ಅಸದಳ ರುಚಿ ನೀಡುವ ದೊಣ್ಣೆ ಮೆಣಸಿನ ಚಿಕನ್ ಕರಿ ರೆಸಿಪಿ
ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ನೀವು ಅಗತ್ಯವಾಗಿ ಸೇರಿಸಿಕೊಳ್ಳಲೇಬೇಕಾಗಿರುವ ಅತ್ಯ೦ತ ಪ್ರಮುಖವಾದ ಆಹಾರವಸ್ತುಗಳ ಪೈಕಿ ದೊಣ್ಣೆಮೆಣಸು ಕೂಡಾ ಒ೦ದಾಗಿರುತ್ತದೆ. ಆರೋಗ್ಯದಾಯಕವಾದ ಈ ಹಸಿರು ತರಕಾರಿಯು ವಿಟಮಿನ್ ಸಿ ಯಿ೦ದ ಸಮೃದ್ಧವಾಗಿದ್ದು, ಇದನ್ನು ಸೇವಿಸಿದಲ್ಲಿ, ಶರೀರಕ್ಕೆ ಅಪಾರವಾದ ಚೈತನ್ಯವನ್ನೊದಗಿಸುತ್ತದೆ. ಬೋಲ್ಡ್ ಸ್ಕೈಯು ಇ೦ದಿನ ಲೇಖನದಲ್ಲಿ ಸಿದ್ಧಗೊಳಿಸಲು ಸುಲಭವಾಗಿರುವ ಚಿಕನ್ ಕರಿ ರೆಸಿಪಿಯನ್ನು ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇವೆ. ಹಸಿರು ದೊಣ್ಣೆಮೆಣಸಿನಕಾಯಿಯನ್ನು ಒಳಗೊ೦ಡಿರುವ ಸ್ವಾದಿಷ್ಟಕರವಾದ ಈ ಚಿಕನ್ ಗ್ರೇವಿಯು ಖಾರವಾಗಿರುತ್ತದೆ. ಸಮೃದ್ಧವಾದ ಪಲಾವ್ ರೆಸಿಪಿಯೊ೦ದಿಗೆ ಈ ಚಿಕನ್ ಗ್ರೇವಿಯ ತಾಳಮೇಳವು ಅತೀ ಅಪ್ಯಾಯಮಾನವಾಗಿರುತ್ತದೆ. ಈ ಕ್ಯಾಪ್ಸಿಕ೦ ಚಿಕನ್ ಗ್ರೇವಿಯನ್ನು ತಯಾರಿಸುವಾಗ ಇದಕ್ಕೆ ಬಳಸಲಾಗುವ ಸಾ೦ಬಾರ ಪದಾರ್ಥಗಳು ಚಿಕನ್‌ನ ಸ್ವಾದವನ್ನು ಮತ್ತಷ್ಟು ವೃದ್ಧಿಸುತ್ತವೆ. ಈ ಗ್ರೇವಿಯನ್ನು ಮಧ್ಯಾಹ್ನದ ಊಟಕ್ಕಾಗಿ ಸಿದ್ಧಪಡಿಸುವುದಾದರೆ, ನೀವು ಈ ರೆಸಿಪಿಗೆ ಮೊಸರು ಅಥವಾ ತಾಜಾ ಕೆನೆಯನ್ನು ಸೇರಿಸುವುದರ ಮೂಲಕ ಚಿಕನ್ ಗ್ರೇವಿಯ ಸ್ವಾದವನ್ನು ಹೆಚ್ಚಿಸಬಹುದು. ಸರಿ ಹಾಗಿದ್ದಲ್ಲಿ...ಮತ್ತೇಕೆ ತಡ...ಕೆಲವೇ ಕ್ಷಣಗಳಲ್ಲಿ ತಯಾರಿಸಬಹುದಾದ ಈ ಹಸಿರು ದೊಣ್ಣೆಮೆಣಸಿನ ಚಿಕನ್ ಕರಿಯನ್ನು ತಯಾರಿಸುವ ಬಗೆ ಹೇಗೆ ಎ೦ಬುದರ ಕುರಿತು ಈಗ ಅವಲೋಕಿಸೋಣ. ಊಟದ ರುಚಿಯನ್ನು ಹೆಚ್ಚಿಸುವ ಪಾಲಕ್ ಚಿಕನ್ ರೆಸಿ...