Posts

Showing posts from October, 2017

ಸ್ಪೆಷಲ್ ರೆಸಿಪಿ ವೆಜ್ ಸ್ಪ್ರಿಂಗ್ ರೋಲ್

Image
ಯಾವಾಗ್ಲೂ ಒಂದೇ ಥರಹದ ತಿಂಡಿ ತಿಂದು ಬೇಜಾರಾಗುತ್ತೆ. ಏನಾದ್ರೂ ಸ್ಪೆಷಲ್ ಆಗಿ ಟ್ರೈ ಮಾಡೋಣ ಅನ್ಸತ್ತೆ. ಅದ್ರಲ್ಲೂ ಮಳೆಗಾಲದಲ್ಲಿ ಸ್ಪೆಷಲ್ ಸ್ನ್ಯಾಕ್ಸ್ ಇದ್ರೆ ಅದೂ ಮನೆಯಲ್ಲೇ ರೆಡಿ ಮಾಡಿಕೊಂಡು ಸವಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ.. ಅದಕ್ಕಾಗಿ ಇಲ್ಲಿದೆ ಕ್ವಿಕ್ ಆಗಿ ಮಾಡಬಹುದಾದ ವೆಜ್ ಸ್ಪ್ರಿಂಗ್ ರೋಲ್ ರೆಸಿಪಿ.  ಬೇಕಾಗುವ ಸಾಮಾಗ್ರಿಗಳು: * ಗೋಧಿ ಹಿಟ್ಟು -2 ಕಪ್ * ಮೈದಾ 1/2 ಕಪ್ * ತರಕಾರಿಗಳು- ಕ್ಯಾರೆಟ್, ಕ್ಯಾಪ್ಸಿಕಂ, ಬೀನ್ಸ್, ಈರುಳ್ಳಿ - 1 ಕಪ್ * ಶುಂಠಿ-ಬೆಳ್ಳುಳ್ಳಿ ಪೇಸ್ಟ್-1 ಚಮಚ * ರುಚಿಗೆ ತಕ್ಕಷ್ಟು ಉಪ್ಪು * ಅರಿಶಿಣ ಪುಡಿ - 1 ಚಿಟಿಕೆ * ಚಾಟ್ ಮಸಾಲ - 1 ಚಮಚ * ಎಣ್ಣೆ 1 ಚಮಚ * ನೀರು 1 ಕಪ್ * ನಿಂಬೆ ರಸ 1 ಚಮಚ   ಮಾಡುವ ವಿಧಾನ: * ಗೋಧಿ ಹಾಗೂ ಮೈದಾವನ್ನು ಮಿಕ್ಸ್ ಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲೆಸಿ. ಈಗ ತರಕಾರಿಗಳನ್ನು ಬೇಯಲು ಇಡಿ. * ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಬೇಯಿಸಿದ ಎಲ್ಲಾ ತರಕಾರಿಗಳನ್ನು ಹಾಕಿ 2-3 ನಿಮಿಷ ಹುರಿಯಿರಿ. * ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಚಾಟ್ ಮಸಾಲ, ನಿಂಬೆ ರಸ, ರುಚಿಗೆ ತಕ್ಕ ಉಪ್ಪು ಹಾಕಿ 5 ನಿಮಿಷ ಫ್ರೈ ಮಾಡಿ,  ನಂತರ ಉರಿಯಿಂದ ಇಳಿಸಿ ಇಡಿ. * ಈಗ ಕಲೆಸಿದ ಹಿಟ್ಟಿನಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ತಯಾರಿಸಿ ಚಪಾತಿ ರೀತಿ...

ಕಿಡ್ನಿಯಲ್ಲಿ ಕಲ್ಲು ಕರಗಿಸಬೇಕಾ… ಹಾಗಿದ್ರೆ ಹೀಗೆ ಮಾಡಿ…

Image
ಕಿಡ್ನಿ ಸ್ಟೋನ್…  ಪ್ರಸ್ತುತ ಯಾಂತ್ರಿಕ ಜೀವನದಲ್ಲಿ ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಶೇ. 10-15ರಷ್ಟು ಜನ ಪ್ರಪಂಚದಲ್ಲಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾದಲ್ಲಿ ಕಿಡ್ನಿ ಸ್ಟೋನ್ ಗೆ ಮೊದಲ ಹಂತದಲ್ಲೇ ಚಿಕಿತ್ಸೆ ಪಡೆದು ಮನೆಯಲ್ಲೇ ತಯಾರಿಸಿದ ಬಾಳೆ ದಿಂಡಿನ ಅಡುಗೆಯಿಂದ ಇದನ್ನ ಕರಗಿಸಬಹುದು. ಬಾಳೆದಿಂಡಿನಲ್ಲಿ ಅನೇಕ ಖಾದ್ಯಗಳನ್ನ ಮಾಡಬಹುದು. ಬಾಳೆದಿಂಡಿನ ಪಲ್ಯ ಹೆಚ್ಚು ರುಚಿ ನೀಡುತ್ತೆ.  ಬಾಳೆದಿಂಡಿನ ಪಲ್ಯ ಬೇಕಾಗುವ ಪದಾರ್ಥಗಳು: ಬಾಳೆದಿಂಡು – 1(1 ಮೊಳ ಉದ್ದ), ಕಡಲೇಬೇಳೆ- 2 ಚಮಚ ತುರಿದ ತೆಂಗಿನಕಾಯಿ - 1 ಬಟ್ಟಲು ಹಸಿಮೆಣಸಿನ ಕಾಯಿ – 2 ಒಣಮೆಣಸಿನ ಕಾಯಿ – 2 ಬೆಲ್ಲ – ಸ್ವಲ್ಪ ಹುಣಸೆಹಣ್ಣಿನ ರಸ ಉಪ್ಪು - ರುಚಿಗೆ ಒಗ್ಗರಣೆಗೆ: ಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು ಮಾಡುವ ವಿಧಾನ:  ಕುಕ್ಕರ್ ಗೆ ಎಣ್ಣೆ, ಒಣಮೆಣಸಿನ ಕಾಯಿ, ಕಡಲೇಬೇಳೆ ಹಾಕಿ ನಂತರ ಹೆಚ್ಚಿಟ್ಟ ಬಾಳೆದಿಂಡು ಹಾಕಿ 2 ಕೂಗು ಕೂಗಿಸಿಕೊಳ್ಳಬೇಕು. ಇದನ್ನು ಇಳಿಸಿಕೊಂಡು ಆರಿಸಿಟ್ಟುಕೊಳ್ಳಬೇಕು. ಸಾಸಿವೆ, ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಹಾಕಿ ರುಬ್ಬಿಕೊಳ್ಳಬೇಕು. ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಕರಿಬೇವು, ಅರಿಶಿನ ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಇದಕ್ಕೆ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಹಾಕಿ, ಉಪ್ಪು, ಸ್ವಲ್ಪ ಬೆಲ್ಲ, ಹುಣಸೆಹಣ್ಣಿನ ರಸ ಹಾಕಿ. ಬಳಿಕ ರುಬ್ಬ...

