Posts

Showing posts from February, 2018

ಸ್ವಾದಿಷ್ಠವಾದ ಮೊಟ್ಟೆ ಬೋಂಡಾ

Image
ಬೇಕಾಗುವ ಸಾಮಗ್ರಿ ಬೇಯಿಸಿದ ಮೊಟ್ಟೆಗಳು: ಐದು (ಮಧ್ಯಮ ಗಾತ್ರ) ಕಡ್ಲೆಹಿಟ್ಟು: - ½ ಕಪ್  ಕೆಂಪು ಮೆಣಸಿನ ಪುಡಿ - 1 ಚಿಕ್ಕ ಚಮಚ ಉಪ್ಪು ಎಣ್ಣೆ   ಮಾಡುವ ವಿಧಾನ - ಬೇಯಿಸಿದ  ಮೊಟ್ಟೆಗಳನ್ನು ಎರಡು ಭಾಗವಾಗಿ ಕತ್ತರಿಸಿ ಅಥವಾ ಇಡಿಯಾಗಿ ನಿಮ್ಮಿಷ್ಟದಂತೆ ಬೋಂಡಾ ಮಾಡಬಹುದು. - ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ನೀರು, ಮೆಣಸಿನ ಪುಡಿ ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.  - ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ.  - ಎಣ್ಣೆ ಕುದಿಯಲು ಪ್ರಾರಂಭವಾಗುತ್ತಲೇ ಬೇಯಿಸಿದ ಮೊಟ್ಟೆಗಳನ್ನು ಕಡ್ಲೆಹಿಟ್ಟಿನಲ್ಲಿ ಮುಳುಗಿಸಿ ಪೂರ್ಣ ಆವರಿಸುವಂತೆ ಮಾಡಿ ಎಣ್ಣೆಯಲ್ಲಿ ನಿಧಾನವಾಗಿ ಇಳಿಬಿಡಿ.  - ಅಂಚುಗಳು ಕೊಂಚ ಕಪ್ಪಾಗತೊಡಗಿದಾಕ್ಷಣ ಎಣ್ಣೆಯಿಂದ ಹೊರತೆಗೆಯಿರಿ.

ಬದನೆಕಾಯಿ ಎಣ್ಣೆಗಾಯಿ...!!!

Image
 ಬೆಳಗಿನ ತಿಂಡಿ ದೋಸೆ, ಚಪಾತಿ, ರೊಟ್ಟಿಯ ಜೊತೆ ಅಥವಾ ಮಧ್ಯಾಹ್ನದ ಊಟದ ಜೊತೆ ಒಂದೇ ರೀತಿಯ ಪಲ್ಯ, ಚಟ್ನಿ ಅಥವಾ ಸಾಂಬಾರ್ ಅನ್ನು ಮಾಡಿ ಬೇಸರವಾಗಿದ್ದರೆ ನೀವು ಒಮ್ಮೆ ಬದನೆಕಾಯಿಯ ಎಣ್ಣಗಾಯಿಯನ್ನು ಮಾಡಿ ನೋಡಬಹುದು. ಬದನೆಕಾಯಿ ಎಣ್ಣೆಗಾಯಿ ಚಪಾತಿ, ಅಕ್ಕಿರೊಟ್ಟಿ, ದೋಸೆ ಮತ್ತು ಅನ್ನದ ಜೊತೆಯೂ ರುಚಿಯಾಗಿರುತ್ತದೆ. ನಿಮಗೂ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಲೇಖನವನ್ನು ಓದಿ.   ಬೇಕಾಗುವ ಸಾಮಗ್ರಿಗಳು: ಬದನೆಕಾಯಿ - 10-15 ಈರುಳ್ಳಿ - 1-2 ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಚಮಚ ಸಾಸಿವೆ - 1 ಚಮಚ ಜೀರಿಗೆ - 1/2 ಚಮಚ ಉದ್ದಿನ ಬೇಳೆ - 1 ಚಮಚ ಕರಿಬೇವು - 1 ಹಿಡಿ ಕೊತ್ತಂಬರಿ ಸೊಪ್ಪು - 1 ಹಿಡಿ ಎಣ್ಣೆ - 1/4 ಕಪ್ ಉಪ್ಪು - ರುಚಿಗೆ ಹುಣಿಸೆ ಹಣ್ಣು - 1 ನಿಂಬೆ ಗಾತ್ರ ಸ್ಟಫಿಂಗ್ ಮಸಾಲಾ: ಶೇಂಗಾ - 1/2 ಕಪ್ ಕಾಯಿತುರಿ - 1/4 ಕಪ್ ದನಿಯಾ - 2 ಚಮಚ ಜೀರಿಗೆ - 1 ಚಮಚ ಮೆಂತೆ - 1/2 ಚಮಚ ಅರಿಶಿಣ ಪುಡಿ - 1/2 ಚಮಚ ಒಣಮೆಣಸು - 6-7   ಮಾಡುವ ವಿಧಾನ: ಚಿಕ್ಕ ಚಿಕ್ಕ ಬದನೆಕಾಯಿಗಳನ್ನು ಚೆನ್ನಾಗಿ ತೊಳೆದು ಸ್ವಲ್ಪವೇ ಮೇಲ್ಭಾಗದಲ್ಲಿ ಕತ್ತರಿಸಿ ಅವುಗಳನ್ನು ಬೆಚ್ಚಗಿನ ನೀರಿಗೆ 1 ಚಮಚ ಉಪ್ಪನ್ನು ಹಾಕಿ 15-20 ನಿಮಿಷ ನೆನೆಸಿಡಿ. ಒಂದು ನಿಂಬೆಹಣ್ಣಿನ ಗಾತ್ರದ ಹುಣಿಸೆಹಣ್ಣನ್ನು ತೆಗೆದುಕೊಂಡು ಅದನ್ನು 1/4 ಕಪ್ ಬೆಚ್ಚಗಿನ ನೀರಿನಲ್ಲಿ 10-15 ...

