನು ಹಾಕಿ.  - ಅದರ ಮೇಲೆ ಕಾಳುಮೆಣಸಿನಪುಡಿ ಮತ್ತು ಚಿಲ್ಲಿ ಫ್ಲೇಕ್ಸ್ ಹರಡಿ. - ನಂತರ ಅದರ ಮೇಲೆ 1 ಚಮಚದಷ್ಟು ಮಾಯೊನೀಸ್ ಮತ್ತು ಚೀಸ್ ಹಾಕಿ ಹರಡಿ. - ನಂತರ ಒಲೆಯ ಮೇಲೆ ತವಾ ಇಟ್ಟು ಬಿಸಿಯಾದ ಬಳಿಕ ಅದಕ್ಕೆ ಸ್ವಲ್ಪ ತುಪ್ಪ ಸವರಿ ಚೀಸ್ ಕರಗುವವರೆಗೆ ಅಂದ್ರೆ 5-7 ನಿಮಿಷಗಳ ಕಾಲ ಒಲೆಯಲ್ಲಿ ಬಿಸಿ ಮಾಡಿ. ಒಲೆಯಿಂದ ತೆಗೆದ ಬ್ರೆಡ್ ಪಿಜ್ಜಾವನ್ನು ಬಿಸಿಬಿಸಿ ಇರುವಾಗಲೇ ಸವಿಯಿರಿ.