ಸರಳ ತಯಾರಿಕೆಯ ಹರಿಕಾರ ಮೂಲಂಗಿ ಸಾಂಬಾರ್

Image
ದೇಶವಿದೇಶಗಳಲ್ಲಿ ಉಡುಪಿ ಹೋಟೆಲುಗಳು ಖ್ಯಾತಿ ಪಡೆಯಲು ಕಾರಣವೇನು ಎಂದು ತಿಳಿದಿದೆಯೇ? ಈ ಹೋಟೆಲಿನ ಸಾಂಬಾರ್ ಮತ್ತು ಮಸಾಲೆ ದೋಸೆ. ಇಡ್ಲಿ ಮತ್ತಿತರ ತಿಂಡಿಗಳೊಂದಿಗೆ ಸಾಂಬಾರ್ ಸೇರಿಸಿ ತಿಂದರೆ ಆ ರುಚಿಗೆ ಮನಸೋಲದವರೇ ಇಲ್ಲ. ಅದರಲ್ಲೂ ಉಡುಪಿ ಹೋಟೆಲಿನ ಮೂಲಂಗಿ ಸಾಂಬಾರ್ ರುಚಿಯಲ್ಲಿ ಅದ್ವಿತೀಯ. ಬಿಸಿಯಾಗಿದ್ದಾಗ ಅತಿ ರುಚಿಯಾಗಿರುವ ಈ ಸಾಂಬಾರ್ ಅನ್ನು ಈಗ ನೀವು ಮನೆಯಲ್ಲಿಯೇ ತಯಾರಿಸಬಹುದು. ಅಲ್ಲದೇ ಇದಕ್ಕಾಗಿ ಪೇಟೆಯ ಸಾಂಬಾರ್ ಪುಡಿ ಉಪಯೋಗಿಸುವ ಅಗತ್ಯವೇ ಇಲ್ಲ. ಇದನ್ನು ಅನ್ನದೊಂದಿಗೆ, ಇಡ್ಲಿ, ದೋಸೆ ಪೊಂಗಲ್ ಮೊದಲಾದವುಗಳೊಂದಿಗೆ ಸೇವಿಸಬಹುದು. ಈ ಸಾಂಬಾರ್‌ನಲ್ಲಿ ಉತ್ತಮ ಪ್ರಮಾಣದಲ್ಲಿರುವ ಪೊಟ್ಯಾಶಿಯಂ, ಫೋಲಿಕ್ ಆಮ್ಲ, ವಿಟಮಿನ್ ಬಿ6 ಸಹಿತ ವಿವಿಧ ವಿಟಮಿನ್‌ಗಳು, ಕ್ಯಾಲ್ಸಿಯಂ ಮೊದಲಾದ ಪೋಷಕಾಂಶಗಳು ಇದನ್ನೊಂದು ಆರೋಗ್ಯಕರ ಆಹಾರವಾಗಿಸಿದೆ. ಇಂದೇ ಈ ಸಾಂಬಾರ್ ತಯಾರಿಸಿ ಮನೆಯವರೆಲ್ಲರ ಮನಗೆಲ್ಲಲು ತಯಾರಾಗಿ. ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು  ಸಿದ್ಧತಾ ಸಮಯ: ಹದಿನೈದು ನಿಮಿಷಗಳು  ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು.  ರುಚಿಯಾಗಿರುತ್ತೆ ಈ ಮೂಲಂಗಿ ಪಾಲಾಕ್ ಪಲ್ಯ  ಅಗತ್ಯವಿರುವ ಸಾಮಾಗ್ರಿಗಳು  *ತೊಗರಿ ಬೇಳೆ - 1/3 ಕಪ್  *ಹುಣಸೆ ಹುಳಿಯ ನೀರು- 10 ಮಿಲೀ  *ಅರಿಶಿನ ಪುಡಿ: ½ ಚಿಕ್ಕಚಮಚ  *ಈರುಳ್ಳಿ - 1  *ಮೂಲಂಗಿ - 3 ...

ಅವರೆಕಾಯಿ ಬಟಾಣಿ ಪಲಾವ್

Image
ಬೇಕಾಗುವ ಸಾಮಾಗ್ರಿಗಳು: 1/2 ಕಪ್ ಅವರೆ 1/2 ಕಪ್ ಬಟಾಣಿ 1/2 ಚಮಚ ಜೀರಿಗೆ ಸ್ವಲ್ಪ ಇಂಗು 1 ಚಮಚ ಶುಂಠಿ-ಹಸಿರು ಮೆಣಸಿನ ಪೇಸ್ಟ್ 1/2 ಚಮಚ ಬೆಳ್ಳುಳ್ಳಿ ಪೇಸ್ಟ್ 2 ಈರುಳ್ಳಿ 2 ಟೊಮೇಟೊ 1/4 ಚಮಚ ಅರಶಿನ 1/2 ಚಮಚ ಮೆಣಸಿನ ಪುಡಿ ಕೊತ್ತಂಬರಿ ಪೌಡರ್ 1/4 ಕಪ್ ಮೊಸರು 2 ಚಮಚ ಕಡಲೆಹಿಟ್ಟು 2 ಚಮಚ ಹಾಲು 1/2 ಚಮಚ ಸಕ್ಕರೆ 2 ಚಮಚ ಎಣ್ಣೆ ವಿಧಾನ: ಅವರೆಯನ್ನು ಬಿಸಿಯಾದ ಉಪ್ಪು ನೀರಿನಲ್ಲಿ 20 ನಿಮಿಷಗಳ ಕಾಲ ಬೇಯಿಸಿ ಬದಿಗಿಟ್ಟುಕೊಳ್ಳಿ. ಎಣ್ಣೆಯನ್ನು ಕಾಯಿಸಿ ಜೀರಿಗೆಯನ್ನು ಸೇರಿಸಿ. ಅವು ಶಬ್ಧ ಮಾಡಿದಾಗ, ಇಂಗು, ಶುಂಠಿ-ಹಸಿರು ಮೆಣಸಿನ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿಯನ್ನು ಸೇರಿಸಿ. ಈರುಳ್ಳಿ ಬೆಂದ ನಂತರ ಟೊಮೇಟೊ, ಅರಶಿನ, ಮೆಣಸಿನ ಪುಡಿ, ಕೊತ್ತಂಬರಿ ಪೌಡರ್ ಸೇರಿಸಿ ಮತ್ತು 5-10 ನಿಮಿಷ ಕಡಿಮೆ ಬೆಂಕಿಯಲ್ಲಿ ಬೇಯಿಸಿ. ಮೊಸರು, ಕಡಲೆಹಿಟ್ಟು, ಹಾಲು, 3/4 ಕಪ್ ನೀರಿನ ಮಿಶ್ರಣ ಮಾಡಿ ಈರುಳ್ಳಿ-ಟೊಮೇಟೊದ ಗ್ರೇವಿಗೆ ಸೇರಿಸಿ. ಅವರೆ, ಬಟಾಣಿ, ಸಕ್ಕರೆ, ಉಪ್ಪು ಸೇರಿಸಿ 2 ನಿಮಿಷ ಕಲಸಿ. ಪಲ್ಯ ರೆಡಿ

