Posts

Showing posts from August, 2017

ಎಲೆಕೋಸು ಪಲ್ಯ ಪಾಕವಿಧಾನ

Image
ಎಲೆಕೋಸು ಪಲ್ಯ ಎನ್ನುವುದು ದಕ್ಷಿಣ ಭಾರತದ ಪ್ರಸಿದ್ಧ ಪಾಕವಿಧಾನದಲ್ಲಿ ಒಂದು. ಇದನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸುತ್ತಾರೆ. ತೆಂಗಿನ ತುರಿಯ ಜೊತೆಗೆ ಬೆರೆತುಕೊಳ್ಳುವ ಎಲೆಕೂಸಿನ ಪಲ್ಯ ಅನನ್ಯವಾದ ಸುವಾಸನೆಯನ್ನು ನೀಡುತ್ತದೆ. ಇದನ್ನು ತಮಿಳುನಾಡಿನಲ್ಲಿ ಕೂಸು ಪೊರಿಯಲ್ ಎಂದು ಕರೆದರೆ, ಕೇರಳದಲ್ಲಿ ಕೇಸೇಜ್ ಥೋರನ್ ಎಂದು ಕರೆಯುತ್ತಾರೆ.  ಎಲೆಕೋಸು ಪಲ್ಯವನ್ನು ಸಾಂಬರ್ ರೈಸ್, ರಸಮ್ ರೈಸ್ ಜೊತೆಗೆ ಸೈಡ್ ಡಿಶ್ ರೀತಿಯಲ್ಲಿ ಸವಿಯಬಹುದು. ಅಲ್ಲದೆ ದೋಸೆ, ರೊಟ್ಟಿಗೆ ಕರ್ರೀಯ ರೀತಿಯಲ್ಲಿ ತಿನ್ನಬಹುದು. ಉತ್ತಮ ಮಸಾಲದೊಂದಿಗೆ ತಯಾರಿಸಲಾಗುವ ಈ ಪಾಕವಿಧಾನ ಆರೋಗ್ಯಕ್ಕೂ ಪೂರಕವಾಗಿದೆ. ಈ ಪಲ್ಯವನ್ನು ಸುಲಭವಾಗಿ ಹಾಗೂ ಅಗತ್ಯವಿದ್ದಾಗ ಬಹು ಬೇಗ ತಯಾರಿಸಬಹುದು. ಈ ರುಚಿಕರ ಪಲ್ಯವನ್ನು ತಯಾರಿಸುವ ಬಗೆಯ ಕುರಿತು ವಿಡಿಯೋ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ನಾವಿಲ್ಲಿ ನೀಡಿದ್ದೇವೆ... Ingredients  ಹೆಚ್ಚಿಕೊಂಡ ತೆಂಗಿನಕಾಯಿ - 1/4 ಬೌಲ್  ಸಾಸಿವೆ ಕಾಳು - 2 ಟಿಚಮಚ  ಬ್ಯಾಡಗಿ ಮೆಣಸು - 1 1/2  ಹುಣಸೆ ಹಣ್ಣು - 1/2 ನಿಂಬೆ ಹಣ್ಣಿನ ಗಾತ್ರದಷ್ಟು  ಎಣ್ಣೆ - 1 ಟೇಬಲ್  ಚಮಚ ಜೀರಿಗೆ - 1 ಟೀ ಚಮಚ  ಇಂಗು - ಒಂದು ಚಿಟಕಿ  ಕರಿ ಬೇವಿನ ಎಲೆ - 7-10  ಹೆಚ್ಚಿಕೊಂಡ ಎಲೆಕೋಸು - 1/2 ಎಲೆಕೋಸು  ರುಚಿಗೆ ತಕ್ಕಷ್ಟು ಉಪ್ಪು How to Pr...

ಹದಿನೈದು ನಿಮಿಷದಲ್ಲಿ ಬ್ರೆಡ್ ಉಪ್ಪಿಟ್ಟು

Image
ಬೇಕಾಗುವ ಸಾಮಾಗ್ರಿಗಳು: 300 ಗ್ರಾಂ ಚನ್ನಾ ಬೇಳೆ 1/4 ಚಮಚ ಸಾಸಿವೆ 1/4 ಚಮಚ ಮೆಂತೆ 1/4 ಚಮಚ ಈರುಳ್ಳಿ ಬೀಜ 5 ಹಸಿರು ಮೆಣಸು 1 ಚಮಚ ಅರಶಿನ ಪುಡಿ 1 ಚಮಚ ಸಕ್ಕರೆ 1/2 ಕಪ್ ಕತ್ತರಿಸಿದ ತೆಂಗಿನಕಾಯಿ ಎಣ್ಣೆ, ಉಪ್ಪು   ವಿಧಾನ: ಬೇಳೆಯನ್ನು ನೀರಿನಲ್ಲಿ 4 ಗಂಟೆಗಳ ಕಾಲ ನೆನೆಯಿಸಿಡಿ. ಮೆದುವಾಗುವ ವರೆಗೆ ಬೇಯಿಸಿ. ಅರಶಿನ, ಉಪ್ಪು, ಸಕ್ಕರೆ ಸೇರಿಸಿ ಮತ್ತು ಬದಿಗಿಡಿ. ಎಣ್ಣೆಯನ್ನು ಕಾಯಿಸಿ. ಸಾಸಿವೆ, ಮೆಂತೆ, ಕತ್ತರಿಸಿದ ಕೆಂಪು ಮೆಣಸು, ಈರುಳ್ಳಿ ಬೀಜ, ತೆಂಗಿನ ಕಾಯಿ ಸೇರಿಸಿ, ಕರಿಯಿರಿ. ಕರಿದ ಮಸಾಲಕ್ಕೆ ಬೇಯಿಸಿದ ಬೇಳೆಯನ್ನು ಸೇರಿಸಿ. ಬೇಯಿಸಲು ಸಾಕಷ್ಟು ನೀರನ್ನು ಹಾಕಿ. ದಪ್ಪವಾಗುವ ತನಕ ಬೇಯಿಸಿ. ಪೂರಿಯೊಂದಿಗೆ ಬಡಿಸಿ.