ಸುಲಭವಾಗಿ ರೆಡಿಯಾಗುವ ಆಲೂ ಬ್ರೆಡ್ ರೋಲ್ ಮಾಡುವುದು ಹೇಗೆ ಗೊತ್ತಾ...?

Image
ಬೆಂಗಳೂರು : ಏನಾದ್ರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕೆಂದು ಅನಿಸುವವರು ಹೊರಗೆ ಹೋಗಿ ತಿನ್ನುವ ಬದಲು ಮನೆಯಲ್ಲೇ ಸುಲಭವಾಗಿ ರೆಡಿಯಾಗುವ ಆಲೂ ಬ್ರೆಡ್ ರೋಲ್ ಮಾಡಿ  ತಿನ್ನಿ. ಅದನ್ನು ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿ: ಆಲೂಗಡ್ಡೆ- 3,  ಬಟಾಣಿ- 1 ಕಪ್, ಈರುಳ್ಳಿ- ಅರ್ಧ ಕಪ್, ಬ್ರೆಡ್ ಸ್ಲೈಸ್- 8 ರಿಂದ 10,  ಹಸಿಮೆಣಸಿನಕಾಯಿ- 3 ರಿಂದ 4, ಧನಿಯಾ ಪುಡಿ- ಅರ್ಧ ಚಮಚ, ಉಪ್ಪು- ರುಚಿಗೆ ತಕ್ಕಷ್ಟು , ಎಣ್ಣೆ- ಸ್ವಲ್ಪ.                                                                                                         ...

ರುಚಿಯಾದ ಹೆಸರುಬೇಳೆ ವಡೆ

Image
ಬೆಂಗಳೂರು: ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಹೆಸರುಬೇಳೆ ವಡೆ ಸಂಜೆಯ ವೇಳೆಗೆ ಒಂದೊಳ್ಳೆ ತಿನಿಸು. ಅದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ 2 ಕಪ್‌, ಅಕ್ಕಿ ಹಿಟ್ಟು 1/2 ಕಪ್‌, ಬೇಯಿಸಿದ ಆಲೂಗಡ್ಡೆ 1/2 ಕಪ್‌, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ 5-6, ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ತುರಿದ ಶುಂಠಿ ಸ್ವಲ್ಪ, ಜೀರಿಗೆ ಪುಡಿ 2 ಚಮಚ, ಅಡುಗೆ ಸೋಡಾ 1/4 ಚಮಚ, ಉಪ್ಪು: ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು. ಮಾಡುವ ವಿಧಾನ ಹೆಸರುಬೇಳೆಯನ್ನು 2 ಗಂಟೆ ನೀರಿನಲ್ಲಿ ನೆನೆಸಿ, ಬಸಿದು ನೀರು ಹಾಕದೆ ತರಿತರಿಯಾಗಿ ಅರೆದಿಡಿ. ಅದಕ್ಕೆ ಅಕ್ಕಿ ಹಿಟ್ಟು, ಬೇಯಿಸಿ ಮಸೆದ ಆಲೂಗಡ್ಡೆ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ತುರಿ, ಜೀರಿಗೆ ಪುಡಿ, ಸೋಡಾ, ಉಪ್ಪು ಸೇರಿಸಿ ನೀರಿನೊಂದಿಗೆ ವಡೆಯ ಹದಕ್ಕೆ ಕಲಸಿ ಇರಿಸಿ. ನಂತರ ಹಿಟ್ಟಿನಿಂದ, ಚಿಕ್ಕ ವಡೆಗಳನ್ನು  ತಟ್ಟಿ, ಎಣ್ಣೆಯಲ್ಲಿ ಕರಿಯಿರಿ.

