Posts

Showing posts from July, 2018

ಟೊಮೆಟೊ, ಬೆಳ್ಳುಳ್ಳಿಯ ರಸಂ ಮಾಡುವುದು ಹೇಗೆ ಗೊತ್ತಾ…?

Image
ಬಿಸಿಬಿಸಿ ಅನ್ನಕ್ಕೆ ರುಚಿಯಾದ  ಟೊಮೆಟೊ ಬೆಳ್ಳುಳ್ಳಿ ರಸಂ ಇದ್ದರೆ, ಊಟ ಹೊಟ್ಟೆಗೆ ಸೇರಿದ್ದೆ ತಿಳಿಯುವುದಿಲ್ಲ. ರುಚಿಯಾದ ಟೊಮೆಟೊ, ಬೆಳ್ಳುಳ್ಳಿ ರಸಂ ಮಾಡುವುದು ಹೇಗೆ ಗೊತ್ತಾ…? ಇಲ್ಲಿದೆ ನೋಡಿ ವಿಧಾನ. ಬೇಕಾಗುವ ಸಾಮಾಗ್ರಿ 500 ಗ್ರಾಂ  ಟೋಮೆಟೊ ಹಣ್ಣು 5-6 ಬೆಳ್ಳುಳ್ಳಿ ಎಸಳು ಹದವಾಗಿ ಕುಟ್ಟಿದ್ದು ರುಚಿಗೆ ತಕ್ಕಷ್ಟು ಉಪ್ಪು 1 ಚಮಚ ಕಾಳು ಮೆಣಸು ಸಣ್ಣ ತುಂಡು ಶುಂಠಿ ತುರಿ 1 ಚಮಚ ರಸಂ ಪುಡಿ 2 ಟೀ ಚಮಚ-ಅರಿಶಿನ ಪುಡಿ 1 ಟೀ ಚಮಚ ಕೆಂಪು ಮೆಣಸಿನ ಪುಡಿ ವಿಧಾನ:  ಕುಕ್ಕರ್ ಗೆ ಕತ್ತರಿಸಿದ ಟೊಮೆಟೊ, ಬೆಳ್ಳುಳ್ಳಿ, ಕಾಳುಮೆಣಸು, ಶುಂಠಿ, ಉಪ್ಪು 4 ಕಪ್ ನೀರು ಸೇರಿಸಿ 2 ವಿಷಲ್ ಬರಿಸಿ.ಇದು ತಣ್ಣಗಾದ ನಂತರ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ. ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ರುಬ್ಬಿಕೊಂಡ ಟೊಮೆಟೊ ಮಿಶ್ರಣ, ಅರಿಶಿನ ಪುಡಿ, ರಸಂ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಒಂದು ಸಣ್ಣ ಪಾತ್ರೆಗೆ 2 ಚಮಚ ತುಪ್ಪ ಹಾಕಿ ಸಾಸಿವೆ, ಇಂಗು ಕರಿಬೇವು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಸಿದ್ದಪಡಿಸಿಕೊಳ್ಳಿ. ಇದನ್ನು ಟೊಮೆಟೋ ಮಿಶ್ರಣಕ್ಕೆ ಸೇರಿಸಿದರೆ ಟೊಮೆಟೊ, ಬೆಳ್ಳುಳ್ಳಿ ರಸಂ ಸಿದ್ಧ.

ಬೇಗ ಬೇಗನೆ ರೆಡಿಯಾಗುವ ಬಾಂಬೆ ಸಾಗು!