ಬೆಂಗಾಲಿ ಚಿಕ್ಕನ್ ಕರಿ

Image
  ಬೇಕಾಗುವ ಸಾಮಗ್ರಿಗಳು : ಚಿಕ್ಕನ್ ತುಂಡುಗಳು - 1 ಬೌಲ್ ಈರುಳ್ಳಿ - 2 ಏಸಳು ಕರಿಬೇವು - 4 ದಾಲ್‌ಚೀನಿ - ಸ್ವಲ್ಪ   ಪಾಕ ವಿಧಾನ: ಚಿಕನ್‌ಗೆ ಉಪ್ಪು, ಖಾರದ ಪುಡಿ ಮತ್ತು ಎಣ್ಣೆ ಹಾಕಿ 1 ಗಂಟೆಗಳ ಕಾಲ ನೆನೆಯಲು ಬಿಡಿ. ಬಾಣಲೆಯಲ್ಲಿ  ಸ್ವಲ್ಪ ಎಣ್ಣೆ ಹಾಕಿ ಲವಂಗ ದಾಲ್‌ಚೀನಿ, ಕರಿಬೇವು ಎಲ್ಲವನ್ನು ಸ್ವಲ್ಪ ಬಣ್ಣ ಬರುವವರೆಗೂ ಹುರಿದುಕೊಂಡು ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿಕೊಂಡು ಕಂದು ಬಣ್ಣ ಬರುವವರೆಗೂ ಹುರಿಯಿರಿ. ಎಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ ಕೊನೆಯಲ್ಲಿ ಅದರಲ್ಲಿ ಚಿಕ್ಕನ್ ಬೆರಸಿ 5-6 ನಿಮಿಷ ಹೆಚ್ಚಿನ ಶಾಖದಲ್ಲಿ ಬೇಯಿಸಿ.

ಒಂದೆಲಗದ ಸೊಪ್ಪಿನ ಚಟ್ನಿ ಮಾಡವ ವಿಧಾನ

Image
ಬೆಂಗಳೂರು:  ಒಂದೆಲಗ ಅಥವಾ ಉರಗೆ ಸೊಪ್ಪು ಆರೋಗ್ಯ ತುಂಬಾ ಒಳ್ಳೆಯದು. ಆರೋಗ್ಯವೂ ಬೇಕು, ರುಚಿಯೂ ಬೇಕು ಎಂದರೆ ಒಂದೆಲಗದ ಚಟ್ನಿ ಮಾಡಬಹುದು. ಮಾಡುವ ವಿಧಾನ ತುಂಬಾ ಸಿಂಪಲ್. ಬೇಕಾಗುವ ಸಾಮಗ್ರಿಗಳು ಒಂದೆಲಗದ ಸೊಪ್ಪು ಹಸಿಮೆಣಸಿನ ಕಾಯಿ ಕಾಯಿ ತುರಿ ಉಪ್ಪು ಹುಣಸೆ ಹುಳಿ ಮಾಡುವ ವಿಧಾನ ಒಂದೆಲಗದ ಎಲೆಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದನ್ನು ಕಾಯಿತುರಿ, ಹಸಿಮೆಣಸಿನ ಕಾಯಿ, ಹುಣಸೆ ಹುಳಿ ಮತ್ತು ಉಪ್ಪು ಸೇರಿಸಿ ನೀರು ಹೆಚ್ಚು ಸೇರಿಸದೆ ರುಬ್ಬಿಕೊಳ್ಳಿ. ಇದಕ್ಕೆ ಒಗ್ಗರಣೆ ಹಾಕಿಕೊಂಡರೆ ಒಂದೆಲಗದ ಚಟ್ನಿ ರೆಡಿ. ಇದೇ ರೀತಿ ಮಜ್ಜಿಗೆ ಹಾಕಿಕೊಂಡರೆ ಒಂದೆಲಗದ ತಂಬುಳಿಯೂ ಆಗುತ್ತದೆ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಪ್ಪಟ ಗ್ರಾಮೀಣ ಶೈಲಿಯ ಮೊಟ್ಟೆ ಮಸಾಲ ರೆಸಿಪಿ