ಜನಪ್ರಿಯ ಭಕ್ಷ್ಯಗಳಲ್ಲಿ ಬೀಸಿಬೇಳೆ ಬಾತ್‌ಗೂ ಆದ್ಯತೆ

Image
ಕರ್ನಾಟಕದ ಜನಪ್ರಿಯ ಭಕ್ಷ್ಯಗಳಲ್ಲಿ ಈ ಬೀಸಿಬೇಳೆ ಬಾತ್ ಕೂಡಾ ಒಂದು. ಇದನ್ನು ಹೆಚ್ಚಾಗಿ ಬೆಳಗಿನ ಉಪಹಾರವಾಗಿ ಸಾಮಾನ್ಯವಾಗಿ ಎಲ್ಲೆಡೆ ಬಳಸುತ್ತಾರೆ ಅಲ್ಲದೇ ಇದು ನೋಡಲು ಸಾಂಬಾರ್ ರೈಸ್‌ನಂತೆ ಕಂಡರು ರುಚಿಯಲ್ಲಿ ಇದು ಬೇರೆಯದೇ ರೀತಿಯಾಗಿರುತ್ತದೆ. ಅಷ್ಟೇ ಅಲ್ಲ ಇದನ್ನು ಮಾಡುವ ವಿಧಾನವು ತುಂಬಾ ಸರಳವಾಗಿದ್ದು ಸುಲಭವಾಗಿ ತಯಾರಿಸಬಹುದು.  ಬಿಸಿಬೇಳೆ ಬಾತ್ ಬೇಕಾಗುವ ಸಾಮಾಗ್ರಿಗಳು - ಅಕ್ಕಿ - 1 ಕಪ್ ತೊಗರಿ ಬೇಳೆ - 1/2 ಕಪ್  1 ಈರುಳ್ಳಿ 2 ಟೊಮೆಟೊ  1/2 ಕಪ್ ಬಟಾಣಿ  1/2 ಕಪ್ ಕ್ಯಾರೆಟ್ 1/2 ಕಪ್ ಬೀನ್ಸ್  ಸ್ವಲ್ಪ ಹುಣಸೆ ಹಣ್ಣಿನ ರಸ  ಸ್ವಲ್ಪ ಕರಿಬೇವು ಇಂಗು  ಎಣ್ಣೆ ಉಪ್ಪು 8-10 ಗೋಡಂಬಿ ತುಂಡು 2-3 ಚಮಚ MTR ಬಿಸಿ ಬೇಳೆ ಬಾತ್ ಪುಡಿ                    ಮಾಡುವ ವಿಧಾನ - ಮೊದಲು ಒಂದು ಪಾತ್ರೆಯಲ್ಲಿ ತರಕಾರಿಗಳನ್ನು ಹಾಕಿ ಅದಕ್ಕೆ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು. ನಂತರ ಒಂದು ಪಾತ್ರೆಯಲ್ಲಿ ಅಕ್ಕಿ ಮತ್ತು ಬೇಳೆಯನ್ನು ತೊಳೆದು ಕುಕ್ಕರಿನಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಜಾಸ್ತಿ ಹಾಕಿ ಬೇಯಿಸಬೇಕು. ಅನ್ನ ಚೆನ್ನಾಗಿ ಬೆಂದಿರಲಿ. ನಂತರ ಸ್ವಲ್ಪ ದೊಡ್ಡ ಬಾಣಲೆಯನ್ನು ತೆಗೆದುಕೊಂಡು ಅದನ್ನು ಸಣ್ಣ ಉರಿಯಲ್ಲಿಟ್ಟು ಎಣ್ಣೆಯನ್...