Image
 ಮನೆಯಲ್ಲಿ ಪೂರಿನೋ,  ಚಪಾತಿನೋ ಮಾಡಿದಾಗ ಅದಕ್ಕೆ ಏನಾದರೂ ಪಲ್ಯ ಮಾಡಬೇಕು ಎಂಬ ತಲೆಬಿಸಿಯಲ್ಲಿರುತ್ತೇವೆ. ತಕರಕಾರಿ ಸಾಗು ಮಾಡುವುದಕ್ಕೆ  ಸ್ವಲ್ಪ ಸಮಯ ಬೇಕಾಗುತ್ತದೆ. ಈ ಬಾಂಬೆ ಸಾಗು ಪ್ರಯತ್ನಿಸಿ ನೋಡಿ. ನಿಮ್ಮ ಸಮಯವೂ ಉಳಿಯುತ್ತೆ, ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಾಗ್ರಿ ಬೇಯಿಸಿದ ಆಲೂಗಡ್ಡೆ ೨ ಈರುಳ್ಳಿ ೧ ಬೆಳ್ಳುಳ್ಳಿ ಶುಂಟಿ ಪೇಸ್ಟ್ ೧ ಟೀಚ ಹಸಿಮೆಣಸು ೪ ಕಡಲೆ ಹಿಟ್ಟು ೨ ಟೇ ಚ ಟೊಮೇಟೊ ೧ ಉದ್ದಿನಬೇಳೆ ೧ ಟೀ ಚ ಕಡಲೆಬೇಳೆ ೧ ಟೀ ಚ ಅರಿಶಿನ ಚಿಟಿಕೆ ಕೊತ್ತೊಂಬರಿ ಸೊಪ್ಪು ಎಣ್ಣೆ ೧ ಚಮಚ ಕರಿಬೇವು ಸ್ವಲ್ಪ ಇಂಗು ಚಿಟಿಕೆ ಸಾಸಿವೆ ೧ ಟೀ ಚ ಉಪ್ಪು ರುಚಿಗೆ ತಕ್ಕಷ್ಟು ಮಾಡುವ ವಿಧಾನ ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಉದ್ದಿನಬೇಳೆ, ಕಡಲೆಬೇಳೆ, ಸಾಸಿವೆ, ಇಂಗು, ಹಸಿಮೆಣಸು ಹಾಕಿ ಹುರಿಯಿರಿ. ಉದ್ದಿನಬೇಳೆ ಮತ್ತು ಕಡಲೆಬೇಳೆ ಕೆಂಪಗಾದ ಮೇಲೆ ಅದಕ್ಕೆ ಕರಿಬೇವು, ಅರಿಶಿನ, ಶುಂಠಿ ಬೆಳ್ಳಿ ಪೇಸ್ಟ್ ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.  ನಂತರ ಅದಕ್ಕೆ ಹೆಚ್ಚಿದ ಟೊಮೇಟೊ ಸೇರಿಸಿ ನಂತರ ೨ ಕಪ್ ನೀರು ಸೇರಿಸಿ ಕುದಿಸಿ.ಈಗ ಅದಕ್ಕೆ ಬೇಯಿಸಿದ ಆಲೂಗಡ್ಡೆಯ ಚೂರುಗಳು, ಉಪ್ಪು, ಸ್ವಲ್ಪ ನೀರಿನಲ್ಲಿ ಕರಗಿಸಿದ ಕಡಲೆಹಿಟ್ಟು ಸೇರಿಸಿ ಚೆನ್ನಾಗಿ ಕುದಿಸಿ.ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿ.

ಗರಂ ಗರಂ ರವೆ ಪಕೋಡ ಮಾಡುವ ಬಗೆ ಇಲ್ಲಿದೆ ನೋಡಿ

Image
 ಹೊರಗೆ ಸುರಿಯುವ ಮಳೆ. ಮನೆಯ ಒಳಗಡೆ ಕುಳಿತು ಏನಾದರೂ ಬಿಸಿಬಿಸಿ ತಿನ್ನಬೇಕು ಎಂಬ ಬಯಕೆಯಾಗುತ್ತದೆ. ಕೆಲವೇ ಸಮಯದಲ್ಲಿ ಫಟಾಫಟ್ ಆಗಿ ಮಾಡಬಹುದಾದ ತಿನಿಸೆಂದರೆ ರವೆ ಪಕೋಡ.  ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿ:  ಚಿರೋಟಿ ರವೆ ರವೆ-1 ಕಪ್, ತೆಂಗಿನ ತುರಿ-ಅರ್ಧ ಕಪ್ , ಎಲೆಕೋಸು-1/2 ಕಪ್, , ಕಡ್ಲೆ ಹಿಟ್ಟು-2 ಚಮಚ, ಮೊಸರು-1 ಚಮಚ, ಅಕ್ಕಿ ಹಿಟ್ಟು-ಸ್ವಲ್ಪ, ಈರುಳ್ಳಿ-1, ಹಸಿ ಮೆಣಸಿನಕಾಯಿ-4, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು. ವಿಧಾನ:  ರವೆಯನ್ನು ಜರಡಿಯಾಡಿಸಿ. ಎಲೆಕೋಸು, ಈರುಳ್ಳಿ ಹಾಗೂ ಹಸಿ ಮೆಣಸಿನಕಾಯಿಗಳನ್ನು ಸಣ್ಣಗೆ ಹೆಚ್ಚಿ. ಇದಕ್ಕೆ ರವೆ, ಅಕ್ಕಿ ಹಿಟ್ಟು, ಕಡ್ಲೆ ಹಿಟ್ಟು, ಮೊಸರು ಹಾಗೂ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಬೆರೆಸಿ ಕಲಸಿ. ಹತ್ತು ನಿಮಿಷಗಳ ನಂತರ ಕಾದ ಎಣ್ಣೆಯಲ್ಲಿ ಕರಿಯಿರಿ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಮಶ್ರೂಮ್ ಸೂಪ್ ಮಾಡುವುದು ಹೇಗೆ?