Image
ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುತ್ತಾರೆ ಆಹಾರ ತಜ್ಞರು. ಹೌದು ಸುಲಭವಾಗಿ ಸಿಗುವ, ಎಲ್ಲಾ ಕಡೆ ಲಭ್ಯವಿರುವ, ಅಗ್ಗದ ಮತ್ತು ಪೌಷ್ಠಿಕ ಆಹಾರ ಕೋಳಿ ಮೊಟ್ಟೆಗೆ ಸಮನಾದುದು ಇನ್ನೊಂದಿಲ್ಲ. ವಿಶೇಷವಾಗಿ ಬ್ರಹ್ಮಚಾರಿಗಳು, ಒಬ್ಬಂಟಿಗರು, ಹಾಸ್ಟೆಲ್ ಮತ್ತು ಕೊಠಡಿಗಳಲ್ಲಿ ವಾಸ ಮಾಡಿಕೊಂಡು ತಮ್ಮ ಆಹಾರ ತಾವೇ ಸಿದ್ಧಪಡಿಸಿಕೊಳ್ಳುವವರಿಗೆ ಕೋಳಿಮೊಟ್ಟೆ ಅಂತೂ ಆಪತ್ಬಾಂಧವ.  ಹೌದು ಬ್ಯಾಚ್ಯುಲರ್‌ಗಳ ತಿಂಗಳ ಇಪ್ಪತ್ತು ದಿನಗಳ ಆಹಾರವಾಗಿರುವ ಈ ಮೊಟ್ಟೆಗೆ ಕೊಂಚ ಈರುಳ್ಳಿ, ಟೊಮೇಟೊ, ಹಸಿ ಮೆಣಸು ಸೇರಿಸಿ ನಾನ್ ಸ್ಟಿಕಿ ತವದ ಮೇಲೆ ಹಾಕಿದರೆ ಆಮ್ಲೆಟ್ ಸಿದ್ಧ, ಅಂತೆಯೆ ಇನ್ನೂ ಕೊಂಚ ತರಕಾರಿಗಳನ್ನು ಕೊಚ್ಚಿ ಸೇರಿಸಿದರೆ ಎಗ್ ಬುರ್ಜಿ ರೆಡಿ. ಹೀಗೆ ಮೊಟ್ಟೆಯಲ್ಲಂತೂ ಹತ್ತಕ್ಕೂ ಹೆಚ್ಚು ಬಗೆಯ ವ್ಯಂಜನಗಳನ್ನು ಸಿದ್ಧಪಡಿಸಬಹುದು.   ಅದರಲ್ಲೂ ಕೋಳಿ ರೊಟ್ಟಿಯನ್ನು (ಕರಾವಳಿಯ ತಿನಿಸು) ಮುಳುಗಿಸಲು ಚಿಕನ್ ಕರಿ ಅಥವಾ ಬೇಯಿಸಿದ ಮೊಟ್ಟೆಯ ಕರಿಯೇ ಅತ್ಯುತ್ತಮವಾಗಿದೆ. ಆದರೆ ಮೊಟ್ಟೆಯೊಂದಿಗೆ ಕಾಯಿತುರಿ ಸೇರಿಸಿ ಯಾವುದಾದರೂ ವ್ಯಂಜನವನ್ನು ಇದುವರೆಗೆ ರುಚಿ ನೋಡಿದ್ದೀರಾ? ಇಲ್ಲವೇ? ಹಾಗಾದರೆ ಒಂದು ಅಪ್ಪಟ ಗ್ರಾಮೀಣ ಶೈಲಿಯ ರುಚಿಕರ ಖಾದ್ಯದಿಂದ ನೀವು ಇದುವರೆಗೆ ವಂಚಿತರಾಗಿದ್ದೀರಿ. ಪರವಾಗಿಲ್ಲ, ಕೆಳಗೆ ನೀಡಿರುವ ವಿಧಾನದ ಮೂಲಕ ಈ ಕೊರತೆಯನ್ನು ತುಂಬಿಕೊಳ್ಳಬಹುದು.  ಎಲ್ಲರ ಮನಗೆಲ್ಲುವ ಈ ಮಸಾಲಾವನ್ನು ಅಕ್ಕಿರೊಟ್ಟಿ, ಚಪಾತ...

ಮಳೆಗಾಲದಲ್ಲಿ ಈ ಕ್ರಿಸ್ಪಿ ಪನ್ನೀರ್ ಕಟ್ಲೇಟ್ ಸವಿದು ನೋಡಿ..

