Posts

Showing posts from May, 2018

ಈರುಳ್ಳಿ ಚಟ್ನಿಯ ಸವಿ ನೋಡಿದ್ದೀರಾ..?

Image
ಈರುಳ್ಳಿ ಚಟ್ನಿ ಆರೋಗ್ಯಕ್ಕೂ ಹಿತಕರ ಮಾಡುವುದಕ್ಕೂ ಸುಲಭ. ಇದನ್ನು ದೋಸೆ, ಇಡ್ಲಿ, ಅನ್ನದ ಜತೆ ಕೂಡ ಸೇವಿಸಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಟೊಮೆಟೊ-1/2 ಎಣ್ಣೆ-1 ಟೀ ಚಮಚ ಒಣ ಕೆಂಪುಮೆಣಸು-5-6 ಬೆಳ್ಳುಳ್ಳಿ-4 ಎಸಳು ಜೀರಿಗೆ-1/2 ಚಮಚ ಹುಳಿ-1 ಟೀ ಚಮಚ ಉಪ್ಪು-ರುಚಿಗೆ ತಕ್ಕಷ್ಟು ನೀರು-2-3 ಚಮಚ ಈರುಳ್ಳಿ ಹಾಗೂ ಟೊಮೆಟೋವನ್ನು ಚಿಕ್ಕಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಒಣಮೆಣಸು, ಬೆಳ್ಳುಳ್ಳಿ, ಈರುಳ್ಳಿ  ಹಾಕಿ ಹುರಿಯಿರಿ. ಇದು ತಣ್ಣಗಾದ ನಂತರ ಟೊಮೆಟೊ, ಹುಳಿ, ಉಪ್ಪು, ನೀರು ಸೇರಿಸಿ  ಚೆನ್ನಾಗಿ ರುಬ್ಬಿ. ಒಗ್ಗರಣೆಗೆ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ ಇದನ್ನು ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿದರೆ ಈರುಳ್ಳಿ ಚಟ್ನಿ ರೆಡಿ..

ಸ್ವೀಟ್ ಕಾರ್ನ್ ಪಲಾವ್ ಮಾಡಿ ಸವಿಯಿರಿ...

Image
ದಿನವೂ ಒಂದೇ ತರಹದ ಪದಾರ್ಥಗಳನ್ನು ಮಾಡಿ ಬೇಸರ ಬಂದಿದ್ದರೆ ಒಂದು ದಿನ ಊಟಕ್ಕೆ ಸ್ವೀಟ್ ಕಾರ್ನ್ ಪಲಾವ್ ಮಾಡಿಕೊಳ್ಳಿ. ಕಡಿಮೆ ಸಮಯದಲ್ಲಿ  ಊಟ ರೆಡಿಯಾಗುತ್ತದೆ ಮತ್ತು ಯಾವ ಪದಾರ್ಥಗಳನ್ನು ಮಾಡುವುದು ಎಂದು ಯೋಚಿಸುವುದೂ ತಪ್ಪುತ್ತದೆ. ಸ್ವೀಟ್ ಕಾರ್ನ್ ಯಾರಿಗೆ ತಾನೇ ಇಷ್ಟವಿಲ್ಲ!  ಎಲ್ಲರೂ ಇದನ್ನು ಇಷ್ಟಪಟ್ಟು ತಿನ್ನುವುದರಿಂದ ಹಾಗೂ ಇದು ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ನೀವು ಪಲಾವ್‌ನಲ್ಲಿ ಸ್ವೀಟ್ ಕಾರ್ನ್ ಅನ್ನು  ಬಳಸಬಹುದು. ಈ ಸ್ವೀಟ್ ಕಾರ್ನ್ ಪಲಾವ್ ಅನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ. ಬೇಕಾಗುವ ಸಾಮಗ್ರಿಗಳು: ಭಾಸುಮತಿ ಅಕ್ಕಿ - 1 ಕಪ್ ಸ್ವೀಟ್ ಕಾರ್ನ್ - 1 ಕಪ್ ಈರುಳ್ಳಿ - 1 ಕ್ಯಾಪ್ಸಿಕಮ್ - 1 ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ ತುಪ್ಪ - 2-3 ಚಮಚ ಲವಂಗದ ಎಲೆ - 1 ಸ್ಟಾರ್ - 1 ಲವಂಗ - 3-4 ಚೆಕ್ಕೆ - 1-2 ಇಂಚು ಕಾಳುಮೆಣಸು - 1 ಚಮಚ ಜೀರಿಗೆ - 1 ಚಮಚ ಹಸಿಮೆಣಸು - 2 ಗರಂ ಮಸಾಲಾ - 1 ಚಮಚ ಹಾಲು - 1 ಕಪ್ ಕೊತ್ತಂಬರಿ ಸೊಪ್ಪು - ಸ್ವಲ್ಪ ಉಪ್ಪು - ರುಚಿಗೆ ಮಾಡುವ ವಿಧಾನ: ಅಕ್ಕಿಯನ್ನು 30 ನಿಮಿಷ ನೀರು ಹಾಕಿ ನೆನೆಸಿಡಬೇಕು. ಈರುಳ್ಳಿ, ಕ್ಯಾಪ್ಸಿಕಮ್, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ಹೆಚ್ಚಿಟ್ಟುಕೊಳ್ಳಿ. ಒಂದು ಕುಕ್ಕರ್...

ರುಚಿಯಾದ ಪುಳಿಯೊಗರೆ ಮಾಡಿ ತಿನ್ನಿ...