Image
ಈ ಚಳಿಗಾಲಕ್ಕೆ ಬೇರೆ ಬೇರೆ ರೀತಿಯ ಸೂಪ್ ಮಾಡಿಕೊಂಡು ಕುಡಿದರೆ ದೇಹವೂ ಬೆಚ್ಚಗಿರುತ್ತದೆ, ಬಾಯಿಗೂ ರುಚಿಯಾಗಿರುತ್ತದೆ. ಮಶ್ರೂಮ್ ಸೂಪ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಬೇಕೇ? ಹಾಗಿದ್ದರೆ ಇದನ್ನು ನೋಡಿ. ಬೇಕಾಗುವ ಸಾಮಗ್ರಿಗಳು ಮಶ್ರೂಮ್ ಫ್ರೆಶ್ ಕ್ರೀಮ್ ಉಪ್ಪು ಚಕ್ಕೆ, ಲವಂಗ ಕಾಳುಮೆಣಸು ಅಕ್ಕಿ ಹಿಟ್ಟು ಬೆಣ್ಣೆ ಮಾಡುವ ವಿಧಾನ ಮಶ್ರೂಮ್ ನ್ನು ಚೆನ್ನಾಗಿ ತೊಳೆದು, ಕತ್ತರಿಸಿಕೊಳ್ಳಿ. ಬೆಳ್ಳುಳ್ಳಿ ಜಜ್ಜಿ ಇಟ್ಟುಕೊಳ್ಳಿ. ನಂತರ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಬೆಣ್ಣೆ ಹಾಕಿ ಬಿಸಿ ಮಾಡಿ. ಇದು ಬಿಸಿಯಾದ ಮೇಲೆ ಮಶ್ರೂಮ್, ಜಜ್ಜಿ ಇಟ್ಟುಕೊಂಡ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ನಂತರ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ತಿರುವಿ. ನಂತರ ಉಪ್ಪು, ಕಾಳುಮೆಣಸು ಹಾಕಿ. ಇದನ್ನು ಸುಮಾರು 10 ನಿಮಿಷ ಬೇಯಿಸಿ. ನಂತರ ಇದನ್ನು ಬೌಲ್ ಗೆ ಸುರುವಿಕೊಂಡು ಫ್ರೆಶ್ ಕ್ರೀಮ್ ಹಾಕಿಕೊಂಡು ಸೇವಿಸಿ!

ಜಿಟಿಪಿಟಿ ಮಳೆಗೆ ಬಿಸಿಬಿಸಿ ಟೊಮೆಟೊ ಸೂಪ್!

Image
ಮಳೆಗಾಲದಲ್ಲಿ ಟೊಮೆಟೊ ಸೂಪ್ ಕುಡಿಯಲು ಹಿತವಾಗಿರತ್ತೆ ಹಾಗೂ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: 10 ಟೊಮೆಟೊ, 2 ಚಮಚ ಜೀರಿಗೆ, 5 ಚಮಚ ಸಕ್ಕರೆ, 2 ಚಮಚ ಉಪ್ಪು, 10 ಕಾಳಮೆಣಸಿನ ಪುಡಿ (10 ಕಾಳು), 2 ಚಮಚ ಕಾರ್ನ್ ಫ್ಲೋರ್, 1 ಚಮಚ ತುಪ್ಪ. ಮಾಡುವ ಬಗೆ: ಟೊಮೆಟೊವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಜೀರಿಗೆ ಹಾಗೂ ಬೇಯಿಸಿದ ಟೊಮೆಟೊವನ್ನು ಮಿಕ್ಸಿಗೆ ಹಾಕಿ ರುಬ್ಬಿ. ಆಮೇಲೆ ಅದನ್ನು ಜರಡಿಗೆ ಹಾಕಿ ಸೋಸಿರಿ. ರಸಕ್ಕೆ ಸಕ್ಕರೆ, ಉಪ್ಪು,ಕಾಳಮೆಣಸಿನ ಪುಡಿ , ಮುಸುಕಿನ ಜೋಳದ ಪುಡಿ , ತುಪ್ಪ ಹಾಕಿ 5 ನಿಮಿಷ ಚೆನ್ನಾಗಿ ಕುದಿಸಿ. ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಗೂ ಕಟ್ ಮಾಡಿದ ರಸ್ಕ್ ತುಂಡುಗಳನ್ನು ಹಾಕಿ ಸವಿಯಲು ನೀಡಿ.