Image
ಹೊರಗಡೆ ಧೋ ಎಂದು ಮಳೆ ಸುರಿಯುತ್ತಿರಲು ಸಂಜೆ ಹೊತ್ತಲ್ಲಿ ಮನೆಯಲ್ಲಿ ಬಿಸಿ ಬಿಸಿ ಕಾಫಿ-ಟೀ ಜತೆ ಕ್ರಿಸ್ಪಿ, ಕ್ರಿಸ್ಪಿಯಾದ ಸ್ನ್ಯಾಕ್ಸ್  ಇದ್ದರೆ ಎಷ್ಟು ಚೆನ್ನ ಅಲ್ವಾ. ಆದ್ರೆ ಏನ್ ಮಾಡೋದು ಅಂತ ಯೋಚ್ನೆನಾ.. ಇಲ್ಲಿದೆ ಒಂದು ಈಸಿ ಟೇಸ್ಟಿ ರೆಸಿಪಿ. ಈ ಕ್ರಿಸ್ಪಿ ಪನ್ನೀರ್ ಕಟ್ಲೇಟ್ ನ್ನು ಒಮ್ಮೆ ಮನೆಯಲ್ಲೆ ಟ್ರೈ ಮಾಡಿ ನೋಡಿ.. ಬೇಕಾಗುವ ಸಾಮಾಗ್ರಿಗಳು : ಪನ್ನೀರ್ - 250 ಗ್ರಾಂ ಬ್ರೆಡ್ ಸ್ಲೈಸ್ - 2 ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - 1 ಚಮಚ ಕತ್ತರಿಸಿದ ಹಸಿ ಮೆಣಸಿನ ಕಾಯಿ - 1 ಚಾಟ್ ಮಸಾಲ - 1 ಚಮಚ ಪೆಪ್ಪರ್ ಪೌಡರ್ - 1/2 ಚಮಚ ಪುದೀನಾ ಎಲೆ - ಸ್ವಲ್ಪ ರಸ್ಕ್ ಅಥವಾ ಬ್ರೆಡ್ ಚೂರು - 1 ಕಪ್ ಮೈದಾ ಹಿಟ್ಟು - 2 ಚಮಚ ಎಣ್ಣೆ - 3 ಚಮಚ ಅರಿಷಿಣ- ಸ್ವಲ್ಪ ನೀರು - ಸ್ವಲ್ಪ   ಮಾಡುವ ವಿಧಾನ ಬ್ರೆಡ್ ಅನ್ನು ನೀರಿನಲ್ಲಿ ಅದ್ದಿ, ನಂತರ ನೀರಿನ್ನು ಹಿಂಡಿ ತೆಗೆಯಿರಿ. ಬಳಿಕ ಬ್ರೆಡ್ ಚೂರನ್ನು ಒಂದು ಬಟ್ಟಲಿಗೆ ಹಾಕಿ, ಅದರಲ್ಲಿ ಪನ್ನೀರ್,  ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಈರುಳ್ಳಿ, ಹಸಿ ಮೆಣಸಿನಕಾಯಿ, ಅರಿಶಿಣ ಪುಡಿ, ಚಾಟ್ಸ್, ಕರಿ ಮೆಣಸಿನ ಪುಡಿ, ಪುದೀನಾ ಎಲೆ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ, ಉಂಡೆ ಕಟ್ಟಿ. * ನಂತರ ಕಟ್ಲೇಟ್ ನ ಶೇಪ್ ಗೆ ತಟ್ಟಿ.  ತವಾವನ್ನು ಬಿಸಿ ಮಾಡಲು ಇಡಿ.  * ಮೈದಾ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ಕಲೆಸಿ. ಈಗ ತಟ್ಟಿದ ಕಟ್ಲೇಟ್ ಅನ್ನು ಒಮ್ಮೆ ಮೈ...

ಮಟನ್ ಪೈಡ್ ರೈಸ್

Image
ಬೇಕಾಗುವ ಸಾಮಗ್ರಿಗಳು : ಬಾಸುಮತಿ ಅಕ್ಕಿ 200  ಗ್ರಾಂ ಶುಂಠಿ ಮತ್ತು ಗಾರ್ಲಿಕ್ ಪೇಸ್ಟ್ ಚಮಚ 1 ಈರುಳ್ಳಿ,2 ಟೊಮೇಟೊ ಎಲಕ್ಕಿ, ಲವಂಗ ಮತ್ತು ದಾಲಚೀನಿ ಗೋಡಂಬಿ 4 ಗ್ರಾಂ ತುಪ್ಪ 200 ಗ್ರಾಂ ಮಟನ್ 150 ಗ್ರಾಂ ಗರಂ ಮಸಲಾ ಪುಡಿ 3 ಚಮಚ, ಸ್ವಲ್ಪ ಪುದಿನಾ ಎಲೆಗಳು 2 ಲಿಂಬೆ ಹಣ್ಣು   ಮಾಡುವ ವಿಧಾನ : ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಟೊಮೇಟೊ ಮತ್ತು ಈರುಳ್ಳಿಯನ್ನು ಚನ್ನಾಗಿ ಬೇಯಿಸಿಕೊಳ್ಳಿ. ಮೇಲಿನ ಎಲ್ಲ ಮಸಾಲೆಯನ್ನು ಚನ್ನಾಗಿ ಸೇರಿಸಿಕೊಳ್ಳಿ, ಅದಕ್ಕೆ ಶುಂಠಿ ಮತ್ತು ಗರ್ಲಿಕ್ ಪೇಸ್ಟ್ ಅದಕ್ಕೆ ಸೇರಿಸಿ ಮತ್ತು ಗರಂ ಮಸಾಲ ಮತ್ತು ಖಾರದ ಪುದಿಯನ್ನು ಸೇರಿಸಿಕೊಳ್ಳಿ ಇದಕ್ಕೆ ಸ್ವಲ್ಪ ನೀರನ್ನು ಬೆರಸಿಕೊಳ್ಳಿ ಮತ್ತು ಅದನ್ನು ಸ್ವಲ್ಪ ಕೂದಿಸಿ ಅದರಲ್ಲಿ ಅನ್ನವನ್ನು ಹಾಕಿ ನಂತರ ಅದಕ್ಕೆ ಲಿಂಬೆ ರಸವನ್ನು ಸೇರಿಸಿ.