Image
ಕರ್ನಾಟಕದಲ್ಲಿ ಪುಳಿಯೊಗರೆಯನ್ನು ಹೆಚ್ಚಾಗಿ ಬೆಳಗಿನ ತಿಂಡಿಗೆ ಮಾಡುತ್ತಾರೆ. ಹಬ್ಬದ ದಿನಗಳಲ್ಲಿ ಊಟದಲ್ಲಿ ಮತ್ತು ಕೆಲವು ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿಯೂ ಸಹ ಪುಳಿಯೊಗರೆಯನ್ನು ಮಾಡುತ್ತಾರೆ. ಹುಳಿ, ಸಿಹಿ ಮತ್ತು ಖಾರದ ಮಿಶ್ರಣವಾದ ಇದು ತಿನ್ನಲು ಬಹಳ ರುಚಿಯಾಗಿರುತ್ತದೆ. ಸರಳವಾಗಿ ಪುಳಿಯೊಗರೆಯನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ. ಬೇಕಾಗುವ ಸಾಮಗ್ರಿಗಳು: ಅನ್ನ - 2 ಕಪ್ ಹುಣಿಸೆಹಣ್ಣು - 1 ನಿಂಬೆಗಾತ್ರ ಕರಿಬೇವು - ಒಂದು ಹಿಡಿ ಎಣ್ಣೆ - 1/4 ಕಪ್ ದನಿಯಾ - 1 ಚಮಚ ಉದ್ದಿನಬೇಳೆ - 2-3 ಚಮಚ ಕಡಲೆ ಬೇಳೆ - 2-3 ಚಮಚ ಮೆಣಸಿನಕಾಳು - 1 ಚಮಚ ಒಣಮೆಣಸು - 4-5 ಬಿಳಿಎಳ್ಳು - 1 ಚಮಚ ಮೆಂತೆ - 1/2 ಚಮಚ ಸಾಸಿವೆ - 1 ಚಮಚ ಶೇಂಗಾ - 3-4 ಚಮಚ ಇಂಗು - 1/2 ಚಮಚ ಬೆಲ್ಲ - 1-2 ಚಮಚ ಉಪ್ಪು - ರುಚಿಗೆ ಮಾಡುವ ವಿಧಾನ: ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ದನಿಯಾ, ಮೆಂತೆ, ಮೆಣಸಿನಕಾಳು, 2 ಚಮಚ ಕಡಲೆ ಬೇಳೆ ಮತ್ತು 2 ಚಮಚ ಉದ್ದಿನ ಬೇಳೆಯನ್ನು ಹಾಕಿ ಸ್ವಲ್ಪ ಹುರಿದು ನಂತರ ಎಳ್ಳು ಮತ್ತು 3-4 ಕೆಂಪು ಮೆಣಸನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಹುರಿದ ಸಾಮಗ್ರಿಗಳು ಸ್ವಲ್ಪ ತಣ್ಣಗಾದ ಮೇಲೆ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿ ಪುಳಿಯೊಗರೆ ಪುಡಿಯನ್ನು ತಯಾರಿಸಿಕೊಳ್ಳಿ. ಹುಣಿಸೆ ಹಣ್ಣನ್ನು 1/2 ಕಪ್ ನೀರಿನಲ್ಲ...

ಇಡ್ಲಿ ಚಾಟ್ ಮಸಾಲಾ

Image
ಬೇಕಾಗುವ ಸಾಮಾಗ್ರಿಗಳು 2 ಕಪ್ ಇಡ್ಲಿ ತುಂಡುಗಳು 2 ಚಮಚ ತುಪ್ಪ 1 ಚಮಚ ಖಾರ ಪುಡಿ ¼ ಕಪ್ ಈರುಳ್ಳಿ (ಹೆಚ್ಚಿದ್ದು) ¼ ಕಪ್ ಟೊಮ್ಯಾಟೋ (ಹೆಚ್ಚಿದ್ದು) 2 ಚಮಚ ಹಸಿರು ಚಟ್ನಿ 2 ಚಮಚ ಮೊಸರು 2 ಚಮಚ ಸಿಹಿ ಚಟ್ನಿ ಚಟ್ ಮಸಾಲಾ 2 ಚಮಚ ಕೊತ್ತಂಬರಿ ಸೊಪ್ಪು (ಹೆಚ್ಚಿದ್ದು) ಹಸಿರು ಚಟ್ನಿ ಪುದೀನ ಮತ್ತು ಕೊತ್ತಂಬರಿ ಚಟ್ನಿ -  ½  ಕಪ್ ಪುದೀನ ಎಲೆಗಳು (ಹೆಚ್ಚಿದ್ದು) 1/4 ಕಪ್ ಕೊತ್ತಂಬರಿ ಸೊಪ್ಪು 2 ಹಸಿರು ಮೆಣಸಿನಕಾಯಿ (ಹೆಚ್ಚಿದ್ದು) ½ ನಿಂಬೆ ರಸ ಉಪ್ಪು ಸಿಹಿ ಹುಣಿಸೇಹಣ್ಣು ಮತ್ತು ಖರ್ಜುರದ ಚಟ್ನಿ 1/4 ಕಪ್ ಹುಣಿಸೇಹಣ್ಣು 1/4 ಕಪ್ ಬೀಜರಹಿತ ಖರ್ಜುರ 1/4 ಕಪ್ ಬೆಲ್ಲ 1/4 ಚಮಚ ಒಣ ಶುಂಠಿಯ ಪುಡಿ 1/2 ಚಮಚ ಧನಿಯಾ ಪುಡಿ 1/2 ಚಮಚ ಜೀರಿಗೆ ಪುಡಿ ಮಾಡುವ ವಿಧಾನ - - ಇಡ್ಲಿಗಳನ್ನು ತಣ್ಣಗಾಗಿಸಿ ಮತ್ತು 4 ತುಂಡು ಮಾಡಿ - ನಂತರ ಬಾಣಲೆಯಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ ಅದಕ್ಕೆ ಇಡ್ಲಿಗಳನ್ನು ತುಂಡುಗಳನ್ನು ಹಾಕಿ ಫ್ರೈ ಮಾಡಿ - ಅದರ ಮೇಲೆ ಖಾರ ಪುಡಿಯನ್ನು ಸಿಂಪಡಿಸಿ ಚೆನ್ನಾಗಿ ಮಿಶ್ರಣ ಮಾಡಿ. - ಈಗ ಒಂದು ಬಟ್ಟಲಿಗೆ ಹುರಿದ ಇಡ್ಲಿಯನ್ನು ತೆಗೆದುಕೊಂಡು, ಹೆಚ್ಚಿದ ಈರುಳ್ಳಿ, ಟೊಮೆಟೊಗಳನ್ನು ಹಾಕಿ - ನಂತರ ಹಸಿರು ಚಟ್ನಿ, ಸಿಹಿ ಚಟ್ನಿ, ಮತ್ತು ಮೊಸರು ಹಾಕಿ - ಸ್ವಲ್ಪ ಚಟ್ ಮಸಾಲಾ ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ...

