ಸಿಂಗಾರೆ ಹಿಟ್ಟಿನಿಂದ ಮಾಡಿದ ಬಿಸಿ ಬಿಸಿ ಪಕೋಡ ರೆಸಿಪಿ
ಸಿಂಗಾರೆ ಹಿಟ್ಟಿನಿಂದ ಮಾಡಿರುವ ಪಕೋಡ ಉತ್ತರ ಭಾರತೀಯರ ತಿನಿಸಾಗಿದ್ದು ಹೆಚ್ಚಾಗಿ ಇದನ್ನು ವೃತ ಇಲ್ಲವೇ ಉಪವಾಸ ಸಮಯಗಳಲ್ಲಿ ಸೇವಿಸುತ್ತಾರೆ. ಇದರಿಂದ ಹಿಟ್ಟನ್ನು ತಯಾರಿಸಿಕೊಂಡು ವ್ರತದ ದಿನದಂದು ಸೇವಿಸಲು ಬಳಸಿಕೊಳ್ಳುತ್ತಾರೆ. ಇಂದಿನ ಲೇಖನದಲ್ಲಿ ಬಿಸಿಬಿಸಿಯಾಗಿ ಸವಿಯಬಹುದಾದ ಸಿಂಗಾರೆ ಪಕೋಡಾವನ್ನು ತಯಾರಿಸುವ ವಿಧಾನವನ್ನು ನಾವು ತಿಳಿಸಿಕೊಡುತ್ತಿದ್ದೇವೆ. ಇದರ ಜೊತೆಗೆ ಆಲೂಗಡ್ಡೆ, ಮತ್ತು ಇನ್ನಿತರ ಮಸಾಲೆ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಪಕೋಡಾವನ್ನು ತಯಾರಿಸಲಾಗುತ್ತದೆ. ಈ ಪಕೋಡಾದೊಂದಿಗೆ ಫಲಹಾರಿ ಚಟ್ನಿಯನ್ನು ತಯಾರಿಸಿ ಸೇವಿಸಬಹುದಾಗಿದ್ದು ಉತ್ತಮ ಕಾಂಬಿನೇಶನ್ ಎಂದೆನಿಸಿದೆ. ನವರಾತ್ರಿ, ಏಕಾದಶಿ ಮತ್ತು ಇತರ ಹಬ್ಬಗಳ ಉಪವಾಸ ಕ್ರಮಕ್ಕಾಗಿ ಸಿಂಗಾರೆ ಹುಡಿಯಿಂದ ಮಾಡಿದ ಆಹಾರಗಳನ್ನು ಸೇವಿಸುತ್ತಾರೆ. ಹೊರಗಿನಿಂದ ಗರಿಗರಿಯಾಗಿ ಒಳಗಿನ ಭಾಗ ಮೃದುವಾಗಿ ಈ ಪಕೋಡಾವನ್ನು ಸಿದ್ಧಪಡಿಸಲಾಗುತ್ತದೆ. ಈ ಹಿಟ್ಟಿಗೆ ಸ್ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಸೇರಿಸುವುದರಿಂದ ರುಚಿ ಇಮ್ಮಡಿಗೊಳ್ಳುತ್ತದೆ. ಹಾಗಿದ್ದರೆ ಈ ಕೆಳಗೆ ನಾವು ನೀಡಿರುವ ಪಕೋಡಾ ಸಿದ್ಧಪಡಿಸುವ ಹಂತ ಹಂತದ ವಿಧಾನಗಳನ್ನು ಅರಿತುಕೊಳ್ಳಿ. Ingredients ಬೇಯಿಸಿದ ಆಲೂಗಡ್ಡೆ (ಸಿಪ್ಪೆ ಸುಲಿದು ಇದನ್ನು ಎರಡು ಭಾಗಗಳನ್ನಾಗಿ ತುಂಡರಿಸಿದ್ದು) - 2 ಕಲ್ಲುಪ್ಪು ರುಚಿಗೆ ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು) 1/2 ಕಪ್ ಹಸಿಮ...