ಊಟದ ರುಚಿಯನ್ನು ಹೆಚ್ಚಿಸುವ ಪಾಲಕ್ ಚಿಕನ್ ರೆಸಿಪಿ

Image
ಅರೆ ಇದೇನಿದು, ಪಾಲಕ್ ಚಿಕನ್ ರೆಸಿಪಿ! ಆಶ್ಚರ್ಯವಾಯಿತೇ? ಹೌದು, ಇಂದು ನಾವು ರುಚಿಕರವಾದ ಪಾಲಕ್ ಚಿಕನ್ ರೆಸಿಪಿ ತಯಾರಿಸುವ ಬಗೆಯನ್ನು ನಿಮಗೆ ಹೇಳಿಕೊಡುತ್ತಿದ್ದೇವೆ. ಈ ರುಚಿಕರವಾದ ಚಿಕನ್ ರೆಸಿಪಿಯಲ್ಲಿ ಎಲ್ಲವೂ ರುಚಿಕರವಾಗಿದ್ದರು, ಕೂಡ ಇದರಲ್ಲಿ ಸ್ವಲ್ಪ ಕಹಿ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ..! ಹಾಗಾಗಿ ಪದಾರ್ಥಗಳ ಜೊತೆಗೆ ಸ್ವಲ್ಪ ಜೇನು ತುಪ್ಪ ಅಥವಾ ಸಕ್ಕರೆಯನ್ನು ಸೇರಿಸುವ ಮೂಲಕ ಇದನ್ನು ನೀವು ನಿವಾರಿಸಬಹುದು, ಬನ್ನಿ ಅದಕ್ಕೆ ಬೇಕಾದ ಪದಾರ್ಥಗಳನ್ನು ಮತ್ತು ತಯಾರಿಸುವ ಬಗೆಯನ್ನು ತಿಳಿದುಕೊಂಡು ಬರೋಣ. ನಾಲ್ವರಿಗೆ ಬಡಿಸಬಹುದು  *ತಯಾರಿಕೆಗೆ ತಗುಲುವ ಸಮಯ : 15 ನಿಮಿಷಗಳು  *ಅಡುಗೆಗೆ ತಗುಲುವ ಸಮಯ : 20 ನಿಮಿಷಗಳು ಅಗತ್ಯವಾದ ಪದಾರ್ಥಗಳು   *ಕೋಳಿ ಮಾಂಸ - 1 ಕೆ.ಜಿ  *ಪಾಲಕ್ - 1 ಕಟ್ಟು  *ಈರುಳ್ಳಿ - 1 ಕತ್ತರಿಸಿದಂತಹುದು  *ಬೆಳ್ಳುಳ್ಳಿ - 4  *ಅಡುಗೆ ಎಣ್ಣೆ - 2 ಟೀ.ಚಮಚ  *ಅರಿಶಿನ - 1 ಟೀ.ಚಮಚ  *ಖಾರದ ಪುಡಿ - 1 ಟೀ.ಚಮಚ  *ಜೀರಿಗೆ - 1 ಟೀ.ಚಮಚ  *ಕೊತ್ತಂಬರಿ - 1 ಟೀ.ಚಮಚ  *ರುಚಿಗೆ ತಕ್ಕಷ್ಟು ಉಪ್ಪು ತಯಾರಿಸುವ ವಿಧಾನ  1. ಕೋಳಿ ಮಾಂಸವನ್ನು ತೊಳೆದು ಸ್ವಚ್ಛಗೊಳಿಸಿ. ತದನಂತರ ಕೋಳಿ ಮಾಂಸದ ಚರ್ಮವನ್ನು ಸಂಪೂರ್ಣವಾಗಿ ತೆಗೆದು, ಪಕ್ಕಕ್ಕಿಡಿ.  2. ಇನ್ನು ಪಾಲಕ್ ಸೊಪ್ಪನ್ನ...

ಚಿಕನ್ ರೋಸ್ಟ್

Image
ಬೇಕಾಗುವ ಸಾಮಾನುಗಳು: 1ಕೆಜಿ ಬಾಯ್ಲರ್ ಚಿಕನ್ ,ಮೇಲು ಚರ್ಮ ತೆಗೆದು ಇಡಿಯಾಗಿ ಇರಿಸಿದ್ದು,1 ಈರುಳ್ಳಿ , 1 ಬೆಳ್ಳುಳ್ಳಿ 1 ಟೀ ಚಮಚ ಮೆಣಸು 1 ಕಡ್ಡಿ ದಾಲ್ಚಿನ್ನಿ ,2 ಏಲಕ್ಕಿ ,1 ಟೀ ಚಮಚ ಸೋಯಾಸಾಸ್ 2, ಟೀ ಚಮಚ ಉಪ್ಪು, 2ಟೇಬಲ್ ಚಮಚ ಎಣ್ಣೆ (ಎಲ್ಲ ಮಸಾಲೆಗಳನ್ನು ಒಟ್ಟಾಗಿ ಅರೆದು ಚಿಕನ್‌ಗೆ ತಿಕ್ಕಿ. ತಯಾರಿಸುವ ವಿಧಾನ : ಫೋರ್ಕ್‌ನಿಂದ ಚಿಕನ್‌ನ ಎಲ್ಲ ಕಡೆ ತಿವಿಯಿರಿ.ಚಿಕನ್‌ದೊಳಗೆ ಏಅರೆದ ಮಸಾಲೆಗಳು, ಉಪ್ಪು ಮತ್ತು ಸೋಯಾಸಾಸ್‌ಗಳನ್ನು ತಿಕ್ಕಿರಿ, ಅರ್ಧ ಗಂಟೆ ನೆನೆಯಲು ಬಿಡಿ, 5 ನಿಮಿಷಗಳ ಕಾಲ ನೆನೆಹಾಕಿದ ಚಿಕನ್‌ನ್ನು 1/4 ಬಟ್ಟಲು ನೀರಿನೊಂದಿಗೆ ಒತ್ತಡದಲ್ಲಿ ಬೇಯಿಸಿ. ಚಿಕನ್ ಬೆಂದ ಬಳಿಕ, ಅಗಲ ಬಾಯಿ ಪಾತ್ರೆಯಲ್ಲಿ 2 ಟೇಬಲ್ ಚಮಚೆ ಎಣ್ಣೆ ಕಾಯಿಸಿ. ಚಿಕನ್‌ನ್ನು ಅದನ್ನು ಮೇಲೆ ಕೆಳಗೆ ಮಾಡಿ ಹುರಿಯಿರಿ.