ದೊಣ್ಣೆ ಮೆಣಸಿನಕಾಯಿ ಜುಣ್ಕಾ

Image
 ಸಾಮಾಗ್ರಿಗಳು:  2 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆ ಮೆಣಸಿನಕಾಯಿ, 2 ಹದ ಗಾತ್ರದ ಈರುಳ್ಳಿ ಸಣ್ಣಗೆ ಹಚ್ಚಿ, 1 ಹದ ಗಾತ್ರದ ಟೊಮೆಟೋ-ಸಣ್ಣಗೆ ಹಚ್ಚಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಸ್ವಲ್ಪ, 1 ಚಮಚ ಮೆಣಸಿನಕಾಯಿ ಪುಡಿ, 1/4 ಚಮಚ ಅರಿಶಿನ ಪುಡಿ, 1 ದೊಡ್ಡ ಚಮಚ ಕಡ್ಲೆಹಿಟ್ಟು, 3 ದೊಡ್ಡ ಚಮಚ ಎಣ್ಣೆ. ವಿಧಾನಗಳು:  ಬಾಣಲೆಗೆ ಎಣ್ಣೆ ಸುರಿದು, ಒಲೆಯ ಮೇಲಿಟ್ಟು, ಎಣ್ಣೆ ಕಾದ  ತಕ್ಷಣ ಈರುಳ್ಳಿ ಹಾಕಿ ಗುಲಾಬಿ ಬಣ್ಣದ ಬರುವವರೆಗೆ ಹುರಿಯಿರಿ. ನಂತರ ಟೊಮೆಟೊ ಸೇರಿಸಿ ಸ್ವಲ್ಪ ಕೆದಕಿ, ದೊಣ್ಣೆ ಮೆಣಸನ್ನೂ ಸೇರಿಸಿ ಕೆದಕಿ, ಉಪ್ಪು, ಮೆಣಸಿನಕಾಯಿ ಮತ್ತು ಅರಿಸಿನ ಪುಡಿಗಳನ್ನು ಹಾಕಿ ಚೆನ್ನಾಗಿ ಮಗುಚಿರಿ. ದೊಣ್ಣೆ ಮೆಣಸಿನ ತುಂಡುಗಳಲ್ಲಿ ನೀರಿನ ಪೆಸೆ ಆರಿದ ಕೂಡಲೇ ಸ್ವಲ್ಪ ಕಡ್ಲೆ ಹಿಟ್ಟನ್ನು ಸಿಂಪಡಿಸಿ ಮುಗುಚಿರಿ. ತಳ ಹತ್ತದ ಹಾಗೆ ಕೈ ಬಿಡದೆ ಕೆದಕಿ. ಎರಡು ಅಥವಾ ಮೂರು ಸ್ವಲ್ಪ ಕಡ್ಲೆಹಿಟ್ಟನ್ನು ಸಿಂಪಡಿಸಿ, ಹಸಿ ವಾಸನೆ ಹೋದ ಮೇಲೆ, 1 ಕಪ್  ನೀರು ಸೇರಿಸಿ, ಚೆನ್ನಾಗಿ ಮಗುಚಿ, ಕುದಿಸಿರಿ. ಮಸಾಲೆ ಸ್ವಲ್ಪ ದಪ್ಪಗಾದ ಮೇಲೆ ಬಾಣಲೆ ಕೆಳಗಿಳಿಸಿ. ಕೊತ್ತಂಬರಿ ಸೊಪ್ಪು ಹಾಕಿ. ಚಪಾತಿ, ಪೂರಿ ಜತೆ ಸವಿಯಿರಿ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಆಲೂ ಕರಿ ಮಾಡುವ ವಿಧಾನ ಇಲ್ಲಿದೆ ನೋಡಿ