ಅತ್ಯಧಿಕ ಪೋಷಕಾಂಶವಿರುವ ಸೀಗಡಿ ಮೀನಿನ ಫ್ರೈ

Image
ಸಮುದ್ರ ಆಹಾರವು ಅತ್ಯಧಿಕ ಪೋಷಕಾಂಶಗಳನ್ನು ಹೊಂದಿದ್ದು ಅದರಲ್ಲಿ ಸೀಗಡಿಯು ಒಂದು. ಇದರಿಂದ ಅನೇಕ ಬಗೆಯ ರುಚಿಕರ ಆಹಾರವನ್ನು ತಯಾರಿಸಬಹುದು. ಅದರಲ್ಲಿ ನಾವು ಈಗ ಹೇಳ ಹೊರಟಿರುವುದು ಸೀಗಡಿ ಫ್ರೈ ಕುರಿತು ಅದನ್ನು ಹೇಗೆ ಮಾಡುವುದು ಎಂಬುದರ ಕುರಿತು ತಿಳಿಯಲು ಈ ವರದಿಯನ್ನು ಓದಿ.  ಬೇಕಾಗುವ ಸಾಮಗ್ರಿಗಳು 500 ಗ್ರಾಂ - ಸ್ವಚ್ಛಗೊಳಿಸಿದ ಸೀಗಡಿ ಮೀನು ಉಪ್ಪು 1 ಚಮಚ ಕೆಂಪು ಮೆಣಸಿನ ಪುಡಿ ½ ಚಮಚ ಅರಿಶಿನ ಪುಡಿ 1 ಚಮಚ ಹುರಿದ ಕೊತ್ತಂಬರಿ ಬೀಜದ ಪುಡಿ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ ಎಣ್ಣೆ ಕರಿಬೇವು ಕೊತ್ತಂಬರಿ ಸೊಪ್ಪು ನಿಂಬೆಹಣ್ಣು   ಮಾಡುವ ವಿಧಾನ- ಒಂದು ಬಟ್ಟಲಿನಲ್ಲಿ ಸೀಗಡಿ ಮೀನು, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಹುರಿದ ಕೊತ್ತುಂಬರಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ಆ ಮಿಶ್ರಣವನ್ನು ಸುಮಾರು 15 ನಿಮಿಷಗಳವರೆಗೆ ರೆಫ್ರಿಜಿರೇಟರ್‌ನಲ್ಲಿ ಇಡಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಎಣ್ಣೆ ಕಾದ ನಂತರ ಸೀಗಡಿಗಳನ್ನು ಅದರೊಳಗೆ ಹಾಕಿ ಚೆನ್ನಾಗಿ ಹುರಿಯಿರಿ, ಅದಕ್ಕೆ ಸ್ವಲ್ಪ ನಿಂಬೆರಸ ಕೊತ್ತಂಬರಿ ಕೊತ್ತಂಬರಿ ಸೊಪ್ಪುಗಳಿಂದ ಅಲಂಕರಿಸಿದರೆ ಸೀಗಡಿ ಫ್ರೈ ರೆಡಿ.

ಪನ್ನೀರ್ ಟಿಕ್ಕಾ ರೆಸಿಪಿ

Image
ಆಹಾರ ಪದಾರ್ಥದ ರುಚಿಯನ್ನು ಹೆಚ್ಚಿಸುವುದು ಹಾಗೂ ಸವಿಯುವಾಗ ಒಂದಿಷ್ಟು ಖುಷಿಯನ್ನು ನೀಡುವ ಆಹಾರ ಪದಾರ್ಥ ಎಂದರೆ ಪನ್ನೀರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇದನ್ನು ಸವಿಯಲು ಬಯಸುತ್ತಾರೆ. ಸಮೃದ್ಧವಾದ ಪ್ರೋಟೀನ್ ಹೊಂದಿರುವ ಪನ್ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಮೆಟಾಬಾಲಿಕ್ ದರವನ್ನು ಹೆಚ್ಚಿಸುತ್ತದೆ. ಇದು ನಮ್ಮ ದೇಹಕ್ಕೆ ಅನಗತ್ಯವಾದ ತೂಕವನ್ನು ಇಳಿಸಲು ಸಹಾಯ ಮಾಡುವುದು ಎಂದು ತಜ್ಞರು ಹೇಳುತ್ತಾರೆ. ಇದರ ಸೇವನೆಯಿಂದ ದೇಹದಲ್ಲಿ ಯಾವುದೇ ಅಡ್ಡ ಪರಿಣಾಮಗಳು ಉಂಟಾಗದು. ಹಾಲಿನ ಉತ್ಪನ್ನಗಳ ವಿಭಾಗದಲ್ಲಿಯೇ ಬರುವ ಈ ಪನ್ನೀರನ್ನು ವಿವಿಧ ಬಗೆಯ ಅಡುಗೆ ಪದಾರ್ಥಗಳಲ್ಲಿ ಸೇರಿಸುತ್ತಾರೆ. ಇದು ಅಡುಗೆಯ ಗುಣಮಟ್ಟ ಹಾಗೂ ರುಚಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುವುದು. ಪನ್ನೀರನ್ನು ಆಳವಾಗಿ ಹುರಿಯದೆ ಪನ್ನೀರ್ ಟಿಕ್ಕಾ ಪಾಕವಿಧಾನವನ್ನು ನಿಮಗೆ ತಿಳಿಸಿಕೊಡಲು ಬೋಲ್ಡ್ ಸ್ಕೈ ಮುಂದಾಗಿದೆ. ಈ ಪಾಕವಿಧಾನದಿಂದ ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಹೊಂದಬಹುದು ಎಂದು ಹೇಳಲಾಗುತ್ತದೆ.  ಇಂದು ಅನೇಕ ಜನರು ತೂಕ ಇಳಿಸುವ ಪರಿಯಲ್ಲಿ ಇರುತ್ತಾರೆ. ಅಂತಹವರು ಈ ಪಾಕವಿಧಾನದಿಂದ ಸಂತುಷ್ಟರಾಗಬಹುದು. ಒಮ್ಮೆ 'ಪನ್ನೀರ್ ಟಿಕ್ಕಾ ರೋಲ್, ಟ್ರೈ ಮಾಡಿ ಸೂಪರ್ ಇರುತ್ತೆ! ಮನೆಯಲ್ಲಿಯೇ ಬಹಳ ಸರಳ ಹಾಗೂ ಸುಲಭವಾಗಿ ತಯಾರಿಸಬಹುದಾದ ಈ ಪಾಕವಿಧಾನವನ್ನು ನೀವು ಮಾಡಬೇಕೆನ್ನುವ ಹವಣಿಕೆಯಲ್ಲಿದ್ದರೆ ಈ ಮುಂದೆ ನೀಡಿರುವ ವೀಡಿಯೋ ಹಾಗೂ ...