ದೊಣ್ಣೆ ಮೆಣಸಿನಕಾಯಿ ಜುಣ್ಕಾ

Image
ಸಾಮಾಗ್ರಿಗಳು:  2 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆ ಮೆಣಸಿನಕಾಯಿ, 2 ಹದ ಗಾತ್ರದ ಈರುಳ್ಳಿ ಸಣ್ಣಗೆ ಹಚ್ಚಿ, 1 ಹದ ಗಾತ್ರದ ಟೊಮೆಟೋ-ಸಣ್ಣಗೆ ಹಚ್ಚಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪ, 1 ಚಮಚ ಮೆಣಸಿನಕಾಯಿ ಪುಡಿ, 1/4 ಚಮಚ ಅರಿಶಿನ ಪುಡಿ, 1 ದೊಡ್ಡ ಚಮಚ ಕಡ್ಲೆಹಿಟ್ಟು, 3 ದೊಡ್ಡ ಚಮಚ ಎಣ್ಣೆ. ವಿಧಾನಗಳು:  ಬಾಣಲೆಗೆ ಎಣ್ಣೆ ಸುರಿದು, ಒಲೆಯ ಮೇಲಿಟ್ಟು, ಎಣ್ಣೆ ಕಾದ  ತಕ್ಷಣ ಈರುಳ್ಳಿ ಹಾಕಿ ಗುಲಾಬಿ ಬಣ್ಣದ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ ಸೇರಿಸಿ ಸ್ವಲ್ಪ ಕೆದಕಿ, ದೊಣ್ಣೆ ಮೆಣಸನ್ನೂ ಸೇರಿಸಿ ಕೆದಕಿ, ಉಪ್ಪು, ಮೆಣಸಿನಕಾಯಿ ಮತ್ತು ಅರಿಸಿನ ಪುಡಿಗಳನ್ನು ಹಾಕಿ ಚೆನ್ನಾಗಿ ಮಗುಚಿರಿ. ದೊಣ್ಣೆ ಮೆಣಸಿನ ತುಂಡುಗಳಲ್ಲಿ ನೀರಿನ ಪೆಸೆ ಆರಿದ ಕೂಡಲೇ ಸ್ವಲ್ಪ ಕಡ್ಲೆ ಹಿಟ್ಟನ್ನು ಸಿಂಪಡಿಸಿ ಮುಗುಚಿರಿ. ತಳ ಹತ್ತದ ಹಾಗೆ ಕೈ ಬಿಡದೆ ಕೆದಕಿ. ಎರಡು ಅಥವಾ ಮೂರು ಸ್ವಲ್ಪ ಕಡ್ಲೆಹಿಟ್ಟನ್ನು ಸಿಂಪಡಿಸಿ, ಹಸಿ ವಾಸನೆ ಹೋದ ಮೇಲೆ, 1 ಕಪ್  ನೀರು ಸೇರಿಸಿ, ಚೆನ್ನಾಗಿ ಮಗುಚಿ, ಕುದಿಸಿರಿ. ಮಸಾಲೆ ಸ್ವಲ್ಪ ದಪ್ಪಗಾದ ಮೇಲೆ ಬಾಣಲೆ ಕೆಳಗಿಳಿಸಿ. ಕೊತ್ತಂಬರಿ ಸೊಪ್ಪು ಹಾಕಿ. ಚಪಾತಿ, ಪೂರಿ ಜತೆ ಸವಿಯಿರಿ.