Image
ಬೆಂಗಳೂರು : ಅಧಿಕ ಪೋಷ್ಠಿಕಾಂಶದಿಂದ ಕೂಡಿದ್ದ ತರಕಾರಿಯೆಂದರೆ ಆಲೂಗಡ್ಡೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಿಂದ ಮಾಡುವ ಎಲ್ಲಾ ಬಗೆಯ ಅಡುಗೆಗಳು ರುಚಿಯಾಗಿಯೇ ಇರುತ್ತದೆ. ಅದರಲ್ಲಿ ತಯಾರಿಸಬಹುದಾದ ಆಲೂ ಕರಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಪದಾರ್ಥಗಳು: ತುಪ್ಪ – 1 ಚಮಚ, ಜೀರಿಗೆ – 1 ಚಮಚ, ಪಲಾವ್ ಎಲೆ – 1-2, ಚಕ್ಕೆ – 1, ಏಲಕ್ಕಿ – 2, ಲವಂಗ – 2, ಸೋಂಪು – ಅರ್ಧ ಚಮಚ, ಇಂಗು- ಚಿಟಿಕೆ, ಅರಿಶಿನದ ಪುಡಿ – ಅರ್ಧ ಚಮಚ, ಅಚ್ಚ ಖಾರದ ಪುಡಿ – 1 ಚಮಚ, ದನಿಯಾ ಪುಡಿ – 1 ಚಮಚ, ಕಸೂರಿ ಮೇಥಿ –, ಅರ್ಧ ಚಮಚ, ಶುಂಠಿ ಪೇಸ್ಟ್ – ಅರ್ಧ ಚಮಚ, ಟೊಮೆಟೋ – ಸಣ್ಣಗೆ ಹೆಚ್ಚಿದ್ದು 3, ಆಲೂಗಡ್ಡೆ – 4, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – ಸ್ವಲ್ಪ ನಿಂಬೆಹಣ್ಣು – 1 ಮಾಡುವ ವಿಧಾನ: ಒಲೆಯ ಮೇಲೆ ಬಾಣಲೆಯಿಟ್ಟು ತುಪ್ಪು ಹಾಕಿ ಕಾಯಲು ಬಿಡಬೇಕು. ತುಪ್ಪ ಕಾದ ನಂತರ ಜೀರಿಗೆ, ಪಲಾವ್ ಎಲೆ. ಚಕ್ಕೆ, ಏಲಕ್ಕಿ, ಲವಂಗ, ಸೋಂಪು, ಇಂಗು ಚೆನ್ನಾಗಿ ಉರಿದುಕೊಳ್ಳಬೇಕು. ನಂತರ ಅರಿಶಿನದ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ. ಕಸೂರಿ ಮೇಥಿ. ಶುಂಠಿ ಪೇಸ್ಟ್, ಟೊಮೆಟೋ ಹಾಕಿ ಚೆನ್ನಾಗಿ ಉರಿದುಕೊಳ್ಳಬೇಕು. ತಟ್ಟೆಯನ್ನು ಮುಚ್ಚಿ 3-5 ನಿಮಿಷ ಬೇಯಿಸಿ, ಟೊಮೆಟೋ ಪೇಸ್ಟ್ ರೀತಿ ಆದ ಬಳಿಕ ಬೇಯಿಸಿ ಕತ್ತರಿಸಿದ ಆಲೂಗಡ್ಡೆ, ಉಪ್ಪು, 1 ಬಟ್ಟಲು ನೀರು ಹಾಕಿ 5-10 ನಿಮಿಷ ಕುದಿಯಲು ಬಿಡಬೇಕು. ಕೊನೆಯಲ್ಲಿ ಕೊತ್ತಂಬರ...

ಸರಳವಾಗಿ ಟೊಮೆಟೋ ರೈಸ್ ಮಾಡಿ ಸವಿಯಿರಿ..

Image
ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚಿನ ಜನರು ಪ್ರಮುಖ ಆಹಾರವನ್ನಾಗಿ ಅಕ್ಕಿಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಬೆಳಗಿನ ತಿಂಡಿಯಲ್ಲೂ ಸಹ ಹೆಚ್ಚಾಗಿ ಅನ್ನದಿಂದ ಮಾಡುವ ಟೊಮೆಟೋ ರೈಸ್, ಪುಳಿಯೊಗರೆ, ಚಿತ್ರಾಹ್ನ, ಪಲಾವ್ ಮುಂತಾದವುಗಳಿರುತ್ತವೆ. ಟೊಮೆಟೋ ರೈಸ್ ಅನ್ನು ನೀವು ಹೆಚ್ಚಿನ ಮಸಾಲೆ ಪದಾರ್ಥಗಳನ್ನು ಬಳಸದೇ ಸುಲಭವಾಗಿ ಮತ್ತು ಶೀಘ್ರವಾಗಿ ಮಾಡಬಹುದು. ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ. ಬೇಕಾಗುವ ಸಾಮಗ್ರಿಗಳು: ಅನ್ನ - 1 ಕಪ್ ಟೊಮೆಟೋ - 2-3 ಹಸಿಮೆಣಸು - 2 ಬೆಳ್ಳುಳ್ಳಿ - 8-10 ಎಸಳು ಉದ್ದಿನ ಬೇಳೆ - 1 ಚಮಚ ಜೀರಿಗೆ - 2 ಚಮಚ ಸಾಸಿವೆ - 1-2 ಚಮಚ ಅರಿಶಿಣ - 1/2 ಚಮಚ ಅಚ್ಚಖಾರದ ಪುಡಿ - 1/2 ಚಮಚ ಎಣ್ಣೆ - 4-5 ಚಮಚ ಕೊತ್ತಂಬರಿ ಸೊಪ್ಪು - ಸ್ವಲ್ಪ ಮಾಡುವ ವಿಧಾನ: ಟೊಮೆಟೋ, ಬೆಳ್ಳುಳ್ಳಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. 1 ದೊಡ್ಡ ಕಪ್ ಉದುರುದುರಾದ ಭಾಸುಮತಿ ಅನ್ನವನ್ನು ಅಥವಾ ನೀವು ದಿನನಿತ್ಯ ಬಳಸುವ ಯಾವುದೇ ಅನ್ನವನ್ನು ರೆಡಿಯಾಗಿಟ್ಟುಕ್ಕೊಳ್ಳಿ. ಒಂದು ಪ್ಯಾನ್ ಅನ್ನು ತೆಗೆದುಕೊಂಡು ಸ್ಟೌ ಮೇಲಿಡಿ ಮತ್ತು 4-5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಸಾಸಿವೆ ಮತ್ತು ಉದ್ದಿನಬೇಳೆಯನ್ನು ಹಾಕಿ. ಉದ್ದಿನ ಬೇಳೆ ಸ್ವಲ್ಪ ಕೆಂಪಗಾದಾಗ ಅದಕ್ಕೆ ಜೀರಿಗೆ, ಬೆಳ್ಳುಳ್ಳಿ ಮತ್ತು ಹಸಿಮೆಣಸನ್ನು ಕ್ರಮವ...