ಖಾರ ಪೊಂಗಲ್ ರೆಸಿಪಿ

Image
ಮಸಾಲೆ ಪೊಂಗಲ್ ಅಥವಾ ಖಾರಾ ಪೊಂಗಲ್ ಎಂದು ಕರೆಯಲಾಗುವ ಈ ತಿನಿಸು ದಕ್ಷಿಣ ಭಾರತೀಯರ ಭಕ್ಷ್ಯವಾಗಿದೆ. ಇದನ್ನು ವೆನ್ ಪೊಂಗಲ್ ಎಂದೂ ಸಹ ಕರೆಯುತ್ತಾರೆ. ಇದನ್ನು ಮುಖ್ಯವಾಗಿ ನೈವೇದ್ಯದ ತಿನಿಸನ್ನಾಗಿ ತಯಾರಿಸುತ್ತಾರೆ. ಮುಂಜಾನೆಯ ಉಪಹಾರ ಅಥವಾ ಮಧ್ಯಾಹ್ನದ ಊಟವನ್ನಾಗಿಯೂ ಸೇವಿಸುತ್ತಾರೆ. ಇದರಲ್ಲಿ ತುಪ್ಪದ ಪೊಂಗಲ್ ಸಾಮಾನ್ಯವಾದದ್ದು. ಬಾಯಲ್ಲಿ ಇಟ್ಟರೆ ಕರಗುವಂತಹ ಈ ತಿಸಿಸು ದಕ್ಷಿಣ ಭಾರತದವರ ಅಚ್ಚು ಮೆಚ್ಚಿನ ಉಪಹಾರಗಳಲ್ಲಿ ಒಂದು ಎಂದು ಹೇಳಬಹುದು.  ಮಸಾಲೆಯ ಪೊಂಗಲ್‍ಅನ್ನು ಬೇಯಿಸದ ಅನ್ನ ಹಾಗೂ ಹೆಸರು ಬೇಳೆಯ ಮಿಶ್ರಣದಿಂದ ಕೂಡಿರುತ್ತದೆ. ಇದರಲ್ಲಿ ಬೆರೆಸುವ ಮಸಾಲೆ ಮತ್ತು ತುಪ್ಪ ಇದರ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಹಬ್ಬ ಹರಿದಿನಗಳ ಸಮಯದಲ್ಲಿ ದೇವರ ನೈವೇದ್ಯಕ್ಕೆ ಬಹಳ ಸುಲಭವಾಗಿ ತಯಾರಿಸಬಹುದು. ಆರೋಗ್ಯಕ್ಕೆ ಉತ್ತಮವಾದ ಈ ತಿನಿಸನ್ನು ನೀವು ಸಹ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ನಿಮಗೂ ಈ ತಿನಿಸನ್ನು ತಯಾರಿಸಬೇಕು ಎನ್ನುವ ಆಸೆ ಇದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ. Ingredients  ಹೆಸರು ಬೇಳೆ - 3/4 ಕಪ್  ಅಕ್ಕಿ -3/4 ಕಪ್  ಜೀರಿಗೆ -1 ಟೀ ಚಮಚ  ಶುಂಠಿ- 1 ಇಂಚು (ತುರಿದಿರುವುದು)  ಕರಿಬೇವು/ಒಗ್ಗರಣೆ ಸೊಪ್ಪು- 8-9  ಹಸಿ ಮೆಣಸಿನ ಕಾಯಿ - 5-6  ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು- 1/2 ಕಪ್  ಕಾಳು ಮೆಣಸಿನ ಪುಡ...