ಸಿಹಿಯಾದ ಬೆಂಡೆಕಾಯಿ ಕಾಯಿರಸ ಮಾಡುವ ವಿಧಾನ

Image
ಬೆಂಗಳೂರು: ಬೆಂಡೆಕಾಯಿ ಬಳಸಿ ತರಹೇವಾರಿ ಐಟಂ ಮಾಡಬಹುದು. ಅದರಲ್ಲಿ ಸ್ವಲ್ಪ ಸಿಹಿ ಮಿಶ್ರಿತ ಸಾಂಬಾರ್ ನನ್ನೇ ಹೋಲುವ ಕಾಯಿರಸ ಕೂಡಾ ಒಂದು. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು ಬೆಂಡೆಕಾಯಿ ಕಾಯಿ ತುರಿ ಒಣ ಮೆಣಸು ಅರಸಿನ ಪುಡಿ ಹುಳಿ ಬೆಲ್ಲ ಉದ್ದಿನ ಬೇಳೆ ಇಂಗು ಒಗ್ಗರಣೆ ಸಾಮಾನು   ಮಾಡುವ ವಿಧಾನ ಬೆಂಡೆಕಾಯಿಯನ್ನು ಸಾಂಬಾರ್ ಗೆ ಬೇಕಾದ ಹಾಗೆ ಕತ್ತರಿಸಿಕೊಳ್ಳಿ. ಇದನ್ನು ಹುಣಸೆ ಹುಳಿ ರಸ, ಅರಸಿನ ಪುಡಿ, ಉಪ್ಪು, ಬೆಲ್ಲ ಹಾಕಿ ಬೇಯಿಸಿಕೊಳ್ಳಿ. ಬೆಲ್ಲ ಸ್ವಲ್ಪ ಜಾಸ್ತಿಯೇ ಇರಲಿ. ಬಾಣಲೆಯಲ್ಲಿ ಉದ್ದಿನ ಬೇಳೆ, ಕೆಂಪು ಮೆಣಸು, ಇಂಗು ಹಾಕಿಕೊಂಡು ಎಣ್ಣೆ ಹಾಕಿ ಹುರಿದುಕೊಳ್ಳಿ. ಇದನ್ನು ಕಾಯಿ ತುರಿಯೊಂದಿಗೆ ಹಾಕಿ ನುಣ್ಣಗೆ ರುಬ್ಬಿ. ಈ ಮಸಾಲೆಯನ್ನು ಬೆಂದ ಬೆಂಡೆಕಾಯಿ ಹೋಳಿನ ಜತೆಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದು ಸಾಂಬಾರ್ ನಷ್ಟು ತೆಳ್ಳಗಾಗುವುದು ಬೇಡ. ನಂತರ ಒಗ್ಗರಣೆ ಹಾಕಿದರೆ ಬೆಂಡೆಕಾಯಿ ಕಾಯಿರಸ ರೆಡಿ. ಇದು ಅನ್ನ, ದೋಸೆಯ ಜತೆಗೆ ತಿನ್ನಲು ರುಚಿ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಖಾರ ಮತ್ತು ರುಚಿಕರವಾದ ಚಿಕನ್ ರೆಸಿಪಿ

Image
ಯುಗಾದಿಯ ಮರು ದಿನವನ್ನು ವರ್ಷದ ತೊಡಕು ಅಂತ ಆಚರಿಸಲಾಗುವುದು. ಈ ದಿನ ಮಾಂಸಾಹಾರ ತಯಾರಿಸುವುದು ವಿಶೇಷ. ಆದರೆ ಶನಿವಾರ ವೃತ ಮಾಡುವವರು ಈ ದಿನ ಮಾಂಸಾಹಾರ ತಯಾರಿಸುವುದಿಲ್ಲ. ಅದರ ಬದಲು ಭಾನುವಾರ ತಯಾರಿಸುತ್ತಾರೆ. ಈ ಭಾರಿಯ ವರ್ಷದ ತೊಡಕು ಆಚರಿಸುವವರಿಗಾಗಿ ಈ ಚಿಕನ್ ರೆಸಿಪಿ ನೀಡಲಾಗಿದೆ. ಈ ಅಡುಗೆ ಖಾರವಾಗಿದ್ದು ಪಕ್ಕಾ ಭಾರತೀಯ ಶೈಲಿಯ ಅಡುಗೆಯಾಗಿದೆ. ಬೇಕಾಗುವ ಸಾಮಾಗ್ರಿಗಳು:  * ಚಿಕನ್ 1/2 ಕೆಜಿ (ಚಿಕ್ಕ ತುಂಡುಗಳಾಗಿ ಕತ್ತರಿಸಿದ್ದು)  * ಶುಂಠಿ ಪೇಸ್ಟ್ 2 ಚಮಚ  * ಈರುಳ್ಳಿ (ಕತ್ತರಿಸಿದ್ದು)  * ಟೊಮೆಟೊ ರಸ 2 ಚಮಚ  * ಮೆಂತೆ 1/4 ಚಮಚ  * ಸಾಸಿವೆ 1 ಚಮಚ  * ಜೀರಿಗೆ 1 ಚಮಚ  * ಬಡೇ ಸೋಂಪು 1 ಚಮಚ  * ಬೆಳ್ಳುಳ್ಳಿ3-4 ಎಸಳು  * ಕೆಂಪು ಒಣ ಮೆಣಸಿನಕಾಯಿ 4-6 * ಕೆಂಪು ಮೆಣಸಿನ ಪುಡಿ 2 ಚಮಚ  * ಅರಿಶಿಣ ಪುಡಿ ಚಿಕ್ಕ ಚಮಚದಲ್ಲಿ ಅರ್ಧದಷ್ಟು  * ಮೊಸರು 1 ಕಪ್  * ಎಣ್ಣೆ 2 ಚಮಚ * ನಿಂಬೆ ರಸ 2 ಚಮಚ * ರುಚಿಗೆ ತಕ್ಕ ಉಪ್ಪು ತಯಾರಿಸುವ ವಿಧಾನ: 1. ಚಿಕ್ಕ ತುಂಡುಗಳಾಗಿ ಕತ್ತರಿಸಿದ ಚಿಕನ್ ಚೆನ್ನಾಗಿ ತೊಳೆದು ನಿಂಬೆರಸ ಹಾಕಿ, ಪುಡಿ ಮಾಡಿದ ಜೀರಿಗೆ ಮತ್ತು ಬಡೇ ಸೋಂಪು, ಜಜ್ಜಿದ ಬೆಳ್ಳುಳ್ಳಿ ಮಿಶ್ರ ಮಾಡಿ ಇಡಬೇಕು.  2. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಬೇಕು. ನಂತರ ಸಾಸಿವೆಯನ್ನು ಹಾಕಬೇಕು. ಸಾಸಿವೆ ಚಟಾಪಟ...