ರುಚಿ ರುಚಿಯಾದ ಬೀಟ್ ರೂಟ್ ರಸಂ ಸವಿದಿದ್ದೀರಾ...?

Image
ಬೆಂಗಳೂರು : ಬೀಟ್ ರೂಟ್ ಸಾಂಬಾರ್, ಪಲ್ಯ, ಹಲ್ವಾ ಇವೆಲ್ಲ ಮಾಮೂಲು. ಡಿಫರೆಂಟ್ ಆಗಿ, ಟೇಸ್ಟಿಯಾಗಿರೋ ಬೀಟ್ ರೂಟ್ ರಸಂ ಕೂಡ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿ : 1 ಬೌಲ್ ಹೆಚ್ಚಿದ ಬೀಟ್ ರೂಟ್, 2 ಚಮಚ ತೆಂಗಿನ ತುರಿ, 1-2 ಚಮಚ ಎಣ್ಣೆ, ಸಾಸಿವೆ, ಜೀರಿಗೆ, ಇಂಗು, ಅರಿಶಿನ, 1-2 ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಕರಿಬೇವು, ಪುದೀನಾ, ಸಾಸಿವೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಕಪ್ ಹುಣಿಸೆ ಹಣ್ಣಿನ ರಸ, ಉಪ್ಪು, ಮೆಣಸಿನ ಪುಡಿ, ಹೆಚ್ಚಿದ ಕೊತ್ತಂಬರಿ ಸೊಪ್ಪು. ಮಾಡುವ ವಿಧಾನ : ಬೀಟ್ ರೂಟ್ ಸಿಪ್ಪೆ ತೆಗೆದು ದೊಡ್ಡದಾಗಿ ಹೆಚ್ಚಿಕೊಂಡು 10 ನಿಮಿಷ ಬೇಯಿಸಿಕೊಳ್ಳಿ. ಅದು ತಣ್ಣಗಾದ ಬಳಿಕ 2 ಚಮಚ ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಬಿಸಿಯಾದ ಬಳಿಕ ಅರ್ಧ ಚಮಚ ಸಾಸಿವೆ, ಜೀರಿಗೆ ಮತ್ತು ಚಿಟಿಕೆ ಇಂಗನ್ನು ಹಾಕಿ. ಬೆಳ್ಳುಳ್ಳಿ ಎಸಳು ಮತ್ತು ಕರಿಬೇವಿನ ಎಲೆ ಹಾಕಿ. ಅದು ಸ್ವಲ್ಪ ಕಂದು ಬಣ್ಣಕ್ಕೆ ಬಂದ ಮೇಲೆ ಹೆಚ್ಚಿದ ಈರುಳ್ಳಿ ಮತ್ತು ಎರಡು ಹಸಿಮೆಣಸಿನ ಕಾಯಿ ಹಾಕಿ. ಅದನ್ನು ಸ್ವಲ್ಪ ಹುರಿದ ಬಳಿಕ ಹುಣಸೆ ಹಣ್ಣಿನ ರಸ, ಅರಿಶಿನ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ. 5 ನಿಮಿಷ ಕುದಿಸಿ ನಂತರ ರೆಡಿ ಮಾಡಿ ಇಟ್ಟುಕೊಂಡಿದ್ದ ಬೀಟ್ ರೂಟ್ ಪ್ಯೂರೆಯನ್ನು ಹಾಕಿ. ರಸಂ ಹದಕ್ಕೆ ಬೇಕಾಗುವಷ್ಟು ನೀರು ಬೆರೆಸಿ. 5 ನಿಮಿಷ ಕುದಿಸಿದ ಬಳಿಕ ...

ಮಜ್ಜಿಗೆ ಹುಳಿ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು: ಅಡುಗೆ ಮಾಡುವುದಕ್ಕೆ ಬೇಸರ ಅನಿಸಿದಾಗ ಸುಲಭವಾಗಿ ತಯಾರಾಗುವುದು ಮಜ್ಜಿಗೆ ಹುಳಿ. ಇದು ಅನ್ನಕ್ಕೆ ಹೇಳಿಮಾಡಿಸಿದ್ದು. ಮಜ್ಜಿಗೆ ಹುಳಿ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನ ಇಲ್ಲಿದೆ ನೋಡಿ ಸಾಮಗ್ರಿಗಳು 1. ಬೂದುಗುಂಬಳ ಕಾಯಿ ಹೆಚ್ಚಿದ್ದು -  1 ಕಪ್ 2. ಶುಂಠಿ -1 ಇಂಚು 3. ಹಸಿಮೆಣಸಿನ ಕಾಯಿ-2 4. ಜೀರಿಗೆ -   5ಚಮಚ 5. ತೆಂಗಿನ ತುರಿ -1/4 ಕಪ್ 6. ಕೊತ್ತಂಬರಿ ಸೊಪ್ಪು - ಸ್ವಲ್ಪ 7. ಅರಿಶಿನ - 1/2  ಸ್ಪೂನ್ 8. ಮೊಸರು -ಒಂದು ಕಪ್ ಒಗ್ಗರಣೆಗೆ 1. ಎಣ್ಣ-1 ಚಮಚ 2. ಸಾಸಿವೆ -  ಸ್ವಲ್ಪ 3. ಕರಿಬೇವು - ಸ್ವಲ್ಪ 4. ಇಂಗು- ಸ್ವಲ್ಪ 5. ಒಣಮೆಣಸಿನ ಕಾಯಿ - 1 ಮಾಡುವ ವಿಧಾನ ಬೂದುಗುಂಬಳದ ಹೋಳುಗಳನ್ನು ಸ್ವಲ್ಪ ಉಪ್ಪು ಹಾಕಿ ಒಂದು ಕಪ್ ನೀರೂ ಹಾಕಿ ಬೇಯಿಸಿ. ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಹಸಿಮೆಣಸಿನ ಕಾಯಿ, ಜೀರಿಗೆ ಹಾಕಿ ಹುರಿಯಬೇಕು. ಕೊಂಚ ತಣ್ಣಗಾದ ಮೇಲೆ ಇದರ ಜೊತೆಗೆ ಶುಂಠಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಅರಿಶಿನ ಸೇರಿಸಿ ರುಬ್ಬಿಕೊಳ್ಳಿ. ರುಬ್ಬಿದ ಈ ಮಿಶ್ರಣವನ್ನು ಬೇಯುತ್ತಿರುವ ಬೂದುಗುಂಬಳ ಕಾಯಿಗೆ ಹಾಕಿ ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಸ್ಟವ್ ಆಫ್ ಮಾಡಿ ಮೊಸರನ್ನು ಸೇರಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಾನುಗಳನ್ನು ಸೇರಿಸಿ, ಬಾಡಿಸಿ ಮಜ್ಜಿಗೆ...