ಒಮ್ಮೆ ಮಾವಿನಕಾಯಿ ಅಪ್ಪೆಹುಳಿ ಮಾಡಿ ಸವಿದು ನೋಡಿ...!!

Image
ಮಾವಿನಕಾಯಿ ಅಪ್ಪೆಹುಳಿ ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ತುಂಬಾ ಜನಪ್ರಿಯವಾದದ್ದು. ಮಾವಿನಕಾಯಿಯ ಸೀಸನ್‌ನಲ್ಲಿ ಬಹುಪಾಲು ಜನರು ಇದನ್ನು ಮಾಡಿ ಸವಿಯುತ್ತಾರೆ. ಉಪ್ಪು, ಹುಳಿ, ಖಾರದಿಂದ ಕೂಡಿರುವ ಇದು ಬಹಳ ರುಚಿಯಾಗಿರುತ್ತದೆ ಮತ್ತು ಮಾಡುವುದೂ ಸುಲಭ.  ಬೇಕಾಗುವ ಸಾಮಗ್ರಿಗಳು: ಹುಳಿ ಮಾವಿನಕಾಯಿ - 1 ಬೆಳ್ಳುಳ್ಳಿ - 1 ಗಡ್ಡೆ ಹಸಿಮೆಣಸು - 2 ಕರಿಬೇವು - ಸ್ವಲ್ಪ ಉಪ್ಪು - ರುಚಿಗೆ ಬೆಲ್ಲ - ಸ್ವಲ್ಪ ಇಂಗು - 1/4 ಚಮಚ ಉದ್ದಿನ ಬೇಳೆ - 1 ಚಮಚ ಸಾಸಿವೆ - 1 ಚಮಚ ಬಿಳಿ ಎಳ್ಳು - 1 ಚಮಚ ಒಣ ಮೆಣಸು - 1-2 ಎಣ್ಣೆ - 3-4 ಚಮಚ   ಮಾಡುವ ವಿಧಾನ: * ಮಾವಿನಕಾಯಿಯ ಸಿಪ್ಪೆ ತೆಗೆದು ಚೆನ್ನಾಗಿ ಬೇಯಿಸಿ. ಬೇಯಿಸಿದ ಮಾವಿನಕಾಯಿಯು ಸ್ವಲ್ಪ ಆರಿದ ಮೇಲೆ ಅದನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ. * ಒಂದು ಬಾಣಲೆಯನ್ನು ಸ್ಟ್ವೌ ಮೇಲಿಟ್ಟು 3-4 ಚಮಚ ಎಣ್ಣೆಯನ್ನು ಹಾಕಿ. ಎಣ್ಣೆ ಸ್ವಲ್ಪ ಬಿಸಿಯಾದ ನಂತರ ಅದಕ್ಕೆ ಉದ್ದಿನ ಬೇಳೆ, ಸಾಸಿವೆ, ಎಳ್ಳು, ಮೆಣಸು, ಹೆಚ್ಚಿದ ಹಸಿಮೆಣಸು, ಹೆಚ್ಚಿದ ಬೆಳ್ಳುಳ್ಳಿ, ಕರಿಬೇವು ಮತ್ತು ಇಂಗನ್ನು ಹಾಕಿ ಒಗ್ಗರಣೆಯನ್ನು ರೆಡಿ ಮಾಡಿಕೊಳ್ಳಿ. * ಈ ಮೊದಲೇ ಸ್ಮ್ಯಾಶ್ ಮಾಡಿಟ್ಟುಕೊಂಡಿರುವ ಮಾವಿನಕಾಯಿಯನ್ನು ಒಗ್ಗರಣೆಗೆ ಸೇರಿಸಿ. ಅದಕ್ಕೆ 2-3 ಕಪ್ ನೀರನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲವನ್ನು ಸೇರಿಸಿ ಕುದಿಸಿಕೊಂಡರೆ ಮಾವಿನಕಾಯಿ ಅಪ್ಪೆಹುಳಿ ರೆಡಿ. ಇದನ್ನು ನಿಮ್...