ಗಣೇಶ ಚತುರ್ಥಿ ವಿಶೇಷ: ಸಬ್ಬಕ್ಕಿ ಕಿಚಡಿ ರೆಸಿಪಿ

Image
ಸಬ್ಬಕ್ಕಿ/ಸಾಬುದಾನ ಕಿಚಡಿ ಮಹಾರಾಷ್ಟ್ರದ ಜನಪ್ರಿಯ ಖಾದ್ಯ. ಊಟಕ್ಕಾಗಿ ತಯಾರಿಸುವ ಈ ಪಾಕವಿಧಾನವನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸುತ್ತಾರೆ. ಆಲೂಗಡ್ಡೆ, ಕಡಲೆಕಾಯಿ ಮತ್ತು ಇತರ ಮಸಾಲೆಗಳೊಂದಿಗೆ ಸಬ್ಬಕ್ಕಿ/ಸಾಬುದಾನ ಬೆರೆಸಿ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ವ್ರತ ಹಾಗೂ ಊಟದ ವಿಶೇಷ ಅಡುಗೆಯಾಗಿ ಮಾಡುತ್ತಾರೆ. ಮಸಾಲೆಯಿಂದ ಕೂಡಿರುವ ಆಲೂಗಡ್ಡೆ, ನಿಂಬೆ ಹುಳಿ, ಸಕ್ಕರೆ ಹಾಗೂ ಸಬ್ಬಕ್ಕಿ/ಸಾಬುದಾನ ಮಿಶ್ರಣದ ಕಿಚಡಿ ಬಾಯಲ್ಲಿ ನೀರನ್ನು ತರಿಸುತ್ತದೆ. ಸವಿಯುವಾಗ ಮಧ್ಯದಲ್ಲಿ ಸಿಗುವ ಹುರಿದ ಕಡಲೆಕಾಯಿ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪವಾಸದಂದು ಇದನ್ನು ಸೇವಿಸಿದರೆ ದಿನವಿಡೀ ದೈಹಿಕವಾಗಿ ಶಕ್ತಿಯುತವಾಗಿರಬಹುದು. ನೆನೆಸಿಕೊಂಡ ಸಾಬೂದಾನ/ಸಬ್ಬಕ್ಕಿ ನೆನೆದು ಒಡೆದಂತಾಗಿದ್ದರೆ ಪಾಕವಿಧಾನಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ತಿಳಿಯಬಹುದು. ನೀವೂ ಮನೆಯಲ್ಲಿ ಆರೋಗ್ಯ ಪೂರ್ಣವಾದ ಈ ಪಾಕವಿಧಾನವನ್ನು ಮಾಡಲು ಬಯಸುತ್ತಿದ್ದರೆ ಇಲ್ಲಿರುವುವ ವಿಡಿಯೋ ಪಾಕವಿಧಾನ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಬಹುದು. Ingredients  ಸಾಬೂದಾನ/ಸಬ್ಬಕ್ಕಿ - 1 ಕಪ್  ನೀರು - 1 ಕಪ್+ ತೊಳೆಯಲು  ಎಣ್ಣೆ - 1 ಟೇಬಲ್ ಚಮಚ  ಜೀರಿಗೆ - 1 ಟೀಚಮಚ ಹೆಚ್ಚಿಕೊಂಡ  ಮೆಣಸಿನಕಾಯಿ -2 ಟೀಚಮಚ  ಕರಿಬೇವಿನ ಎಲೆ - 6-10  ಬೇಯಿಸಿದ ಆಲೂಗಡ್ಡೆ (ಸಿಪ್ಪೆ ತೆಗೆದು ಹೋಳು ಹೋಳಾಗಿ...

