ಅವಲಕ್ಕಿ ಪಾಕವಿಧಾನ
ಅವಲಕ್ಕಿ ಜನಪ್ರಿಯ ಉಪಾರ. ಇದನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತದೆಲ್ಲೆಡೆಯೂ ತಯಾರಿಸುತ್ತಾರೆ. ಅವಲಕ್ಕಿಯಲ್ಲಿ ಎರಡು ಮೂರು ಬಗೆಗಳಿರುವುದನ್ನು ಸಹ ನಾವು ಕಾಣಬಹುದು. ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ಅವಲಕ್ಕಿಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಅವಲಕ್ಕಿಯನ್ನು ಪವಿತ್ರ ಆಹಾರ ಎಂತಲೂ ಕರೆಯುತ್ತಾರೆ. ಕೆಲವು ದೇವರಿಗೆ, ವಿಶೇಷವಾಗಿ ಇದರಿಂದಲೇ ಪ್ರಸಾದವನ್ನೂ ಸಹ ತಯಾರಿಸುತ್ತಾರೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಉಪವಾಸ ಗೈಯುವಾಗಲೂ ಅವಲಕ್ಕಿಯನ್ನು ಸೇವಿಸುತ್ತಾರೆ. ಅವಲಕ್ಕಿಯು ಪೋಷಕಾಂಶ ಭರಿತವಾದ ಉಪಹಾರ. ಇದರ ಸೇವನೆಯು ಪರಿಪೂರ್ಣತೆಯನ್ನು ನೀಡುತ್ತದೆ. ತೆಂಗಿನ ತುರಿ, ಈರುಳ್ಳಿ, ಟೊಮ್ಯಾಟೋ ಹಾಗೂ ಸೂಕ್ತ ಪ್ರಮಾಣದ ಉಪ್ಪು, ಹುಳಿ ಮತ್ತು ಖಾರವನ್ನು ಬೆರೆಸಿದರೆ ರುಚಿಕರವಾದ ತಿಂಡಿಯಾಗುತ್ತದೆ. ಇದನ್ನು ನಿತ್ಯದ ರೀತಿಯಲ್ಲಿ ಸೇವಿಸದರೂ ಯಾವುದೇ ಬಗೆಯ ಬೇಸರ ಉಂಟಾಗದು. ಇದರಲ್ಲಿ ಸೇರಿಸಲಾಗುವ ಕೆಲವು ಒಗ್ಗರಣೆ ಪದಾರ್ಥಗಳು ಹಾಗೂ ತರಕಾರಿಗಳು ನಾಲಿಗೆಗೆ ಇನ್ನಷ್ಟು ರುಚಿಯನ್ನು ನೀಡುತ್ತವೆ. ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಈ ಉಪಹಾರವನ್ನು ಮುಂಜಾನೆಯ ಉಪಹಾರ, ಮಧ್ಯಾಹ್ನದ ಊಟದ ಸಲುವಾಗಿ, ಸಂಜೆ ಟೀ ಸಮಯದಲ್ಲಿ ಮತ್ತು ರಾತ್ರಿಯ ಊಟಕ್ಕಾಗಿಯೂ ಸಹ ಸವಿಯಬಹುದು. ನಿಮಗೂ ಈ ಉಪಹಾರದ ಪಾಕವಿಧಾನವನ್ನು ತಿಳಿದುಕೊಳ್ಳಬೇಕು ಎಂಬ ಬಯಕೆಯಾದರೆ ಈ ಮುಂದೆ ನೀಡಿರುವ ವೀಡಿಯೋ ಮತ್ತು ಹಂತ ಹಂತವಾದ ಚಿತ್ರವಿವರಣೆ...