ನಾಲಿಗೆಯ ರುಚಿತಣಿಸುವ ಹೆಸರುಬೇಳೆ-ಆಲೂಗಡ್ಡೆ ಕರಿ

Image
ಬಹುತೇಕ ಮಂದಿಗೆ ಹೆಸರು ಬೇಳೆ ಅಚ್ಚು ಮೆಚ್ಚಿನದಾಗಿರುತ್ತದೆ. ಇಂತಹ ದಾಲ್‌ನಲ್ಲಿ ನಮ್ಮ ಆರೋಗ್ಯವನ್ನು ಸುಧಾರಿಸುವ ಅಧಿಕ ಪ್ರಮಾಣದ ವಿಟಮಿನ್‌ಗಳು ಮತ್ತು ಇನ್ನಿತರ ಪೋಷಕಾಂಶಗಳು ಇರುತ್ತವೆ. ಇಂದು ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಈ ಹೆಸರು ಬೇಳೆಯಲ್ಲಿ ತಯಾರಿಸಲಾಗುವ ಸುಲಭ ರೀತಿಯ ರೆಸಿಪಿಯನ್ನು ನಿಮ್ಮ ಮುಂದೆ ಇಡುತ್ತಿದೆ. ಇದನ್ನು ತಯಾರಿಸಲು ಕೇವಲ 20 ನಿಮಿಷ ಸಾಕು. ಅತ್ಯಂತ ರುಚಿಕರವಾದ ಈ ದಾಲ್ ಕರಿಯನ್ನು ಆಲುಗಡ್ಡೆ ಜೊತೆಗೆ ಮಾಡಿದರೆ ಮತ್ತಷ್ಟು ಪೋಷಕಾಂಶಭರಿತವಾಗುತ್ತದೆ. ಇದರಲ್ಲಿ ಬಳಸುವ ಮಸಾಲೆ ಪದಾರ್ಥಗಳು ನಿಮ್ಮ ಮಧ್ಯಾಹ್ನದ ಊಟವನ್ನು ಮತ್ತಷ್ಟು ರುಚಿಕರ ಮಾಡುತ್ತವೆ. ಇದರ ಜೊತೆಗೆ ಬಿಳಿ ಅನ್ನಕ್ಕೆ ಹೆಸರು ಬೇಳೆ ಕರ್ರಿಯು ಹೇಳಿ ಮಾಡಿಸಿದ ಕಾಂಬಿನೇಷನ್. ಬಿಸಿ ಬಿಸಿ ಅನ್ನ, ಹಪ್ಪಳ, ಹೆಸರು ಬೇಳೆ ದಾಲ್, ಜೊತೆಗೆ ಒಂದು ಚಮಚ, ತುಪ್ಪ ಮತ್ತು ಮಾವಿನ ಕಾಯಿ ಉಪ್ಪಿನ ಕಾಯಿ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು ಎನ್ನುವಂತಹ ರುಚಿ ವೈಭೋಗವನ್ನು ನಿಮ್ಮ ಮುಂದೆ ಇಡುತ್ತದೆ. ಬಾಯಿಯಲ್ಲಿ ನೀರೂರುತ್ತಿದೆಯೇ, ಬನ್ನಿ ಅದನ್ನು ಹೇಗೆ ಮಾಡುವುದು ಎಂದು ತಿಳಿದುಕೊಂಡು ಬರೋಣ. ಮೂವರಿಗೆ ಬಡಿಸ ಬಹುದು *ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು *ಅಡುಗೆಗೆ ತಗುಲುವ ಸಮಯ: 18 ನಿಮಿಷಗಳು ಅಗತ್ಯವಾದ ಪದಾರ್ಥಗಳು *ಹೆಸರು ಬೇಳೆ- 1 ಕಪ್ (ಬೇಯಿಸಿದಂತಹುದು) *ಆಲೂಗಡ್ಡೆ - 2 (ಬೇಯಿಸಿದಂತಹುದು) *ಟೊಮೇಟೊ - 3 (ಕತ್ತರಿಸಿದಂತಹುದು) *ಹಸಿ ಮೆಣಸಿನ ...