ಬೆಳಗಾವಿ ಕುಂದಾ

Image
ಬೇಕಾಗುವ ಪದಾರ್ಥಗಳು     ಹಾಲು- 1 ಲೀಟರ್     ಮೊಸರು - 1 ಬಟ್ಟಲು     ಸಕ್ಕರೆ - ಬಟ್ಟಲು     ಗೋಡಂಬಿ - ಸ್ವಲ್ಪ     ಏಲಕ್ಕಿ ಪುಡಿ - ಸ್ವಲ್ಪ ಮಾಡುವ ವಿಧಾನ...     ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಹಾಲು ಹಾಕಿ. ಹಾಲು ಚೆನ್ನಾಗಿ ಕುದಿಯಲು ಬಿಡಬೇಕು. 1 ಲೀಟರ್ ಹಾಲು ಅರ್ಧ ಲೀಟರ್ ಆಗುವಷ್ಟು ಕೆಂಪಗೆ ಕಾಯುವಂತೆ ನೋಡಿಕೊಳ್ಳಬೇಕು.      ನಂತರ ಇದಕ್ಕೆ ಮೊಸರು ಹಾಕಿ ಚೆನ್ನಾಗಿ ಕುದಿಸಬೇಕು. ಆಗಾಗ ಕೈಯಾಡಿಸುತ್ತಿರಬೇಕು. ಹಾಲಿನೊಂದಿಗೆ ಚೆನ್ನಾಗಿ ಬೆರೆತು ಕೆಂಪಗಾಗುವಂತೆ ಕಾಯಿಸಬೇಕು.      ನಂತರ ಬಾಣಲೆ ತೆಗೆದುಕೊಂಡು ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಉರಿಯಬೇಕು. ಸಕ್ಕರೆ ಕರಗಿದ ಬಳಿಕ ಕಾದ ಹಾಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಬೇಕು.      ಕೊನೆಯದಾಗಿ ಗೋಡಂಬಿ ಹಾಕಿ ಅಲಂಕರಿಸಿದರೆ ರುಚಿಕರವಾದ ಬೆಳಗಾವಿ ಕುಂದಾ ಸವಿಯಲು ಸಿದ್ಧ. 

ಡ್ರೈ ಫ್ರೂಟ್ಸ್ ಪಲಾವ್: ಒಮ್ಮೆ ಮಾಡಿ, ಸವಿದು ನೋಡಿ!

Image
ಮಕ್ಕಳಿಗೆ ಹಸಿವನ್ನು ಹೆಚ್ಚು ಹೊತ್ತು ತಡೆದು ಹಿಡಿಯಲಿಕ್ಕಾಗುವುದಿಲ್ಲ. ಅಂತೆಯೇ ಸಂಜೆ ಆಟವಾಡಿ ಮನೆಯೊಳಕ್ಕೆ ಬರುತ್ತಿದ್ದಂತೆಯೇ 'ಅಮ್ಮಾ, ತಿನ್ನಲಿಕ್ಕೇನಾದರೂ ಕೊಡು' ಎಂಬ ಬೇಡಿಕೆಯನ್ನು ಹೊತ್ತೇ ಒಳಬರುತ್ತಾರೆ. ನಿಮ್ಮಿಂದ ಕೊಂಚ ತಡವಾಯಿತೋ, ತಟ್ಟೆಗಳಿಗೆ ಚಮಚದಿಂದ ಬಡಿಯಲು ತೊಡಗುತ್ತಾರೆ.  ಈ ಸಮಯದಲ್ಲಿ ಹೆಚ್ಚಿನ ತಾಯಂದಿರು ಸಿದ್ಧ ಆಹಾರಗಳನ್ನು ಅಥವಾ ಚಾಕಲೇಟು, ಬಿಸ್ಕತ್ ಮೊದಲಾದ ತಿಂಡಿಗಳನ್ನೂ ತಿನ್ನಿಸಿ ಮಕ್ಕಳನ್ನು ಸುಮ್ಮನಾಗಿಸುತ್ತಾರೆ. ಆದರೆ ಅಧಿಕ ಕ್ಯಾಲೋರಿಗಳನ್ನು ಹೊಂದಿರುವ ಈ ಆಹಾರಗಳು ಮಕ್ಕಳ ಸ್ಥೂಲಕಾಯಕ್ಕೆ ಮೂಲವಾಗಿವೆ. ಇದರ ಬದಲಿಗೆ ಪೌಷ್ಟಿಕವೂ, ಮಕ್ಕಳು ಇಷ್ಟಪಡುವಂತಹದ್ದೂ, ಶೀಘ್ರವೇ ಸಿದ್ಧವಾಗುವಂತಹದ್ದೂ ಆದ ತಿಂಡಿಯನ್ನು ಮಕ್ಕಳಿಗೆ ತಿನಿಸುವುದು ಆರೋಗ್ಯಕರವಾಗಿದೆ.  ಈ ಹೊತ್ತಿಗಾಗಿ ಡ್ರೈ ಫ್ರೂಟ್ಸ್ ಪಲಾವ್ ಅತ್ಯುತ್ತಮವಾದ ಆಯ್ಕೆಯಾಗಿದೆ.ಇದರಲ್ಲಿ ಉಪಯೋಗಿಸಲಾಗಿರುವುದು ಅನ್ನ, ಸುಲಭವಾದ ಮನೆಯಲ್ಲಿಯೇ ಲಭ್ಯವಿರುವ ಸಾಂಬಾರ ಪದಾರ್ಥಗಳು ಹಾಗೂ ಒಂದು ಹಿಡಿಯಷ್ಟು ನಿಮ್ಮಿಷ್ಟದ ಒಣಫಲಗಳು. ಒಣಫಲಗಳ ಸ್ವಾದ ಹೆಚ್ಚಿಸಲು ಸಾಂಬಾರ ಪದಾರ್ಥಗಳ ಪ್ರಮಾಣವನ್ನು ಕೊಂಚ ಕಡಿಮೆ ಮಾಡಲಾಗಿದೆ. ಈ ಬಟಾಣಿ ಪಲಾವ್ ಮಾಡುವುದು ಬಲು ಸುಲಭ ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ, ಹಿರಿಯರಿಗೂ ಅಚ್ಚುಮೆಚ್ಚಿನದ್ದಾಗುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಈ ಪಲಾವ್ ಅನ್ನು ಕೊಂಚ ಹೆಚ್ಚು ಹೊತ್ತು ಬಿಸಿಯಾಗಲು ಇರಿಸಿದರೆ ಇನ...