ಸ್ವಾದಿಷ್ಠಕರವಾದ ಚಿಕನ್ ಪೆಪ್ಪರ್ ಡ್ರೈ

Image
ಬೇಕಾಗುವ ಸಾಮಗ್ರಿಗಳು- ಚಿಕನ್ - 1 ಕೆಜಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್ - ಸ್ವಲ್ಪ ಗರಂ ಮಸಾಲ - 1/2 ಚಮಚ ಟೊಮೆಟೊ- 2 ಹೆಚ್ಚಿದ್ದು ಈರುಳ್ಳಿ - 2 ಹೆಚ್ಚಿದ್ದು ಅರಿಶಿಣ ಪುಡಿ - ಸ್ವಲ್ಪ ಕೊತ್ತಂಬರಿ ಸೊಪ್ಪು - ಸ್ವಲ್ಪ ಕಾಳು ಮೆಣಸಿನ ಪುಡಿ - 3-4 ಚಮಚ ಹಸಿಮೆಣಸಿನ ಕಾಯಿ - 2  ಕರಿಬೇವಿನ ಎಲೆ - ಸ್ವಲ್ಪ ಎಣ್ಣೆ ಉಪ್ಪು ಮಾಡುವ ವಿಧಾನ- - ಕೋಳಿ ಮಾಂಸವನ್ನು ತೊಳೆದು ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣದ ಪುಡಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 1 ಗಂಟೆಗಳ ಕಾಲ ನೆನೆಯಲು ಬಿಡಿ.  - ನಂತರ ಬಾಣಲೆಗೆ ಅರ್ಥದಷ್ಟು ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಮಸಾಲೆ ಮಿಶ್ರಿತ ಚಿಕನ್ ಹಾಕಿ ಸ್ವಲ್ಪ ಕಂದು ಬಣ್ಣ ಬರುವಾಗ ತೆಗೆಯಯಿರಿ.  - ನಂತರ ಪಾತ್ರೆಯೊಂದಕ್ಕೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಜಜ್ಜಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗ ಹುರಿದು ಟೊಮೆಟೊ ಹಾಕಿ ನಂತರ ಎಣ್ಣೆಯಲ್ಲಿ ಕರಿದ ಮಾಂಸವನ್ನು ಹಾಕಿ ಮಿಶ್ರಣ ಮಾಡಿದರೆ ಚಿಕನ್ ಪೆಪ್ಪರ್ ಡ್ರೈ ಸವಿಯಲು ಸಿದ್ಧ.  ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಚಪಾತಿಯೊಂದಿಗೆ ರುಚಿಯಾದ ತರಕಾರಿಗಳ ಸಾಗು ಮಾಡಿ ಸವಿಯಿರಿ..

Image
ಯಾವಾಗಲೂ ಚಪಾತಿಯೊಂದಿಗೆ ಪಲ್ಯ ಮತ್ತು ಚಟ್ನಿಯನ್ನು ಮಾಡಿಕೊಂಡು ತಿಂದು ಬೇಸರವಾಗಿದ್ದರೆ ಒಮ್ಮೆ ತರಕಾರಿಗಳ ಸಾಗು ಮಾಡಿ ರುಚಿ ನೋಡಿ. ಸರಿಹೊಂದುವ ಯಾವುದೇ ತರಕಾರಿಗಳನ್ನು ನೀವು ಇದರಲ್ಲಿ ಬಳಸಬಹುದು. ಹಲವು ಪೌಷ್ಟಿಕಾಂಶಗಳನ್ನು ಒದಗಿಸುವುದರೊಂದಿಗೆ ತರಕಾರಿಗಳು ಆರೋಗ್ಯಕ್ಕೆ ಉತ್ತಮವಾದುದಾಗಿದೆ. ಸಾಗು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ.   ಬೇಕಾಗುವ ಸಾಮಗ್ರಿಗಳು: ಕ್ಯಾರೆಟ್ - 1 ಬೀನ್ಸ್ - 8-10 ಬಟಾಟೆ - 2 ಹೂಕೋಸು - 1/4 ಕಪ್ ಹಸಿರು ಬಟಾಣಿ - 1/2 ಕಪ್ ಕಾಯಿತುರಿ - 1/2 ಕಪ್ ಹಸಿಮೆಣಸು - 2 ದನಿಯಾ - 2 ಚಮಚ ಜೀರಿಗೆ - 1/2 ಚಮಚ ಚೆಕ್ಕೆ - 2 ಇಂಚು ಲವಂಗ - 2 ಕಾಳುಮೆಣಸು - 4-5 ಸಾಸಿವೆ - 1/2 ಚಮಚ ಉದ್ದಿನಬೇಳೆ - 2 ಚಮಚ ಕರಿಬೇವು - ಸ್ವಲ್ಪ ಎಣ್ಣೆ - 6-7 ಚಮಚ   ಮಾಡುವ ವಿಧಾನ: ಹಸಿರು ಬಟಾಣಿಯನ್ನು ಹಿಂದಿನ ದಿನ ರಾತ್ರಿಯೇ ನೆನೆಸಿಟ್ಟುಕೊಳ್ಳಬೇಕು. ಬಟಾಟೆ, ಹೂಕೋಸು, ಕ್ಯಾರೆಟ್ ಅನ್ನು ಹೆಚ್ಚಿಕೊಳ್ಳಿ. ಹೆಚ್ಚಿದ ತರಕಾರಿಗಳೊಂದಿಗೆ ನೆನೆಸಿದ ಬಟಾಣಿಯನ್ನು ಸೇರಿಸಿ ಬೇಯಲು ಅಗತ್ಯವಿರುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕುಕ್ಕರ್‌ನಲ್ಲಿ ಒಂದರಿಂದ ಎರಡು ಸೀಟಿಯನ್ನು ಹಾಕಿಸಿ. ಮಿಕ್ಸಿ ಜಾರ್‌ಗೆ ಕಾಯಿತುರಿ, ಚೆಕ್ಕೆ, ಲವಂಗ, ದನಿಯಾ, ಜೀರಿಗೆ, ಕಾಳುಮೆಣಸು, 2 ಹಸಿಮೆಣಸು ಮತ್ತು ಹುರಿದ ಉದ್ದಿನಬೇಳೆ 1 ಚಮಚ ಹಾಕಿ ಸ್ವಲ್ಪ ನೀರನ್ನ...