ಸ್ವಾದಿಷ್ಠ ಆಹಾರ ಪನೀರ್ ಬುರ್ಜಿ

Image
  ಬೇಕಾಗುವ ಸಾಮಗ್ರಿಗಳು ಎಣ್ಣೆ - 2 ಚಮಚ  ಜೀರಿಗೆ - 1 ಚಮಚ ಸಣ್ಣಗೆ ಹೆಚ್ಚಿದ ಈರುಳ್ಳಿ -  1  ಉಪ್ಪು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ - 2 ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ  ಅಚ್ಚಖಾರದ ಪುಡಿ - 1/2 ಚಮಚ ಸಣ್ಣಗೆ ಹೆಚ್ಚಿದ ಟೊಮೆಟೋ - 1  1/4 ಚಮಚ ಅರಿಶಿನ 1/2 ಚಮಚ ಗರಂ ಮಸಾಲಾ ನಷ್ಟು ಸಣ್ಣಗೆ ಪುಡಿಪುಡಿ ಮಾಡಿಟ್ಟುಕೊಂಡ ಪನೀರ್ - 2 ಕಪ್ ಕಸೂರಿ ಮೇಥಿ - 1 ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು - 2 ಚಮಚ   ತಯಾರಿಸುವ ವಿಧಾನ - ದೊಡ್ಡ ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿ ಮಾಡಿಕೊಳ್ಳಿ. ಅದಕ್ಕೆ ಜೀರಿಗೆ ಹಾಕಿ. ಅದು ಚಟಪಟ ಅಂದಮೇಲೆ ಹೆಚ್ಚಿದ ಈರುಳ್ಳಿ, ಹಸಿಮೆಣಸು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಸ್ವಲ್ಪ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಟೊಮೆಟೋ ಹಾಕಿ ಅದು ಮೆತ್ತಗಾಗುವವರೆಗೆ ಕೈಯ್ಯಾಡಿಸಿ. ನಂತರ ಅಚ್ಚಖಾರದ ಪುಡಿ, ಅರಿಶಿನ, ಗರಂ ಮಸಾಲಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. - ಸಣ್ಣ ಉರಿಯಲ್ಲಿ 1 ನಿಮಿಷ ಹಾಗೇ ಮಸಾಲೆಯನ್ನು ಹುರಿಯಿರಿ. ನಂತರ ಪುಡಿ ಮಾಡಿಟ್ಟುಕೊಂಡ ಪನೀರ್ ಹಾಕಿ. ಪನೀರ್ ಪೂರ್ತಿ ಮೆತ್ತಗಾಗದಂತೆ ನಿಧಾನವಾಗಿ ಕೈಯ್ಯಾಡಿಸಿ. ಸಣ್ಣ ಉರಿಯಲ್ಲಿ ಸುಮಾರು ಮೂರು ನಿಮಿಷ ಬಿಡಿ. ಪನೀರ್ ಅನ್ನು ಅತಿಯಾಗಿ ಹುರಿಯಬೇಡಿ, ಹಾಗೆ ಮಾಡಿದರೆ ಪನೀರ್ ಗಟ್ಟಿಯಾಗಿಬಿಡುತ್ತದೆ. ನಂತರ ಕಸೂರಿ ...

ಬೇಸಿಗೆಗೆ ಹೊಟ್ಟೆ ತಂಪು ಮಾಡಿಕೊಳ್ಳಲು ತಂಬುಳಿ ರೆಸಿಪಿ

Image
ಬೆಂಗಳೂರು: ಬೇಸಿಗೆಯಲ್ಲಿ ಹೊಟ್ಟೆಗೆ ತಂಪು ನೀಡುವ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಟೊಮೆಟೊ ತಂಬುಳಿ ಮಾಡುವ ವಿಧಾನ ಹೇಳುತ್ತೇವೆ ನೋಡಿಕೊಳ್ಳಿ. ಬೇಕಾಗಿರುವ ಸಾಮಗ್ರಿಗಳು ಹಣ್ಣಾಗಿರುವ ಟೊಮೆಟೊ ಹಸಿಮೆಣಸು ಮೊಸರು ಕೊತ್ತಂಬರಿ ಸೊಪ್ಪು ಎಣ್ಣೆ ಜೀರಿಗೆ ಸಾಸಿವೆ ಉಪ್ಪು   ಮಾಡುವ ವಿಧಾನ ಟೊಮೆಟೊ ಹಣ್ಣುಗಳನ್ನು ಇಡಿಯಾಗಿ ಬೇಯಿಸಿಕೊಳ್ಳಿ. ಚೆನ್ನಾಗಿ ಬೆಂದ ನಂತರ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ಸ್ವಲ್ಪ ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಜೀರಿಗೆ, ಸಾಸಿವೆ ಒಗ್ಗರಣೆ ಮಾಡಿ ಟೊಮೆಟೊ ಮಿಶ್ರಣಕ್ಕೆ ಸೇರಿಸಿದರೆ ಟೊಮೆಟೊ ತಂಬುಳಿ ಸವಿಯಲು ಸಿದ್ಧ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