ಆಹಾ ಚನ್ನಾ ಮಸಾಲಾ ಕರಿ, ಬೊಂಬಾಟ್ ರುಚಿ

Image
ಉದ್ಯೋಗಸ್ಥ ಮಹಿಳೆಯರ ಗಮನಕ್ಕೆ: ನಿಮಗೆ ಬೆಳಗ್ಗಿನ ಉಪಾಹಾರಕ್ಕೆ ಅಥವಾ ರಾತ್ರಿಯ ಊಟಕ್ಕೆ ಚಪಾತಿ, ರೊಟ್ಟಿಯ ಜೊತೆ ನಂಜಿಕೊಳ್ಳಲು ಕಡಿಮೆ ಸಮಯದಲ್ಲಿ ಮತ್ತು ರುಚಿಕರವೂ ಆಗಿರುವ ಯಾವುದಾದರೂ ಹೊಸರುಚಿ ಬೇಕೇ? ಹಾಗಿದ್ದರೆ ಚನಾ ಮಸಾಲಾ ಕರಿ ನಿಮಗೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಉದ್ಯೋಗಸ್ಥ ಮಹಿಳೆಯರ ನಿತ್ಯದ ಚಿಂತೆಯ ವಿಷಯವಾಗಿರುವ "ಇವತ್ತೇನು ಅಡುಗೆ ಮಾಡಲಿ" ಎಂಬ ಪ್ರಶ್ನೆಗೆ ಚನ್ನಾ ಮಸಾಲಾ ಕರಿ ಒಂದು ಸಮರ್ಪಕ ಉತ್ತರವಾಗಲಿದೆ. ಏಕೆಂದರೆ ಅತ್ತ ಔದ್ಯೋಗಿಕ, ಇತ್ತ ಕೌಟುಂಬಿಕ ಜೀವನವನ್ನು ನಿಭಾಯಿಸುತ್ತಿರುವ ನಿಮಗೆ ಸಮಯದ ಮೌಲ್ಯ ಏನೆಂದು ಇತರರಿಗಿಂತ ಹೆಚ್ಚು ಗೊತ್ತು.  ಹೆಸರೇ ಸೂಚಿಸುವಂತೆ ಇದರ ಮುಖ್ಯ ಸಾಮಾಗ್ರಿ ಎಂದರೆ ಚನ್ನಾ ಅಥವಾ ಕಡ್ಲೆ ಕಾಳು. ಈ ರೆಸಿಪಿಗೆ ಕಪ್ಪು ಕಡಲೆಕಾಳಿಗಿಂತ ಬಿಳಿಯ ಕಾಬೂಲ್ ಕಡಲೆಯೇ ಉತ್ತಮ. ಇದು ಕಡಿಮೆ ಸಮಯದಲ್ಲಿ ತಯಾರಾಗುವುದಾದರೂ ರುಚಿಗೆ ಮಾತ್ರ ಯಾವುದೇ ದುಬಾರಿ ಹೋಟೆಲಿನ ಮೆನು ಐಟಂಗಿಂತ ಕಡಿಮೆಯಿಲ್ಲ. ಆದರೆ ಒಂದೇ ಒಂದು ಹೆಚ್ಚುವರಿ ಕೆಲಸವೆಂದರೆ ರಾತ್ರಿ ಮಲಗುವ ಮುನ್ನ ಕಡಲೆಕಾಳನ್ನು ನೀರಿನಲ್ಲಿ ನೆನೆಸಿಡುವುದು. ಬೆಳಿಗ್ಗೆ ಇದನ್ನು ಕುಕ್ಕರಿನಲ್ಲಿ ಬೇಯಿಸುವುದು. ಜಾಣತನವೆಂದರೆ ರಾತ್ರಿ ಕುಕ್ಕರಿನಲ್ಲಿಯೇ ನೆನೆಸಿಟ್ಟು ಒಲೆಯ ಮೇಲಿಡುವುದು. ಬೆಳಿಗ್ಗೆದ್ದ ತಕ್ಷಣ ಒಲೆ ಉರಿಸಿ ನಿಮ್ಮ ಇತರ ಕೆಲಸಗಳ ನಡುವೆ ಐದಾರು ಸೀಟಿ ಬಂದರೆ ಮುಕ್ಕಾಲು ಕೆಲಸ ಮುಗಿದಂತೆಯೇ ಸರಿ. ಇನ್ನುಳಿದಂತೆ ಹೆಚ್ಚಿನ ಶ...

ಕಿಡ್ನಿಯಲ್ಲಿ ಕಲ್ಲು ಕರಗಿಸಬೇಕಾ… ಹಾಗಿದ್ರೆ ಹೀಗೆ ಮಾಡಿ…

Image
ಕಿಡ್ನಿ ಸ್ಟೋನ್…  ಪ್ರಸ್ತುತ ಯಾಂತ್ರಿಕ ಜೀವನದಲ್ಲಿ ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಶೇ. 10-15ರಷ್ಟು ಜನ ಪ್ರಪಂಚದಲ್ಲಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾದಲ್ಲಿ ಕಿಡ್ನಿ ಸ್ಟೋನ್ ಗೆ ಮೊದಲ ಹಂತದಲ್ಲೇ ಚಿಕಿತ್ಸೆ ಪಡೆದು ಮನೆಯಲ್ಲೇ ತಯಾರಿಸಿದ ಬಾಳೆ ದಿಂಡಿನ ಅಡುಗೆಯಿಂದ ಇದನ್ನ ಕರಗಿಸಬಹುದು. ಬಾಳೆದಿಂಡಿನಲ್ಲಿ ಅನೇಕ ಖಾದ್ಯಗಳನ್ನ ಮಾಡಬಹುದು. ಬಾಳೆದಿಂಡಿನ ಪಲ್ಯ ಹೆಚ್ಚು ರುಚಿ ನೀಡುತ್ತೆ.  ಬಾಳೆದಿಂಡಿನ ಪಲ್ಯ   ಬೇಕಾಗುವ ಪದಾರ್ಥಗಳು: ಬಾಳೆದಿಂಡು – 1(1 ಮೊಳ ಉದ್ದ), ಕಡಲೇಬೇಳೆ- 2 ಚಮಚ ತುರಿದ ತೆಂಗಿನಕಾಯಿ - 1 ಬಟ್ಟಲು ಹಸಿಮೆಣಸಿನ ಕಾಯಿ – 2 ಒಣಮೆಣಸಿನ ಕಾಯಿ – 2 ಬೆಲ್ಲ – ಸ್ವಲ್ಪ ಹುಣಸೆಹಣ್ಣಿನ ರಸ ಉಪ್ಪು - ರುಚಿಗೆ ಒಗ್ಗರಣೆಗೆ: ಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು   ಮಾಡುವ ವಿಧಾನ:  ಕುಕ್ಕರ್ ಗೆ ಎಣ್ಣೆ, ಒಣಮೆಣಸಿನ ಕಾಯಿ, ಕಡಲೇಬೇಳೆ ಹಾಕಿ ನಂತರ ಹೆಚ್ಚಿಟ್ಟ ಬಾಳೆದಿಂಡು ಹಾಕಿ 2 ಕೂಗು ಕೂಗಿಸಿಕೊಳ್ಳಬೇಕು. ಇದನ್ನು ಇಳಿಸಿಕೊಂಡು ಆರಿಸಿಟ್ಟುಕೊಳ್ಳಬೇಕು. ಸಾಸಿವೆ, ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಹಾಕಿ ರುಬ್ಬಿಕೊಳ್ಳಬೇಕು. ಒಂದು ಪ್ಯಾನ್ ಗೆ ಎಣ್ಣೆ, ಸಾಸಿವೆ, ಕರಿಬೇವು, ಅರಿಶಿನ ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಇದಕ್ಕೆ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಹಾಕಿ, ಉಪ್ಪು, ಸ್ವಲ್ಪ ಬೆಲ್ಲ, ಹುಣಸೆಹಣ್ಣಿನ ರಸ ಹಾಕಿ. ಬಳಿಕ ರುಬ...