ಟೊಮೆಟೊ, ಬೆಳ್ಳುಳ್ಳಿಯ ರಸಂ ಮಾಡುವುದು ಹೇಗೆ ಗೊತ್ತಾ…?

Image
ಬೆಂಗಳೂರು: ಬಿಸಿಬಿಸಿ ಅನ್ನಕ್ಕೆ ರುಚಿಯಾದ  ಟೊಮೆಟೊ ಬೆಳ್ಳುಳ್ಳಿ ರಸಂ ಇದ್ದರೆ, ಊಟ ಹೊಟ್ಟೆಗೆ ಸೇರಿದ್ದೆ ತಿಳಿಯುವುದಿಲ್ಲ. ರುಚಿಯಾದ ಟೊಮೆಟೊ, ಬೆಳ್ಳುಳ್ಳಿ ರಸಂ ಮಾಡುವುದು ಹೇಗೆ ಗೊತ್ತಾ…? ಇಲ್ಲಿದೆ ನೋಡಿ ವಿಧಾನ. ಬೇಕಾಗುವ ಸಾಮಾಗ್ರಿ 500 ಗ್ರಾಂ  ಟೋಮೆಟೊ ಹಣ್ಣು 5-6 ಬೆಳ್ಳುಳ್ಳಿ ಎಸಳು ಹದವಾಗಿ ಕುಟ್ಟಿದ್ದು ರುಚಿಗೆ ತಕ್ಕಷ್ಟು ಉಪ್ಪು 1 ಚಮಚ ಕಾಳು ಮೆಣಸು ಸಣ್ಣ ತುಂಡು ಶುಂಠಿ ತುರಿ 1 ಚಮಚ ರಸಂ ಪುಡಿ 2 ಟೀ ಚಮಚ-ಅರಿಶಿನ ಪುಡಿ 1 ಟೀ ಚಮಚ ಕೆಂಪು ಮೆಣಸಿನ ಪುಡಿ   ವಿಧಾನ:  ಕುಕ್ಕರ್ ಗೆ ಕತ್ತರಿಸಿದ ಟೊಮೆಟೊ, ಬೆಳ್ಳುಳ್ಳಿ, ಕಾಳುಮೆಣಸು, ಶುಂಠಿ, ಉಪ್ಪು 4 ಕಪ್ ನೀರು ಸೇರಿಸಿ 2 ವಿಷಲ್ ಬರಿಸಿ.ಇದು ತಣ್ಣಗಾದ ನಂತರ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ. ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ರುಬ್ಬಿಕೊಂಡ ಟೊಮೆಟೊ ಮಿಶ್ರಣ, ಅರಿಶಿನ ಪುಡಿ, ರಸಂ ಪುಡಿ, ಕೆಂಪು ಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಒಂದು ಸಣ್ಣ ಪಾತ್ರೆಗೆ 2 ಚಮಚ ತುಪ್ಪ ಹಾಕಿ ಸಾಸಿವೆ, ಇಂಗು ಕರಿಬೇವು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಸಿದ್ದಪಡಿಸಿಕೊಳ್ಳಿ. ಇದನ್ನು ಟೊಮೆಟೋ ಮಿಶ್ರಣಕ್ಕೆ ಸೇರಿಸಿದರೆ ಟೊಮೆಟೊ, ಬೆಳ್ಳುಳ್ಳಿ ರಸಂ ಸಿದ್ಧ.  

ಅವರೆ ಕಾಳಿನ ಕುರ್ಮಾ...!!