ಎಗ್ ಪ್ರೈಡ್ ಮಸಾಲಾ

Image
  ಬೇಕಾಗುವ ಸಾಮಾನುಗಳು 1/2 ಕೆಜಿ ಮಾಂಸದ ಚೂರುಗಳು 2ಟೇಬಲ್ ಚಮಚೆ ಅಳವಿನಷ್ಟು ಎಣ್ಣೆ  4 ಈರುಳ್ಳಿ ಪೇಸ್ಟ್ ಮಾಡಿದ್ದು 2 ಚಮಚ ಬೆಳ್ಳುಳ್ಳಿ-ಶುಂಠಿ ಪೇಸ್ಟ್1 ಚಮಚ ಜೀರಿಗೆ ಪುಡಿ4 ಚಮಚ ಅರಸಿನ ಪುಡಿ4 ಚಮಚ ಮೆಣಸಿನ ಪುಡಿ4 ಚಮಚ ತೆಂಗಿನತುರಿ ಪೇಸ್ಟ್  4ಚಮಚ ಗೋಡಂಬಿ ಪೇಸ್ಟ್ 4 ಚಮಚ ಗಸೆಗಸೆ ಪೇಸ್ಟ್2 ಟೋಮೇಟೋ ಪೇಸ್ಟ್ 1 ಬಟ್ಟಲು ನೀರು4ಚಮಚ ಉಪ್ಪು 3 ಗಟ್ಟಿ ಬೇಯಿಸಿದ ಮೊಟ್ಟೆಗಳನ್ನು ಕತ್ತರಿಸಿದ್ದುಒಂದು ಚಮಚ ಕೊತ್ತಂಬರಿ ಸೊಪ್ಪು   ತಯಾರಿಸುವ ವಿಧಾನ ಚೆನ್ನಾಗಿ ಒಣಗಿದ ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಕಾಯಿಸಿ ಅರೆದ ಈರುಳ್ಳಿ ಪೇಸ್ಟ್ ಸೇರಿಸಿ ತೆಳು ಕಂದು ಬರುವವರೆಗೂ ಕದಡಬೇಕು.ಹಾಗೆಯೇ ಬೆಳ್ಳುಳ್ಳಿ ಶುಂಠಿ ಪೇಸ್ಟ್‌ನ್ನೂ ಸೇರಿಸಿ ಅದೇ ರೀತಿ ಕದಡಬೇಕು. ನಂತರ ಜೀರಿಗೆ ಪುಡಿ, ಅರಸಿನ ಪುಡಿ ಮತ್ತು ಮೆಣಸಿನ ಪುಡಿ, ಕೊತ್ತಂಬರಿ ಬೀಜದ ಪುಡಿ  ಸೇರಿಸಿ ಒಂದು ನಿಮಿಷಗಳ ಕಾಲ ಹುರಿಯಬೇಕು.ಇದಕ್ಕೆ ಗೋಡಂಬಿ, ಗಸೆಗಸೆ,ತೆಂಗಿನ ತುರಿ ಸೇರಿಸಿ 5 ನಿಮಿಷಗಳ ಕಾಲ ಹುರಿದು ಟೋಮೇಟೋ ಪೇಸ್ಟ್ ಸೇರಿಸಿಡಬೇಕು. ಆನಂತರ ಹಸಿ ಮಾಂಸದ ಚೂರುಗಳನ್ನು ಸೇರಿಸಿ ಚೆನ್ನಾಗಿ ಕಲಕಿ ನೀರು ಮತ್ತು ಉಪ್ಪನ್ನು ಸೇರಿಸಬೇಕು.ಇವುಗಳನ್ನು 10 ನಿಮಿಷಗಳ ಕಾಲ ಬೇಯಿಸಿ ಪ್ರತೀ ಬೇಯಿಸಿದ ಮೊಟ್ಟೆಯ ಕಾಲು ಭಾಗ ಕತ್ತರಿಸಿ ಮಾಂಸದ ಮೇಲಿಟ್ಟರೆ ಸೊಗಸಾದ ಪಲ್ಯ ರೆಡಿ.ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದಲ್ಲಿ ನೋಡುವುದಕ್ಕೂ ಸೊಗಸಾಗಿರು...

ಬಟಾಟೆ ಮೊಸರು ಕರಿ

Image
  ಬೇಕಾಗುವ ಸಾಮಾಗ್ರಿಗಳು: ಬಟಾಟೆ - 4 ಟೊಮ್ಯಾಟೋ - 2 ತುರಿದ ತೆಂಗಿನಕಾಯಿ - 5-6 ಚಮಚ ಹಸಿಮೆಣಸಿನಕಾಯಿ - 5 ಹುರಿಗಡಲೆ - ಒಂದು ಸಣ್ಣ ಕಪ್ ಲವಂಗ - 2 ಎಣ್ಣೆ - ಸ್ವಲ್ಪ ಮೊಸರು - ಒಂದು ಸಣ್ಣ ಕಪ್ ಕರಿಬೇವು ಉಪ್ಪು - ರುಚಿಗೆ ತಕ್ಕಷ್ಟು   ಪಾಕ ವಿಧಾನ : ಬಟಾಟೆಯನ್ನು ಬೇಯಿಸಿ ಅದು ತಣ್ಣಾಗದ ಮೇಲೆ ಅದನ್ನು ಬಜ್ಜಿಮಾಡಿ. ಹುರಿಗಡಲೆ, ತೆಂಗಿನತುರಿ ಮತ್ತು ಹಸಿಮೆಣಸಿನಕಾಯಿಗಳನ್ನು ಚೆನ್ನಾಗಿ ರುಬ್ಬಿ. ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಟೊಮ್ಯಾಟೋವನ್ನು 2 ನಿಮಿಷ ಬೇಯಿಸಿ ಅದಕ್ಕೆ ಬಜ್ಜಿ ಮಾಡಿದ ಬಟಾಟೆ, ಮೊಸರು ಮತ್ತು ರುಬ್ಬಿದ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿ. ಕೊನೆಯಲ್ಲಿ ಇದಕ್ಕೆ ತುಪ್ಪ ಮತ್ತು ಲವಂಗದ ಒಗ್ಗರಣೆ ಕೊಡಿ. ಬಿಸಿ ಇರುವಾಗಲೇ ಬಡಿಸಿ.

ವಾರಾಂತ್ಯದ ರಜಾ- ಮನೆಯಲ್ಲಿಯೇ ಮಾಡಿ 'ಮಟನ್' ಮಜಾ!