ಬೊಂಬಾಟ್ ರುಚಿ: ಘಮ್ಮೆನ್ನುವ ಸೌತೆಕಾಯಿ ಸಾಂಬಾರ್

Image
ದೇಶ ವಿದೇಶಗಳಲ್ಲಿ ಉಡುಪಿ ಹೋಟೆಲುಗಳು ಖ್ಯಾತಿ ಪಡೆಯಲು ಕಾರಣವೇನು ಎಂದು ತಿಳಿದಿದೆಯೇ? ಈ ಹೋಟೆಲಿನ ಸಾಂಬಾರ್ ಮತ್ತು ಮಸಾಲೆ ದೋಸೆ. ಇಡ್ಲಿ ಮತ್ತಿತರ ತಿಂಡಿಗಳೊಂದಿಗೆ ಸಾಂಬಾರ್ ಸೇರಿಸಿ ತಿಂದರೆ ಆ ರುಚಿಗೆ ಮನಸೋಲದವರೇ ಇಲ್ಲ. ಅದರಲ್ಲೂ ಉಡುಪಿ ಹೋಟೆಲಿನ ಸೌತೆಕಾಯಿ ಸಾಂಬರ್ ಹಾಗೂ ಮೂಲಂಗಿ ಸಾಂಬಾರ್‌ನ ಹೆಸರು ಕೇಳಿದರೆನೇ ಬಾಯಲ್ಲಿ ನೀರೂರುತ್ತದೆ, ಅಷ್ಟೊಂದು ಸ್ವಾದಭರಿತವಾಗಿರುತ್ತದೆ ಈಗ ನಿಮಗೂ, ಈ ರೀತಿಯ ಸಾಂಬರ್ ಅನ್ನು ತಯಾರಿಸಲು ಆಸೆಯಾಗುತ್ತಿರಬಹುದು  ಅಲ್ಲವೇ? ಅದಕ್ಕೆಂದೇ ಬೋಲ್ಡ್ ಸ್ಕೈ ಇಂದು ರುಚಿ ರುಚಿಯಾಗಿರುವ ಸೌತೆಕಾಯಿ ಸಾಂಬಾರ್ ಅನ್ನು ಪರಿಚಯಿಸುತ್ತಿದ್ದು, ಸರಳವಾಗಿ ನೀವೂ ಮನೆಯಲ್ಲಿಯೇ ಮಾಡಬಹುದು. ಅಷ್ಟೇ ಏಕೆ, ಇದಕ್ಕಾಗಿ ಪೇಟೆಯ ಸಾಂಬಾರ್ ಪುಡಿ ಉಪಯೋಗಿಸುವ ಅಗತ್ಯವೇ ಇಲ್ಲ. ಇದನ್ನು ಅನ್ನದೊಂದಿಗೆ, ಇಡ್ಲಿ, ದೋಸೆ ಮೊದಲಾದವುಗಳೊಂದಿಗೆ ಸೇವಿಸಬಹುದು. ಇನ್ನೇಕೆ ತಡ? ಯಾವಾಗಲೂ ಒಂದೇ ಬಗೆಯ ಸಾಂಬಾರ್ ಸೇವಿಸುವುದಕ್ಕಿಂತ ಇದರಲ್ಲೇ ಹೊಸ ಪ್ರಯೋಗವನ್ನು ಮಾಡಿ ನಿಮ್ಮ ಮನೆಯವರಿಂದ ಶಹಬ್ಬಾಷ್ ಗಿರಿ ಪಡೆದುಕೊಳ್ಳುವ ಸುವರ್ಣವಕಾಶವನ್ನು ಮಿಸ್ ಮಾಡಿಕೊಳ್ಳದಿರಿ... ಮುಂದೆ ಓದಿ ಪ್ರಮಾಣ: 4  *ಸಿದ್ಧತಾ ಸಮಯ: 15 ನಿಮಿಷಗಳು  *ಅಡುಗೆಗೆ ಬೇಕಾದ ಸಮಯ: 25 ನಿಮಿಷಗಳು  ಸಾಮಾಗ್ರಿಗಳು  *ಮಧ್ಯಮ ಗಾತ್ರದ ಸೌತೆಕಾಯಿ - 1 (ಸಣ್ಣದಾಗಿ ತುಂಡುಮಾಡಿಕೊಂಡಿದ್ದು)  *ಬೇಳೆ - 1 ಕಪ್...