Image
  ಬೇಕಾಗುವ ಸಾಮಗ್ರಿಗಳು: ಅವರೆಕಾಳು - 11/2 ಕಪ್ ಈರುಳ್ಳಿ - 2 ಟೊಮೆಟೋ - 2 ಹಸಿಮೆಣಸು - 2 ಲವಂಗ - 2-3 ಚೆಕ್ಕೆ - 1 ಇಂಚು ಏಲಕ್ಕಿ - 2 ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ ಅರಿಶಿಣ - 1 ಚಮಚ ಅಚ್ಚಖಾರದ ಪುಡಿ - 2 ಚಮಚ ಉಪ್ಪು - ರುಚಿಗೆ ಎಣ್ಣೆ - 3-4 ಚಮಚ ಗಸಗಸೆ - 1 ಚಮಚ ನೆನೆಸಿದ ಬಾದಾಮಿ - 5-6 ಸೋಂಪು - 1/2 ಚಮಚ ಗೋಡಂಬಿ - 5-6 ಕಾಯಿತುರಿ - 3-4 ಚಮಚ ಕೊತ್ತಂಬರಿ ಸೊಪ್ಪು - ಸ್ವಲ್ಪ ಮಾಡುವ ವಿಧಾನ: ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಟೊಮೆಟೋವನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹಸಿಮೆಣಸನ್ನು ಸಿಗಿದಿಟ್ಟುಕೊಳ್ಳಿ. ಅವರೆಕಾಳನ್ನು ಬಿಡಿಕೊಂಡು ಕುಕ್ಕರ್‌ನಲ್ಲಿ ಹಾಕಿ ಅದಕ್ಕೆ 1/2 ಕಪ್ ನೀರು ಮತ್ತು ಸ್ವಲ್ಪ ಉಪ್ಪನ್ನು ಹಾಕಿ 1-2 ಸೀಟಿಯನ್ನು ಹಾಕಿಸಿ. ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ 4-5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಅದಕ್ಕೆ ಲವಂಗ, ಚೆಕ್ಕೆ ಮತ್ತು ಸ್ವಲ್ಪ ಜಜ್ಜಿದ ಎರಡು ಏಲಕ್ಕಿಯನ್ನು ಹಾಕಿ ಹುರಿಯಿರಿ. ಅದಕ್ಕೆ ಈರುಳ್ಳಿಯನ್ನು ಹಾಕಿ ಸ್ವಲ್ಪ ಸಮಯ ಹುರಿಯಿರಿ ನಂತರ ಸಿಗಿದ 2 ಹಸಿಮೆಣಸನ್ನು ಹಾಕಿ ಹುರಿಯಿರಿ. ಈರುಳ್ಳಿ ಹೊಂಬಣ್ಣಕ್ಕೆ ಬಂದಾಗ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಟೊಮೆಟೋವನ್ನು ಹಾಕಿ 2 ನಿಮಿಷ ಹುರಿಯಿರಿ. ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಅರಿಶಿಣ, 2 ಚಮಚ ಅಚ್ಚಖಾರದ ಪುಡಿಯನ್ನು ಹಾಕಿ ಟೊಮೆಟೋ ಬೆಂದು ಕರಗುವ...

ಉಡುಪಿ ಶೈಲಿಯ ರುಚಿಕರ ರಸಂ

Image
ಬೇಕಾಗುವ ಸಾಮಗ್ರಿಗಳು  1/4 ಕಪ್ ತೊಗರಿ ಬೇಳೆ 2 ಸಣ್ಣದಾಗಿ ಹೆಚ್ಚಿದ ಟೊಮ್ಯಾಟೊ 1 ಸಣ್ಣ ಗಾತ್ರದ ಹುಣಿಸೇಹಣ್ಣು 1 - 2 ಚಮಚ ಬೆಲ್ಲ (ನಿಮ್ಮ ರುಚಿಗೆ ತಕ್ಕಂತೆ) ಉಪ್ಪು 2 ಹಸಿರು ಮೆಣಸಿನಕಾಯಿ 2 ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು 2 ಚಮಚ ರಸಂ ಪುಡಿ ಚಿಟಿಕೆ ಅರಿಶಿನ ಪುಡಿ ಎಣ್ಣೆ/ತುಪ್ಪ 1/2 ಚಮಚ ಸಾಸಿವೆ 1/2 ಚಮಚ ಜೀರಿಗೆ ಒಂದು ದೊಡ್ಡ ಚಿಟಿಕೆ ಇಂಗು 5 - 6 ಕರಿಬೇವಿನ ಎಲೆಗಳು  ಮಾಡುವ ವಿಧಾನ - - ಕುಕ್ಕರ್‌ನಲ್ಲಿ ತೊಳೆದ ತೊಗರಿ ಬೇಳೆ, 1 ಕಪ್ ನೀರು, 1 ಚಮಚ ಎಣ್ಣೆ, ಸ್ವಲ್ಪ ಅರಿಶಿನ ಸೇರಿಸಿ, 2 ಸೀಟಿ ಬರುವ ತನಕ ಬೇಯಿಸಿ - ಬೆಂದ ನಂತರ ಅದಕ್ಕೆ ಟೊಮ್ಯಾಟೊ, ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಸೇರಿಸಿ ಮತ್ತೆ 2 ಸೀಟಿ ಬರುವ ತನಕ ಬೇಯಿಸಿ - ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ಹುಣಸೇಹಣ್ಣಿನ ರಸ, ಕೊತ್ತಂಬರಿ ಸೊಪ್ಪು, ರಸಂ ಪುಡಿ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿ - ಒಂದು ಪಾತ್ರೆಯಲ್ಲಿ 2 ಚಮಚ ಎಣ್ಣೆ/ತುಪ್ಪ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಜೀರಿಗೆ,ಇಂಗು , ಕರಿಬೇವಿನ ಎಲೆಗಳನ್ನು ಹಾಕಿ ಒಗ್ಗರಣೆಯನ್ನು ಸಿದ್ದ ಪಡಿಸಿಕೊಳ್ಳಿ - ಈಗ ಈ ಒಗ್ಗರಣೆಯನ್ನು ಕುದಿಸಿದ ರಸಂಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಉಡುಪಿ ಶೈಲಿಯ ರುಚಿಕರ ರಸಂ ಸಿದ್ದ.