Image
ಇಂದು ಮಾಂಸಾಹಾರಿಗಳಿಗೆ ವಿಶೇಷವಾಗಿ ಮಸಾಲೆಯುಕ್ತ ಖಾದ್ಯವೊಂದನ್ನು ಪರಿಚಯಿಸುತ್ತಿದ್ದೇವೆ. ಸುಲಭವಾಗಿ ತಯಾರಿಸಬಹುದಾದ ಈ ಮಸಾಲೆಯುಕ್ತ ಮಟನ್ ಗ್ರೇವಿ ಕ್ಷಿಪ್ರವಾಗಿ ಬಡಿಸಬಹುದು. ಸಾಮಾನ್ಯವಾಗಿ ಮಟನ್ ಬೇಯಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಬೇಗನೇ ತಯಾರಿಸಲು ಹೋದರೆ ರುಚಿ ಬರುವುದಿಲ್ಲ. ಆದರೆ ಇದಕ್ಕೆ ಅಪವಾದವೆಂಬಂತೆ ಈ ವಿಧಾನ ಸುಲಭ, ಕಡಿಮೆ ಸಮಯದಲ್ಲಿ ತಯಾರಿಸುವಂತಹದ್ದಾಗಿದ್ದು ರುಚಿಯೂ ಅಪ್ರತಿಮವಾಗಿದೆ. ಅಲ್ಲದೇ ಇದನ್ನು ತಯಾರಿಸಲು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿರುವ ಸಾಮಾಗ್ರಿಗಳೇ ಸಾಕು. ಒಮ್ಮೆ ಇದು ತಯಾರಾಗಿ ಇದರ ಘಮ್ಮೆನ್ನುವ ಸುವಾಸನೆ ಗಾಳಿಯಲ್ಲಿ ಹರಡಿತೋ, ಮನೆಯ ಸದಸ್ಯರೆಲ್ಲರೂ ಕರೆಯದೇ ಊಟದ ಕೋಣೆಗೆ ಬಂದು ಮೊದಲೇ ಕುಳಿತುಕೊಳ್ಳುವ ಸಂಭವ ಹೆಚ್ಚು. ಇದನ್ನು ಅನ್ನ, ಚಪಾತಿ, ರೋಟಿ, ಪರೋಟ ಮೊದಲಾದವುಗಳ ಜೊತೆಗೆ ಸೇವಿಸಬಹುದು. ಬನ್ನಿ, ಈ ಖಾದ್ಯ ತಯಾರಿಸುವ ಬಗೆಯನ್ನು ಕಲಿಯೋಣ:    ಡಾಬಾ ಶೈಲಿಯಲ್ಲಿ ಮಟನ್ ಸಾರು    *ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು  *ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು  *ತಯಾರಿಕಾ ಸಮಯ: ನಲವತ್ತು ನಿಮಿಷಗಳು ಅಗತ್ಯವಿರುವ ಸಾಮಾಗ್ರಿಗಳು  *ಕುರಿ ಮಾಂಸ - 1/2 ಕೇಜಿ (ಚಿಕ್ಕ ತುಂಡುಗಳಾಗಿಸಿದ್ದು)  *ಬೆಣ್ಣೆ - 1/2 ಕಪ್ *ಗರಂ ಮಸಾಲಾ - 1 ಚಿಕ್ಕ ಚಮಚ  *ಧನಿಯ ಪುಡಿ - 1 ಚಿಕ್ಕ ಚಮಚ  *ಕೆಂಪು ಮೆ...

ಮಾವಿನ ಕಾಯಿ ಸಿಹಿ ಚಟ್ನಿ ಮಾಡುವ ವಿಧಾನ

Image
ಬೆಂಗಳೂರು: ಇನ್ನೇನು ಮಾವಿನ ಕಾಯಿ ಸೀಸನ್ ಬಂದೇ ಬಿಡ್ತು.  ಇದರಲ್ಲಿ ಥರಹೇವಾರಿ ಅಡುಗೆ ಮಾಡಬಹುದು. ಮಾವಿನ ಕಾಯಿ ಬಳಸಿ ಸಿಹಿ ಚಟ್ನಿ ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ ನೋಡಿಕೊಳ್ಳಿ. ಬೇಕಾಗುವ ಸಾಮಗ್ರಿಗಳು ಮಾವಿನ ಕಾಯಿ ಕಾಯಿತುರಿ ಕಪ್ಪು ಎಳ್ಳು ಹಸಿಮೆಣಸು ಅರಸಿನ ಪುಡಿ ಉದ್ದಿನ ಬೇಳೆ ಒಣ ಮೆಣಸು ಇಂಗು ಉಪ್ಪು ಒಗ್ಗರಣೆ ಸಾಮಾನು   ಮಾಡುವ ವಿಧಾನ ಮಾವಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು, ಹಸಿಮೆಣಸು, ಅರಸಿನಪುಡಿ, ಬೆಲ್ಲ, ಉಪ್ಪು ಹಾಕಿ ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ಎಳ್ಳು, ಉದ್ದಿನ ಬೇಳೆ, ಒಣಮೆಣಸು, ಇಂಗು ಹುರಿದುಕೊಂಡು ಕಾಯಿತುರಿಯೊಂದಿಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಬೇಯಿಸಿದ ಮಾವಿನಕಾಯಿಯೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಇದಕ್ಕೆ ಒಗ್ಗರಣೆ ಕೊಟ್ಟರೆ ಮಾವಿನ ಕಾಯಿ ಸಿಹಿ ಚಟ್ನಿ ರೆಡಿ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