ಮೊಟ್ಟೆ ಪಕೋಡ ಕರಿ ಸ್ಪೆಷಲ್ ರುಚಿ

Image
ಮನೆಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಮೊಟ್ಟೆ ಇಷ್ಟವಾಗುತ್ತದೆ. ಅದನ್ನು ಬೇಯಿಸಿ ಇಲ್ಲವೆ ಆಮ್ಲೆಟ್ ಮಾಡಿಕೊಡಿ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ನಾವು ಈವತ್ತು ಮೊಟ್ಟೆಯಿಂದ ಹೊಸ ರುಚಿಯನ್ನು ಮಾಡಲು ಟ್ರೈ ಮಾಡೋಣ. ಮೊಟ್ಟೆಯನ್ನು ಆಲೂಗಡ್ಡೆ ಮತ್ತು ಕಡಲೆಹಿಟ್ಟಿನೊಂದಿಗೆ ಬೆರೆಸಿ ಇದನ್ನು ಮಾಡಲಾಗುತ್ತೆ.  ಇದು ಮೃದುವಾಗಿದ್ದು ತಿನ್ನಲು ರುಚಿಯಾಗಿರುತ್ತೆ. ಪಕೋಡಗಳನ್ನು ಮಾಡಿದ ಮೇಲೆ ಇದನ್ನು ಮಸಾಲೆಭರಿತ ಕರಿಯೊಳಗೆ ಹಾಕಲಾಗುವುದು. ಇದರಿಂದ ಇದರ ರುಚಿ ಮತ್ತಷ್ಟು ಹೆಚ್ಚುತ್ತದೆ. ಬೇಕಾಗುವ ಸಾಮಗ್ರಿಗಳು: (ಪಕೋಡ ಮಾಡಲು)  1. ಮೊಟ್ಟೆ- 2  2. ಆಲೂಗಡ್ಡೆ- 2 (ಬೇಯಿಸಿ ಹಿಸುಕಿಟ್ಟುಕೊಳ್ಳಿ)  3. ಕಡಲೆಹಿಟ್ಟು- 2 ಟೀಚಮಚ  4. ಈರುಳ್ಳಿ- 1 (ಕತ್ತರಿಸಿಕೊಳ್ಳಿ)  5. ಉಪ್ಪು- ರುಚಿಗೆ ತಕ್ಕಷ್ಟು  6. ಎಣ್ಣೆ ಕರಿಗೆ  ಬೇಕಾಗುವ ಸಾಮಗ್ರಿಗಳು:  1. ಈರುಳ್ಳಿ ಪೇಸ್ಟ- 2 ಟೀಚಮಚ  2. ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀಚಮಚ  3. ಟೊಮೊಟೊ ರಸ- 2 ಟೀಚಮಚ  4. ಜೀರಿಗೆ- 1 ಟೀಚಮಚ  5. ಅರಿಶಿಣ ಪುಡಿ- 1 ಟೀಚಮಚ  6. ಅಚ್ಚ ಖಾರದ ಪುಡಿ- 1 ಟೀಚಮಚ  7. ಜೀರಿಗೆ ಪುಡಿ- 1 ಟೀಚಮಚ  8. ಧನಿಯ ಪುಡಿ- 1 ಟೀಚಮಚ  9. ಗರಂ ಮಸಾಲ ಪುಡಿ- 1/2 ಟೀಚಮಚ  10. ಉಪ್ಪು ರುಚಿಗೆ ...

ರುಚಿ ರುಚಿಯಾದ ಸ್ಪೈಸಿ ಚಿಕನ್ ಫ್ರೈ ರೆಸಿಪಿ!

Image
ಭಾರತೀಯರು ಖಾದ್ಯ ಪ್ರಿಯರು. ಅವರಿಗೆ ಋತುಮಾನ ದೊಡ್ಡ ಸಮಸ್ಯೆಯಲ್ಲ. ಯಾವ ಕಾಲದಲ್ಲೂ ಎಲ್ಲಾ ಆಹಾರವನ್ನು ಸೇವಿಸುವ ಮನಸ್ಸು ಅವರಿಗಿದೆ. ಅದರಲ್ಲೂ ಖಾರದ ಆಹಾರ ಎಲ್ಲಾ ಕಾಲದಲ್ಲೂ ಅವರು ಸೇವಿಸುತ್ತಾರೆ.  ಇಂದಿನ ಈ ಲೇಖನದಲ್ಲಿ ನಾವು ನೀಡಿರುವ ಈ ಸ್ಪೈಸಿ ಚಿಕನ್ ಫ್ರೈ ಎಲ್ಲಾ ಸೀಸನ್‌ಗೂ ಒಗ್ಗುವಂಥದ್ದು. ಇಂದಿನ ಲೇಖನ ನಿಮಗೆ ಚಿಕನ್ ಫ್ರೈ ಮಾಡುವ ವಿಧಾನವನ್ನು ವೀಡಿಯೋದಲ್ಲಿ ಪ್ರದರ್ಶಿಸುತ್ತದೆ ಇದರಿಂದ ವೀಡಿಯೋ ನೋಡಿಕೊಂಡು ಈ ಸರಳವಾದ ಚಿಕನ್ ಖಾದ್ಯವನ್ನು ನಿಮಗೆ ತಯಾರಿಸಬಹುದು.  ಹಂತ ಹಂತವಾಗಿ ನಾವು ವೀಡಿಯೋದ ಮೂಲಕ ನೀಡಿರುವ ರೆಸಿಪಿ ವಿಧಾನಗಳನ್ನು ಮನನ ಮಾಡಿಕೊಳ್ಳಿ ಮತ್ತು ಸರಳ ಚಿಕನ್ ಫ್ರೈ ರೆಸಿಪಿ ತಯಾರಿಸಿ ಮನೆಯವರ ಮನಗೆಲ್ಲಿ. ಪ್ರಮಾಣ: 2  ಸಿದ್ಧತಾ ಸಮಯ: 2 ಗಂಟೆಗಳು  ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು  ಸಾಮಾಗ್ರಿಗಳು:  .ಚಿಕನ್ - 250 ಗ್ರಾಮ್ಸ್  .ಮೊಸರು - 1ಕಪ್  .ಕೋರ್ನ್ ಫ್ಲೋರ್ - 1 ಸ್ಫೂನ್  .ಮೆಣಸಿನ ಹುಡಿ - 1 ಸ್ಪೂನ್  .ಅರಶಿನ - 3/4 ಸ್ಪೂನ್  .ಕಾಳುಮೆಣಸಿನ ಹುಡಿ - 3/4 ಸ್ಪೂನ್  .ಮೊಟ್ಟೆ - 1  .ಲಿಂಬೆ ರಸ - 2 ಸ್ಪೂನ್  .ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್  .ಉಪ್ಪು - ರುಚಿಗೆ ತಕ್ಕಷ್ಟು  .ಎಣ್ಣೆ - 2 ಸ್ಪೂನ್ ಮಾಡುವ ವಿಧಾನ:  1.ಮೊಸರಿಗ...

ಸ್ವಾದದ ಘಮಲನ್ನು ಹೆಚ್ಚಿಸುವ ಮಶ್ರೂಮ್ ರೆಡ್ ಪೆಪ್ಪರ್ ರೆಸಿಪಿ

Image
ಸಸ್ಯಾಹಾರಿಗಳ ಅಚ್ಚುಮೆಚ್ಚಿನ ತರಕಾರಿ ವಸ್ತುಗಳ ಪೈಕಿ ಅಣಬೆಯೂ ಸಹ ಒ೦ದು. ಈ ಆರೋಗ್ಯದಾಯಕ ತರಕಾರಿಯು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ, ನಿಮ್ಮ ಶರೀರದ ಕ್ಯಾಲ್ಸಿಯ೦ನ ಮಟ್ಟವನ್ನು ಹೆಚ್ಚಿಸುತ್ತದೆ, ಹಾಗೂ ಜೊತೆಗೆ ನಿಮ್ಮ ಶರೀರಕ್ಕೆ ಅಗಾಧ ಪ್ರಮಾಣದಲ್ಲಿ ಚೈತನ್ಯವನ್ನೊದಗಿಸುತ್ತದೆ.  ಅಣಬೆಯೆ೦ಬ ಈ ತರಕಾರಿಯಲ್ಲಿ ಅನೇಕ ಆರೋಗ್ಯಕಾರಿ ಪ್ರಯೋಜನಗಳಿರುವುದರಿ೦ದ, ನಾವಿಲ್ಲಿ ಈಗ ಪ್ರಸ್ತುತಪಡಿಸಿರುವ ಈ ಮಶ್ರೂಮ್ ರೆಸಿಪಿಯನ್ನು ಅಗತ್ಯ ಪ್ರಯತ್ನಿಸಿ ನೋಡಬೇಕು. ಈ ಮಶ್ರೂಮ್ ರೆಡ್ ಪೆಪ್ಪರ್ ರೆಸಿಪಿಯನ್ನು ಅಣಿಗೊಳಿಸುವುದು ಸುಲಭವಾಗಿದ್ದು, ಇದರ ತಯಾರಿಕೆಗೆ ಅಧಿಕ ಸಮಯದ ಅವಶ್ಯಕತೆಯೂ ಇಲ್ಲ. ಖಾರ ಸ್ವಾದವುಳ್ಳ ಈ ಮಶ್ರೂಮ್ ರೆಸಿಪಿಯನ್ನು ತಯಾರಿಸಲು ನಿಮಗೆ ಒ೦ದು ಮುಷ್ಟಿಯಷ್ಟು ಭಾರತೀಯ ಸಾ೦ಬಾರ ಪದಾರ್ಥಗಳ ಅವಶ್ಯಕತೆ ಇದೆ.  ಈ ರೆಸಿಪಿಯ ತಯಾರಿಕೆಯಲ್ಲಿ ಕೆ೦ಪು ಮೆಣಸು ಹಾಗೂ ಕಾಳು ಮೆಣಸುಗಳನ್ನೂ ಬಳಸಿಕೊಳ್ಳುವುದರಿ೦ದ, ಈ ತಿನಿಸು ಬಹಳ ಖಾರವಾಗಿರುತ್ತದೆ. ಹೀಗಾಗಿ, ಖಾರಪ್ರಿಯರು ಈ ತಿನಿಸನ್ನು ಆನ೦ದಿಸಲು ಮರೆಯಬೇಡಿರಿ..!! ಬಾಯಿಗೆ ರುಚಿ ದೇಹಕ್ಕೆ ಹಿತ ಅಣಬೆ ಖಾದ್ಯ ಪ್ರಮಾಣ: ಮೂವರಿಗಾಗುವಷ್ಟು  ತಯಾರಿಸಲು ಬೇಕಾಗುವ ಸಮಯ: ಹದಿನಾರು ನಿಮಿಷಗಳು  ತಯಾರಿಕೆಗೆ ತಗಲುವ ಸಮಯ: ಇಪ್ಪತ್ತು ನಿಮಿಷಗಳು  ಸಾಮಾಗ್ರಿ:  *ಮಶ್ರೂಮ್ - 250 ಗ್ರಾಂ  *ಈರುಳ್ಳಿ - 1 (ಕತ್ತರಿಸಿರುವ)...

ಅವರೆಕಾಯಿ ಬಟಾಣಿ ಪಲಾವ್

Image
  ಬೇಕಾಗುವ ಸಾಮಾಗ್ರಿಗಳು: 1/2 ಕಪ್ ಅವರೆ 1/2 ಕಪ್ ಬಟಾಣಿ 1/2 ಚಮಚ ಜೀರಿಗೆ ಸ್ವಲ್ಪ ಇಂಗು 1 ಚಮಚ ಶುಂಠಿ-ಹಸಿರು ಮೆಣಸಿನ ಪೇಸ್ಟ್ 1/2 ಚಮಚ ಬೆಳ್ಳುಳ್ಳಿ ಪೇಸ್ಟ್ 2 ಈರುಳ್ಳಿ 2 ಟೊಮೇಟೊ 1/4 ಚಮಚ ಅರಶಿನ 1/2 ಚಮಚ ಮೆಣಸಿನ ಪುಡಿ ಕೊತ್ತಂಬರಿ ಪೌಡರ್ 1/4 ಕಪ್ ಮೊಸರು 2 ಚಮಚ ಕಡಲೆಹಿಟ್ಟು 2 ಚಮಚ ಹಾಲು 1/2 ಚಮಚ ಸಕ್ಕರೆ 2 ಚಮಚ ಎಣ್ಣೆ ವಿಧಾನ: ಅವರೆಯನ್ನು ಬಿಸಿಯಾದ ಉಪ್ಪು ನೀರಿನಲ್ಲಿ 20 ನಿಮಿಷಗಳ ಕಾಲ ಬೇಯಿಸಿ ಬದಿಗಿಟ್ಟುಕೊಳ್ಳಿ. ಎಣ್ಣೆಯನ್ನು ಕಾಯಿಸಿ ಜೀರಿಗೆಯನ್ನು ಸೇರಿಸಿ. ಅವು ಶಬ್ಧ ಮಾಡಿದಾಗ, ಇಂಗು, ಶುಂಠಿ-ಹಸಿರು ಮೆಣಸಿನ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿಯನ್ನು ಸೇರಿಸಿ. ಈರುಳ್ಳಿ ಬೆಂದ ನಂತರ ಟೊಮೇಟೊ, ಅರಶಿನ, ಮೆಣಸಿನ ಪುಡಿ, ಕೊತ್ತಂಬರಿ ಪೌಡರ್ ಸೇರಿಸಿ ಮತ್ತು 5-10 ನಿಮಿಷ ಕಡಿಮೆ ಬೆಂಕಿಯಲ್ಲಿ ಬೇಯಿಸಿ. ಮೊಸರು, ಕಡಲೆಹಿಟ್ಟು, ಹಾಲು, 3/4 ಕಪ್ ನೀರಿನ ಮಿಶ್ರಣ ಮಾಡಿ ಈರುಳ್ಳಿ-ಟೊಮೇಟೊದ ಗ್ರೇವಿಗೆ ಸೇರಿಸಿ. ಅವರೆ, ಬಟಾಣಿ, ಸಕ್ಕರೆ, ಉಪ್ಪು ಸೇರಿಸಿ 2 ನಿಮಿಷ ಕಲಸಿ. ಪಲ್ಯ ರೆಡಿ